ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ಕರೆ ಉತ್ಪಾದನೆ ಶೇ 15 ಇಳಿಕೆ

Last Updated 18 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಮಹಾರಾಷ್ಟ್ರ ಮತ್ತು  ಕರ್ನಾಟಕದಲ್ಲಿ ಬರಗಾಲ ಉಂಟಾಗಿ   ಕಡಿಮೆ ಪ್ರಮಾಣದಲ್ಲಿ ಕಬ್ಬು ಬೆಳೆದಿರುವುದರಿಂದ 2016–17ರ ಮಾರುಕಟ್ಟೆ ವರ್ಷದಲ್ಲಿ   ದೇಶದಲ್ಲಿ ಸಕ್ಕರೆ ಉತ್ಪಾದನೆ 1.4 ಕೋಟಿ ಟನ್‌ಗಳಷ್ಟು (ಶೇ 15ರಷ್ಟು) ಕಡಿಮೆಯಾಗಿದೆ.

ಅಕ್ಟೋಬರ್‌ನಿಂದ ಸೆಪ್ಟೆಂಬರ್‌ವರೆಗಿನ ಮಾರುಕಟ್ಟೆ ವರ್ಷದಲ್ಲಿ  2.1 ಕೋಟಿ ಟನ್‌ಗಳಷ್ಟು ಸಕ್ಕರೆ ಉತ್ಪಾದನೆ  ಇರಲಿದೆ ಎಂದು ಭಾರತೀಯ ಸಕ್ಕರೆ ಕಾರ್ಖಾನೆಗಳ ಒಕ್ಕೂಟವು  ಕಳೆದ ತಿಂಗಳು ಪರಿಷ್ಕೃತ ಅಂದಾಜು ಪ್ರಕಟಿಸಿತ್ತು.

ಸಕ್ಕರೆ ಉತ್ಪಾದನೆಯಲ್ಲಿ ಬ್ರೆಜಿಲ್‌ ಪ್ರಥಮ ಸ್ಥಾನದಲ್ಲಿದ್ದು, ಭಾರತವು ನಂತರ ಸ್ಥಾನದಲ್ಲಿದೆ. ಆದರೆ, ದೇಶದಲ್ಲಿ ಸಕ್ಕರೆ ಬಳಕೆದಾರರು ಹೆಚ್ಚಾಗಿದ್ದಾರೆ. 2015–16ರ ಮಾರುಕಟ್ಟೆ ವರ್ಷದಲ್ಲಿ ಭಾರತದಲ್ಲಿ 2.5 ಕೋಟಿ ಟನ್‌ಗಳಷ್ಟು ಸಕ್ಕರೆ ಉತ್ಪಾದನೆಯಾಗಿತ್ತು.

2015–16ರಲ್ಲಿ 2.5 ಕೋಟಿ ಟನ್‌ಗಳಷ್ಟು ಉತ್ಪಾದನೆ ಆಗಿತ್ತು. 2016–17 ರಲ್ಲಿ 2.4 ಕೋಟಿ ಟನ್‌ ಉತ್ಪಾದನೆ ಆಗುವ ನಿರೀಕ್ಷೆ ಮಾಡಲಾಗಿದೆ.
ರಾಜ್ಯವಾರು ಮಾಹಿತಿ: ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ಮಹಾರಾಷ್ಟ್ರದಲ್ಲಿ ಈ ಬಾರಿ ಉತ್ಪಾದನೆ 62 ಲಕ್ಷ ಟನ್‌ಗಳಿಂದ 39 ಲಕ್ಷ ಟನ್‌ಗಳಿಗೆ ಇಳಿಕೆ ಕಾಣಲಿದೆ ಎಂದು ಒಕ್ಕೂಟ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT