ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಫೈನಲ್‌ಗೆ ಸ್ವಸ್ತಿಕ್‌ ತಂಡ

Last Updated 18 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಬೆಂಗಳೂರು: ಸ್ವಸ್ತಿಕ್‌ ಯೂನಿಯನ್‌ ಮತ್ತು ಸೋಷಿಯಲ್‌ ಕ್ರಿಕೆಟರ್ಸ್ ತಂಡ ಗಳು ವೈ.ಎಸ್‌. ರಾಮಸ್ವಾಮಿ ಸ್ಮಾರಕ ಕ್ರಿಕೆಟ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿ ಸಿದ್ದು, ಸೋಮವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ  ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.
 
ಶನಿವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಸ್ವಸ್ತಿಕ್‌ ಬೆಂಗಳೂರು ಅಕೇಷ ನಲ್ಸ್‌ ವಿರುದ್ಧವೂ,  ಸೋಷಿಯಲ್‌ ಕ್ರಿಕೆಟರ್ಸ್‌ ಮೌಂಟ್ ಜಾಯ್‌  ಕ್ಲಬ್‌ ಎದುರು ಜಯ ಸಾಧಿಸಿವೆ.
 
ಸಮರ್ಥ್‌ ಶತಕ: ಆರ್. ಸಮರ್ಥ್‌ ಮಹತ್ವದ ಪಂದ್ಯದಲ್ಲಿ ಶತಕ ಗಳಿಸಿ ಗೆಲುವಿಗೆ ಕಾರಣರಾದರು.
 
ಮೊದಲು ಬ್ಯಾಟ್‌ ಮಾಡಿದ ಅಕೇಷನಲ್ಸ್‌ 41.3 ಓವರ್‌ಗಳಲ್ಲಿ 216 ರನ್ ಗಳಿಸಿತು. ಈ ಗುರಿಯನ್ನು ಸ್ವಸ್ತಿಕ್‌ 32.4 ಓವರ್‌ಗಳಲ್ಲಿ ತಲುಪಿತು.  ಸಮರ್ಥ್‌ 92 ಎಸೆತಗಳನ್ನು  ಔಟಾಗದೆ 117 ರನ್ ತಂದುಕೊಟ್ಟರು.  
 
ಸಂಕ್ಷಿಪ್ತ ಸ್ಕೋರು:
ಬೆಂಗಳೂರು ಅಕೇಷನಲ್ಸ್‌: 41.3 ಓವರ್‌ಗಳಲ್ಲಿ 216 (ಶರತ್‌ ಶ್ರೀನಿವಾಸ್‌ 89, ಡಿ. ಅವಿನಾಶ್‌ 75; ಕೆ. ಶಶಾಂಕ್‌ 23ಕ್ಕೆ2, ಅಬ್ರಾರ್‌ ಖಾಜಿ 26ಕ್ಕೆ4).
ಸ್ವಸ್ವಿಕ್‌ ಯೂನಿಯನ್ ಕ್ಲಬ್‌: 32.4 ಓವರ್‌ಗಳಲ್ಲಿ 2  ವಿಕೆಟ್‌ಗೆ 217 (ರಾಬಿನ್ ಉತ್ತಪ್ಪ 32, ಆರ್‌. ಸಮರ್ಥ್‌ ಔಟಾಗದೆ 117, ಎಸ್.ಎಸ್‌. ಸುಜಯ್‌ 36). ಫಲಿತಾಂಶ: ಸ್ವಸ್ತಿಕ್ ಯೂನಿಯನ್‌ಗೆ ಎಂಟು ವಿಕೆಟ್‌ ಜಯ.
 
ಸೋಷಿಯಲ್‌ ಕ್ರಿಕೆಟರ್ಸ್‌: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 280 (ರೋಹನ್‌ ಕದಮ್‌ 93, ಭರತ್ ಚಿಪ್ಲಿ 82, ರಿತೇಶ್ ಭಟ್ಕಳ 30; ಐ.ಜಿ. ಅನಿಲ್‌ 54ಕ್ಕೆ3).
ಮೌಂಟ್ ಜಾಯ್ ಕ್ಲಬ್‌: 48 ಓವರ್‌ಗಳಲ್ಲಿ 255 ( ಪ್ರವೀಣ್‌ 57, ಎ.ಎಂ. ಕಿರಣ್‌ 34, ಸಮರ್ಥ್‌ ಊಟಿ 61, ಬಿ.ಆರ್‌. ಶರತ್‌ 45, ವೈಶಾಕ್ ವಿಜಯ್‌ ಕುಮಾರ್ 50ಕ್ಕೆ2).
ಫಲಿತಾಂಶ: ಸೋಷಿಯಲ್‌ ಕ್ರಿಕೆಟರ್ಸ್‌ಗೆ  25 ರನ್ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT