ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಮಾರುಕಟ್ಟೆಗೆ ಸ್ಮಾರ್ಟ್‌ವಾಷ್‌ ಸಾಧನ

Last Updated 18 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜರ್ಮನಿ ಮೂಲದ ಡಾ. ವೀಸ್ನರ್‌ ಕಂಪೆನಿ ಸ್ಮಾರ್ಟ್‌ವಾಷ್‌ ಎಂಬ ಅತ್ಯಾಧುನಿಕ ಶೌಚಾಲಯ  (ಕಮೋಡ್‌) ಸಾಧನವನ್ನು ದೇಶಿ ಮಾರುಕಟ್ಟೆಗೆ  ಬಿಡುಗಡೆ ಮಾಡಿದೆ.

ಈ ಸಾಧನ ಸಂಪೂರ್ಣವಾಗಿ ಸ್ವಯಂ ಚಾಲಿತವಾಗಿದೆ. ಶೌಚದ ನಂತರ  ಸ್ವಚ್ಚಗೊಳಿಸುವ, ದುರ್ಗಂಧ ನಿಯಂತ್ರಿಸುವುದೂ ಸೇರಿದಂತೆ 40ಕ್ಕೂ ಹೆಚ್ಚು ಸ್ವಯಂಚಾಲಿತ   ವ್ಯವಸ್ಥೆ ಹೊಂದಿದೆ.

‘ನಾಲ್ಕು ಆವೃತ್ತಿಗಳಲ್ಲಿ ಈ ಸಾಧನ ಲಭ್ಯವಿದ್ದು, ಆರಂಭಿಕ ಬೆಲೆ ₹10 ಸಾವಿರದಷ್ಟಿದೆ.   ಕಂಪೆನಿಯ ಜಾಲತಾಣ https://www.smartwash.world/ ದಲ್ಲಿ ಉತ್ಪನ್ನದ ಖರೀದಿಗೆ ಚಾಲನೆ ನೀಡಲಾಗಿದೆ. ಶೀಘ್ರವೇ ಇ–ಕಾಮರ್ಸ್‌ ಮತ್ತು ಚಿಲ್ಲರೆ ಮಳಿಗೆಗಳಲ್ಲಿ ಮಾರಾಟ ಆರಂಭವಾಗಲಿದೆ’ ಎಂದು   ಸಂಸ್ಥೆಯ ಭಾರತದ ನಿರ್ದೇಶಕ ಎಚ್‌.ಕೆ. ನಾಗಭೂಷಣ್‌ ತಿಳಿಸಿದರು.

ಬದಲಾಗುತ್ತಿರುವ ಜೀವನಶೈಲಿಗೆ ಅನುಗುಣವಾಗಿ ಈ ಸಾಧನ ಪರಿಚಯಿಸಲಾಗಿದೆ. ಬೆಂಗಳೂರಿನ ದಾಬಸ್‌ಪೇಟೆಯಲ್ಲಿರುವ ಡಾ. ವೀಸ್ನರ್‌ ಟೆಸ್ಟ್‌ ಆ್ಯಂಡ್‌ ಆಟೊಮೋಷನ್‌ ಘಟಕದಲ್ಲಿ ಈ ಸಾಧನಗಳು ತಯಾರಾಗುತ್ತಿವೆ. ಎರಡು ವರ್ಷಗಳಲ್ಲಿ ತಯಾರಿಕಾ ಸಾಮರ್ಥ್ಯ ನಾಲ್ಕು ಪಟ್ಟು ಹೆಚ್ಚಳಗೊಳ್ಳಲಿದೆ ಎಂದು ಕಾರ್ಯಕಾರಿ ನಿರ್ದೇಶಕ ಜೊಷೆನ್‌ ಮುಲ್ಲರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT