ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್: ಭಾರತಕ್ಕೆ ಸೋಲು

Last Updated 18 ಫೆಬ್ರುವರಿ 2017, 18:27 IST
ಅಕ್ಷರ ಗಾತ್ರ
ಹೊ ಚಿ ಮಿನ್ ಸಿಟಿ, ವಿಯೆಟ್ನಾಂ: ಭಾರತದ ಸ್ಪರ್ಧಿಗಳು  ಬ್ಯಾಡ್ಮಿಂಟನ್‌ ಏಷ್ಯಾ ತಂಡ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ  ಶುಕ್ರವಾರ ಥಾಯ್ಲೆಂಡ್ ಎದುರು ಮುಗ್ಗರಿಸಿದ್ದಾರೆ.
 
ಭಾರತ ತಂಡ 2–3ರಲ್ಲಿ ಥಾಯ್ಲೆಂಡ್‌ಗೆ ಮಣಿದಿದೆ. 
 
ಮಿಶ್ರ ಡಬಲ್ಸ್ ವಿಭಾಗದ ಮೊದಲ ಪಂದ್ಯದಲ್ಲಿ ಪ್ರಣವ್ ಜೆರಿ ಚೋಪ್ರಾ ಮತ್ತು ಎನ್‌. ಸಿಕ್ಕಿ ರೆಡ್ಡಿ ಜೋಡಿ 25–23, 10–21, 10–21ರಲ್ಲಿ ಸಾವಿತ್ರಿ ಅಮಿತ್ರಪೈ ಮತ್ತು ದಚಾಪೊಲ್ ವಿರುದ್ಧ 50 ನಿಮಿಷಗಳ ಪಂದ್ಯದಲ್ಲಿ ಸೋಲು ಕಂಡಿತು. 
 
ಆರಂಭಿಕ ಹಿನ್ನಡೆಯನ್ನು ಮರೆತು ಆಡಿದ ಪ್ರಣಯ್‌ ಪುರುಷರ ಸಿಂಗಲ್ಸ್ ವಿಭಾಗದಲ್ಲಿ 21–18, 21–15ರಲ್ಲಿ ಸುಪನ್ಯು ವಿರುದ್ಧ ಜಯಗಳಿಸಿದರು.
 
ಪುರುಷರ ಡಬಲ್ಸ್‌ನಲ್ಲಿ ಮನು ಮತ್ತು ಸುಮೀತ್ ಜೋಡಿ 21–19, 21–16ರಲ್ಲಿ ಕಿಟ್ಟಿನು ಪೊಂಗ್‌ ಮತ್ತು ನಿಪಿಟ್‌ಪೊನ್ ಎದುರು ಜಯಗಳಿಸಿತು. 34 ನಿಮಿಷದ ಪಂದ್ಯದಲ್ಲಿ ಭಾರತದ ಜೋಡಿ ಅತ್ಯುತ್ತಮ ಆಟದಿಂದ ಗಮನಸೆಳೆಯಿತು.
 
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಆಡಿದ ರಿತುಪರ್ಣ ದಾಸ್‌ 21–11, 12–21, 15–21ರಲ್ಲಿ ಪೋರ್ನಪೊವೆ ಚೊಚುವಾಂಗ್ ಎದುರು ಸೋಲು ಕಂಡ ಬಳಿಕ ಭಾರತ 2–2ರಲ್ಲಿ ಸಮಬಲ ಹೊಂದಿತ್ತು.
 
ಆದರೆ ಮಹಿಳೆಯರ ಡಬಲ್ಸ್ ವಿಭಾಗದ ನಿರ್ಣಾಯಕ ಪಂದ್ಯದಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಸಿಕ್ಕಿ ಜೋಡಿ 21–15, 17–21, 7–21ರಲ್ಲಿ ಜೊಂಗ್‌ಕೊಪನ್‌ ಮತ್ತು ರಾವಿಂಡ ವಿರುದ್ಧ ಸೋಲು ಅನುಭವಿಸಿದ್ದು ಭಾರತದ ಹಿನ್ನಡೆಗೆ ಕಾರಣವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT