ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳವಾರ, 21–2–1967

Last Updated 20 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಪುರುಷನ ವೇಷ, ಸ್ತ್ರೀಯರ ರೋಷ
ಭೋಪಾಲ್, ಫೆ. 20–
ಸ್ತ್ರೀಯರಿಗಾಗಿ ಮೀಸಲಿಟ್ಟ ಮತದಾನ ಕೇಂದ್ರವೊಂದರ ಸಾಲಿನಲ್ಲಿ ಪುರುಷ ವೇಷಧಾರಿಯ ಪ್ರವೇಶ ವಾದಾಗ ಸಾಲಿನಲ್ಲಿದ್ದ ಸ್ತ್ರೀಯರು ಉಯಿಲೆಬ್ಬಿಸಿದರು. ಭೋಪಾಲದ ಲಷ್ಕರ್ ವಿಧಾನಸಭಾ ಕ್ಷೇತ್ರದಲ್ಲಿನ ಒಂದು ಕೇಂದ್ರದಲ್ಲಿ ಈ ಘಟನೆ ನಡೆಯಿತು.

ವಿಚಾರಣೆ ಮಾಡಿದಾಗ ತನ್ನ ದಿವಂಗತ ಪತಿಯ ಉಡುಗೆ ಧರಿಸಿ ಸ್ತ್ರೀ ಮತದಾರ ಳೊಬ್ಬಳು ಬಂದಿರುವಳಾಗಿ ಕಂಡುಬಂತು. ಆಕೆ ಏನನ್ನೂ ಗಮನಿಸದೆ ಸುಮ್ಮನೆ ಮತದಾನ ಮುಗಿಸಿ ಮರಳಿದಳು.

ದುರಾಡಳಿತ ಮುಂದುವರಿದರೆ ಸೇನಾಕ್ರಾಂತಿ?
ನವದೆಹಲಿ, ಫೆ. 20–
ಈ ಮೊದಲಿನ ಸರಕಾರಗಳಂತೆ ಹೊಸದಾಗಿ ಭಾರತದಲ್ಲಿ ಅಸ್ತಿತ್ವದಲ್ಲಿ ಬರಲಿರುವ ಸರಕಾರವು ‘ದುರಾಡಳಿತ’ವನ್ನು ಮುಂದುವರಿಸಿದಲ್ಲಿ ಭಾರತದ ಸಂಸದೀಯ ಪ್ರಜಾಪ್ರಭುತ್ವವು ಸೇನಾ ಬಂಡಾಯವನ್ನು ಎದುರಿಸಬೇಕಾ ದೀತೆಂದು ‘ಲಂಡನ್ ಇಕೊನಮಿಸ್ಟ್’ ಪತ್ರಿಕೆ ಅಭಿಪ್ರಾಯಪಟ್ಟಿದೆ.

ಈಗ ಆಯ್ಕೆ ಹೊಂದಲಿರುವ ಕೇಂದ್ರ ಮತ್ತು ರಾಜ್ಯ ಸರಕಾರಗಳು  ಮೊದಲಿನ ದುರಾಡಳಿತವನ್ನು ಮುಂದುವರೆಸಿದರೆ, ಮೊದಲಿನಂತೆ ಹಾದಿತಪ್ಪಿ ನಡೆದರೆ, ‘ದೇಶದ ಅತ್ಯಂತ ಸುಸಂಘಟಿತ ಗುಂಪಾದ ಸೇನೆಯ ಅಧಿಕಾರಿಗಳ ಭೋಜನ ಗೃಹದಲ್ಲಿ ಕೇಳಿ ಬರುತ್ತಿರುವ ಚರ್ಚೆಯು ಒಂದು ವಿಶಿಷ್ಟ  ಸ್ವರೂಪ
ತಳೆಯಬಹುದು’ ಎಂದು ಈ ಆಂಗ್ಲ ಸಾಪ್ತಾಹಿಕ ಪತ್ರಿಕೆ ಇತ್ತೀಚೆಗೆ ಬರೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT