ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಷಕರನ್ನು ಗೌರವಿಸಲು ಸಲಹೆ

ರೋಣದಲ್ಲಿ ಸರ್ವಧರ್ಮ ಸಾಮೂಹಿಕ ವಿವಾಹ; ಕೆ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಪಾಟೀಲ ಭಾಗಿ
Last Updated 18 ಫೆಬ್ರುವರಿ 2017, 10:14 IST
ಅಕ್ಷರ ಗಾತ್ರ
ರೋಣ: ನವಜೀವನಕ್ಕೆ ಕಾಲಿಡುವ ದಂಪತಿ ಪರಸ್ಪರ ಕಷ್ಟ– ಸುಖಗಳನ್ನು ಅರ್ಥ ಮಾಡಿಕೊಂಡು ಪೋಷಕರನ್ನು ಗೌರವಿಸಿ, ಜೋಪಾನವಾಗಿ ನೋಡಿಕೊಳ್ಳಬೇಕು. ಆಗ ಸಾಮೂಹಿಕ ವಿವಾಹ ಪರಿಕಲ್ಪನೆ ಸಾರ್ಥಕತೆ ಪಡೆಯುತ್ತದೆ. ಎಂದು ಧಾರವಾಡ ಕೆ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಐ.ಎಸ್.ಪಾಟೀಲ ಹೇಳಿದರು.
 
ಪಟ್ಟಣದ ಹೊಸ ಸಂತೆ ಬಜಾರ ಆವರಣದಲ್ಲಿ ತಲಾಬಕಟ್ಟಾ ಮಕಾನ ಕಮೀಟಿ ಹಾಗೂ ಆಝಾದ ಯವಕ ಸಂಘದ ಆಶ್ರಯದಲ್ಲಿ ಹಜರತ್ ಮಹ ಮ್ಮದ್ ಮುಸ್ತಫಾ ಜನ್ಮದಿನದ ಅಂಗ ವಾಗಿ ನಡೆದ ಸರ್ವಧರ್ಮ ಸಾಮೂಹಿಕ ವಿವಾಹ  ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 
ಶಿರಹಟ್ಟಿ ಸಂಸ್ಥಾನಮಠದ ಫಕೀರ ಸಿದ್ದರಾಮ ಸ್ವಾಮೀಜಿ ಆಶೀರ್ವಚನ ನೀಡಿ ಬರಗಾಲದ ಛಾಯೆ ಇರುವಾಗ ಸಾಮೂಹಿಕ ವಿವಾಹದಂತಹ ಸಮಾಜ ಮುಖಿ ಕಾರ್ಯ ಆಯೋಜಿಸಿರುವುದು ಒಳ್ಳೆಯ ಸಂಗತಿ ಎಂದು ಹೇಳಿದರು.
 
ಪುರಸಭೆ ಅಧ್ಯಕ್ಷ ಶಫೀಕ್ ಮೂಗ ನೂರ ಹಾಗೂ ತೆಂಗುನಾರು ಅಭಿವೃದ್ಧಿ ನಿಗಮದ ನಿರ್ದೇಶಕ ವಿ.ಬಿ. ಸೋಮನ ಕಟ್ಟಿಮಠ ಬಸವಂತಪ್ಪ ತಳವಾರ ಮಾತನಾಡಿದರು.
 
ಕಾಂಗ್ರೆಸ್ ಮುಖಂಡ ಮಿಥುನ್ ಪಾಟೀಲ, ಜಿಲ್ಲಾ ಪಂಚಾಯಿತಿ ಉಪಾ ಧ್ಯಕ್ಷೆ ರೂಪಾ ಅಂಗಡಿ, ಪುರಸಭೆ ಮುಖ್ಯಾಧಿಕಾರಿ ರವಿ ಬಾಗಲಕೋಟ, ಹಜರತ್ ಸೈಯದ್ ಶಾ, ಸುಲೇಮಾನ್ ಶಾವಲಿ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT