ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಣೆ ಸೂಪರ್‌ಜೈಂಟ್ಸ್‌ ತಂಡದ ನಾಯಕತ್ವದಿಂದ ಧೋನಿ ಔಟ್‌

Last Updated 19 ಫೆಬ್ರುವರಿ 2017, 10:53 IST
ಅಕ್ಷರ ಗಾತ್ರ
ಕೊಲ್ಕತ್ತಾ: ಇತ್ತೀಚೆಗೆ ಏಕದಿನ ಹಾಗೂ ಟಿ20 ಪಂದ್ಯದ ನಾಯಕತ್ವದಿಂದ ದೂರ ಉಳಿದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್‌. ಧೋನಿ ಅವರನ್ನು ಐಪಿಎಲ್ 10ರ ಆವೃತ್ತಿಯ ಪುಣೆ ಸೂಪರ್‌ ಜೈಂಟ್ಸ್‌ ತಂಡದ ನಾಯಕತ್ವದಿಂದಲೂ ಕೈಬಿಡಲಾಗಿದೆ. ಈ ಸ್ಥಾನಕ್ಕೆ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್‌ ಸ್ಮಿತ್‌ ಅವರನ್ನು ಆಯ್ಕೆ ಮಾಡಲಾಗಿದೆ. 
 
ಕಳೆದ ವರ್ಷ ನಡೆದ ಐಪಿಎಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವುದರಲ್ಲಿ ಪುಣೆ ಸೂಪರ್‌ಜೈಂಟ್ಸ್‌  ತಂಡ ವಿಫಲವಾಗಿತ್ತು. ಹಾಗಾಗಿ ಈ ಬಾರಿ ಗೆಲುವು ಸಾಧಿಸುವ ಇಚ್ಛೆಯಿಂದ ಸ್ಟೀವ್‌ ಸ್ಮಿತ್‌ ಅವರಿಗೆ ನಾಯಕತ್ವದ ಸ್ಥಾನ ನೀಡಲಾಗಿದೆ ಎಂದು  ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್‌್  ತಂಡದ ಮಾಲೀಕ ಸಂಜೀವ್‌್ ಗೋಯಂಕಾ ಹೇಳಿದ್ದಾರೆ. 
 
ಧೋನಿ ನಾಯಕತ್ವದ ಸ್ಥಾನದಿಂದ ಹಿಂದೆ ಸರಿದಿಲ್ಲ. ಕೇವಲ 35 ವರ್ಷವಿರುವಾಗಲೇ ಪಂದ್ಯಗಳಿಂದ ದೂರ ಸರಿದಿರುವುದು ಭಾರತ ತಂಡದ ನಾಯಕರ ಇತಿಹಾಸದಲ್ಲಿ ಇದೇ ಮೊದಲು. ಅಲ್ಲದೇ ನಾಯಕತ್ವದಿಂದ ಕೈಬಿಡುವ ವಿಚಾರದ ಬಗ್ಗೆ ಧೋನಿ ಅವರೊಂದಿಗೂ ಚರ್ಚೆ ನಡೆಸಲಾಗಿದೆ. ನಮ್ಮ ಈ ನಿರ್ಧಾರಕ್ಕೆ ಅವರು ಕೂಡ ಒಪ್ಪಿಗೆ ಸೂಚಿಸಿದ್ದಲ್ಲದೇ ತಂಡದ ಇತರ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ ಎಂದು ಗೋಯಂಕಾ ತಿಳಿಸಿದ್ದಾರೆ. 
 
ಕಳೆದ ವರ್ಷ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ರಾಜಸ್ತಾನ ರಾಯಲ್ಸ್‌ ತಂಡವನ್ನು ಐಪಿಎಲ್‌ನಿಂದ ದೂರ ಇಡಲಾಗಿತ್ತು. 
 
ಐಪಿಎಲ್‌್ ಪಂದ್ಯಕ್ಕೆ ದಿನಗಣನೆ ಆರಂಭವಾಗಿದ್ದು,  ಏಪ್ರಿಲ್ 15ರಿಂದ ಐಪಿಎಲ್‌ ಸರಣಿ ಶುರುವಾಗಲಿವೆ. ಇದರ ಹಿಂದೆ ಧೋನಿ ವಿಚಾರದಲ್ಲಿ ಆಶ್ಚರ್ಯಕರ ಬೆಳವಣಿಗೆ ನಡೆದಿದೆ. 
 
ಧೋನಿ ಅವರು ಈ ಹಿಂದೆ 9 ಸರಣಿಯಲ್ಲಿ ತಮ್ಮ ಪ್ರದರ್ಶನ ತೋರಿದ್ದಾರೆ. ಮೊದಲು 2008 ರಿಂದ 2015ರವರೆಗೆ ಚೆನ್ನೈ ಸೂಪರ್‌ಕಿಂಗ್ಸ್‌್ ತಂಡದ ನಾಯಕರಾಗಿದ್ದರು. ಬಳಿಕ ಪುಣೆ ಸೂಪರ್‌ಜೆಂಟ್ಸ್‌ ತಂಡದ ನಾಯಕತ್ವ ವಹಿಸಿಕೊಂಡಿದ್ದರು. 
 
ಒಟ್ಟಾರೆ ಧೋನಿ ಅವರು 143 ಐಪಿಎಲ್‌್ ಪಂದ್ಯಗಳಲ್ಲಿ ಆಡುವುದರ ಮೂಲಕ 3,271 ರನ್‌ಗಳನ್ನು ಕಲೆಹಾಕಿದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT