ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ವ ವಲಯಕ್ಕೆ ಪ್ರಶಸ್ತಿ

ವಿರಾಟ್, ಜಗ್ಗಿ ಅರ್ಧಶತಕ
Last Updated 18 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಮುಂಬೈ: ವಿರಾಟ್ ಸಿಂಗ್ ಮತ್ತು ಇಶಾಂಕ್ ಜಗ್ಗಿ ಅವರ ಮಿಂಚಿನ ವೇಗದ ಅರ್ಧಶತಕಗಳ ಬಲದಿಂದ ಪೂರ್ವ ವಲಯ ತಂಡವು ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡಿತು. 
 
ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಪೂರ್ವ ವಲಯ ತಂಡವು 8 ವಿಕೆಟ್‌ಗಳಿಂದ ಪಶ್ಚಿಮ ವಲಯದ ವಿರುದ್ಧ ಜಯಿಸಿತು. ವಿರಾಟ್ ಸಿಂಗ್ ( ಔಟಾಗದೆ 58; 34ಎ, 5ಬೌಂ, 3ಸಿ ) ಮತ್ತು ಇಶಾಂಕ್ ಜಗ್ಗಿ ( 56; 30ಎ, 3ಬೌಂ, 6ಸಿ) ಅವರ ಅಬ್ಬರದ ಬ್ಯಾಟಿಂಗ್‌ನಿಂದ  ಪೂರ್ವ ವಲಯವು 149 ರನ್‌ಗಳ ಗುರಿಯನ್ನು ಕೇವಲ 13.4 ಓವರ್‌ಗಳಲ್ಲಿ ಮುಟ್ಟಿತು. 
 
 ಮೊದಲು ಬ್ಯಾಟಿಂಗ್ ಮಾಡಿದ್ದ ಪಶ್ಚಿಮ ವಲಯ ತಂಡವು ಶೆಲ್ಡನ್ ಜಾಕ್ಸನ್ (52 ರನ್) ಅವರ ಅರ್ಧ ಶತಕದ ಆಟದಿಂದ 20 ಓವರ್‌ಗಳಲ್ಲಿ    5 ವಿಕೆಟ್‌ಗಳಿಗೆ 149 ರನ್‌ ಗಳಿಸಿತ್ತು. 
 
ವಿರಾಟ್–ಜಗ್ಗಿ ಮಿಂಚು: ಕಳೆದ ಪಂದ್ಯ ದಲ್ಲಿ 74 ರನ್‌ ಗಳಿಸಿ ಉತ್ತರ ವಲಯದ ವಿರುದ್ಧ ಜಯಗಳಿಸಲು ಕಾರಣರಾಗಿದ್ದ ವಿರಾಟ್ ಸಿಂಗ್ ಮತ್ತೊಮ್ಮೆ ಮಿಂಚಿದರು. 
 
ಜಾರ್ಖಂಡ್‌ನ ಎಡಗೈ ಆಟಗಾರ ವಿರಾಟ್ ಅವರು ಬೌಲರ್‌ಗಳನ್ನು ಆತ್ಮ ವಿಶ್ವಾಸದಿಂದ ಎದುರಿಸಿದರು. 19 ವರ್ಷದ ವಿರಾಟ್  ಅವರು ಅರುಣ್ ಕಾರ್ತಿಕ್ ಅವರೊಂದಿಗೆ ಇನಿಂಗ್ಸ್‌ ಆರಂಭಿಸಿದರು. ಮೊದಲ ವಿಕೆಟ್‌ ಜೊತೆಯಾಟದಲ್ಲಿ ಇಬ್ಬರೂ 61 ರನ್‌ ಸೇರಿಸಿದರು.  
 
 ವಿರಾಟ್ ಜೊತೆಗೂಡಿದ ಇಶಾಂಕ್ ಜಗ್ಗಿ ಅವರು ಮಿಂಚಿನಂತಹ ಬ್ಯಾಟಿಂಗ್ ಮಾಡಿದರು. ಕೇವಲ 30 ಎಸೆತಗಳಲ್ಲಿ  56 ರನ್‌ ಸೂರೆ ಮಾಡಿದರು. ಒಟ್ಟು ಆರು ಸಿಕ್ಸರ್‌ಗಳನ್ನು ಬಾರಿಸಿದ ಅವರು ತಂಡದ ಗೆಲುವನ್ನು ಸುಲಭಗೊಳಿಸಿ ದರು. ಇವರಿಬ್ಬರು ಎರಡನೇ ವಿಕೆಟ್ ಜೊತೆಯಾಟದಲ್ಲಿ 80 ರನ್‌ ಗಳಿಸಿದರು.  
 
ಸಂಕ್ಷಿಪ್ತ ಸ್ಕೋರು
ಪಶ್ಚಿಮ ವಲಯ:
20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 149 (ಶೆಲ್ಡನ್ ಜಾಕ್ಸನ್  52, ರುಜುಲ್ ಭಟ್ ಔಟಾಗದೆ 36, ಪ್ರೀತಮ್ ದಾಸ್ 25ಕ್ಕೆ2, ಸೂರ್ಯಕಾಂತ್ ಪ್ರಧಾನ್ 28ಕ್ಕೆ1, ಸಯಾನ್ ಘೋಷ್ 32ಕ್ಕೆ1, ಪ್ರಗ್ಯಾನ್ ಓಜಾ 18ಕ್ಕೆ1)
 
ಪೂರ್ವ ವಲಯ: 13.4ಓವರ್‌ಗಳಲ್ಲಿ 2 ವಿಕೆಟ್‌ ಗಳಿಗೆ 153 (ವಿರಾಟ್ ಸಿಂಗ್ ಔಟಾಗದೆ 58, ಇಶಾಂಕ್ ಜಗ್ಗಿ 56, ಶಾರ್ದೂಲ್ ಠಾಕೂರ್ 31ಕ್ಕೆ2)
ಫಲಿತಾಂಶ: ಪಶ್ಚಿಮ ವಲಯಕ್ಕೆ 8 ವಿಕೆಟ್‌ಗಳ ಜಯ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT