ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌರಶಕ್ತಿಯಿಂದ ವಿದ್ಯುತ್ ಉತ್ಪಾದನೆ

ಮನೆಯ ತಾರಸಿಯ ಮೇಲೆ ಪ್ಲಾಂಟ್‌
Last Updated 21 ಫೆಬ್ರುವರಿ 2017, 4:57 IST
ಅಕ್ಷರ ಗಾತ್ರ
ಭಟ್ಕಳ: ಸರ್ಕಾರ ಅಥವಾ ಖಾಸಗೀ ಯೋಜನೆ ಇರಬಹುದು ಅದನ್ನು ಅರ್ಥೈಸಿಕೊಂಡರೆ ಬಳಕೆ ಮಾಡಿ ಹೇಗೆ ಲಾಭ ಪಡೆಯಲು ಸಾಧ್ಯ ಎಂಬುದನ್ನು ಭಟ್ಕಳದ ಮಾರುತಿ ನಗರದ ಡಾ. ಗಣೇಶ ಪ್ರಭು ಅವರು ತಮ್ಮ ಮನೆಯ ತಾರಸಿಯ ಮೇಲೆ ಸೌರಶಕ್ತಿಯ ವಿದ್ಯುತ್ ಉತ್ಪಾದನಾ ಘಟಕ ನಿರ್ಮಿಸಿ, ಅದನ್ನು ಇಲಾಖೆಗೆ ಮಾರುವ ಮೂಲಕ ಸಾಧಿಸಿ ತೋರಿಸಿದ್ದಾರೆ.
 
ಇನ್ನೊಂದು ತಿಂಗಳು ಕಳೆದರೆ ಕಡು ಬೇಸಿಗೆ ಆರಂಭ. ಮಳೆಯ ಅಭಾವ ಬಿಸಿಲಿನ ತಾಪಕ್ಕೆ ಈಗಾಗಲೇ ಜಲ ವಿದ್ಯುತ್ ಯೋಜನೆಯ ಅಣೆಕಟ್ಟುಗಳಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿದೆ. ಇದರಿಂದ ವಿದ್ಯುತ್ ಉತ್ಪಾದನೆ ಸಹ ಕುಂಠಿತಗೊಂಡಿದೆ. ವಿದ್ಯುತ್ ಕಡಿತವೂ ಆರಂಭವಾಗಿದೆ. ಕಡು ಬೇಸಿಗೆಯಲ್ಲಿ ಫ್ಯಾನ್, ಎ,ಸಿ ಇಲ್ಲದಿದ್ದರೆ ಅದರಲ್ಲೂ ಕರಾವಳಿ ಜಿಲ್ಲೆಗಳಲ್ಲಿ ಮನೆ, ಕಚೇರಿಗಳಲ್ಲಿ ಇರುವುದಕ್ಕೇ ಸಾಧ್ಯವಿಲ್ಲ, ವಿದ್ಯುತ್‌ ಹೋದರಂತೂ ಮುಗಿದೇ ಹೋಯಿತು.
 
ಇದಕ್ಕೆಲ್ಲಾ ಪರಿಹಾರ, ಇಲಾಖೆಯ ವಿದ್ಯುತ್‌ಗೆ ಪರ್ಯಾಯ ಎಂಬಂತೆ ವೃತ್ತಿಯಲ್ಲಿ ವೈದ್ಯರಾಗಿರುವ ಭಟ್ಕಳ ಪಟ್ಟಣದ ಮಾರುತಿ ನಗರದ ನಿವಾಸಿ ಡಾ. ಗಣೇಶ ಪ್ರಭು ಅವರು, ತಮ್ಮ ಮನೆಯ ತಾರಸಿಯ ಅನುಪಯುಕ್ತ ಸ್ಥಳವನ್ನು ಬಳಸಿ ಪ್ಲಾಂಟ್‌ ತಯಾರಿಸಿ ಹೇರಳವಾಗಿ ಸಿಗುವ ಸೌರಶಕ್ತಿಯನ್ನು ಬಳಸಿ ವಿದ್ಯುತ್‌ ಉತ್ಪಾದಿಸುತ್ತಿದ್ದಾರೆ.
 
ಒಂದು ಯೂನಿಟ್‌ಗೆ ₹ 7. 8 ಪೈಸೆಗೆ ಖರೀದಿ: ತಮಗೆ ಉಪಯೋಗಕ್ಕೆ ಬೇಕಾ ದಷ್ಟು ವಿದ್ಯುತ್‌ನೊಂದಿಗೆ ಪ್ರತಿದಿನ ಸರಾ ಸರಿ 20 ಯೂನಿಟ್‌ ವಿದ್ಯುತ್ ಉತ್ಪಾದಿಸಿ ಹೆಸ್ಕಾಂಗೆ ಮಾರಾಟ ಮಾಡುವ ಮೂಲಕ ಅದರಿಂದ ವರಮಾನವನ್ನೂ ಪಡೆಯುತ್ತಿದ್ದಾರೆ. ಸರ್ಕಾರದಿಂದ ಸಬ್ಸಿಡಿ ಪಡೆಯದೇ ವಿದ್ಯುತ್ ಉತ್ಪಾದಿಸಿ ಹೆಸ್ಕಾಂಗೆ ನೀಡಿದರೆ ಒಂದು ಯೂನಿಟ್‌ಗೆ ₹ 7. 8 ಪೈಸೆ ಪಡೆಯಬಹುದು. ಸಬ್ಸಿಡಿ ಪಡೆದು ಪ್ಲಾಂಟ್‌ ಅಳವಡಿಸಿದರೆ ದರದಲ್ಲಿ ವ್ಯತ್ಯಾಸ ಆಗುತ್ತದೆ ಎಂದು ಗಣೇಶ ಪ್ರಭು ಹೇಳುತ್ತಾರೆ.
 
ಕೇವಲ 200 ಅಡಿ ಜಾಗ ಮಾತ್ರ ಬಳಸಿ, ಸುಮಾರು ₹ 5ಲಕ್ಷ ವೆಚ್ಚ ಮಾಡಿ 18 ಸೆಲ್‌ ಪ್ಲಾಂಟ್‌ನ್ನು ಅಳವಡಿಸಲಾಗಿದೆ. ಒಂದು ಸೆಲ್‌ನಲ್ಲಿ 267 ವ್ಯಾಟ್‌ನಂತೆ ದಿನವೊಂದಕ್ಕೆ 5 ಸಾವಿರ ವ್ಯಾಟ್‌ ವಿದ್ಯುತ್ ಉತ್ಪಾದನೆ ಆಗುತ್ತದೆ. ಬಿಸಿಲಿನ ಪ್ರಮಾಣದಲ್ಲಿ ಹೆಚ್ಚು ಕಡಿಮೆಯಾದರೂ ಸರಾಸರಿ ಉತ್ಪಾದನೆಗೆ ಕೊರತೆ ಇಲ್ಲ ಎಂದು ಹೇಳುವ ಗಣೇಶ ಪ್ರಭು, 20 ಯೂನಿಟ್‌ ಹೆಸ್ಕಾಂಗೆ ಮಾರಾಟ ಮಾಡುವುದರಿಂದ ತಿಂಗಳಿಗೆ ಸುಮಾರು ₹ 4ಸಾವಿರ ವರಮಾನ ಸಿಗುತ್ತದೆ ಎನ್ನುತ್ತಾರೆ.
 
ಅಲ್ಲದೇ ಸೌರಶಕ್ತಿ ಪ್ಲಾಂಟ್‌ ಅಳವಡಿಸಿದ ಸಂಸ್ಥೆ 25 ವರ್ಷಗಳ ನಿರ್ವಹಣೆ ನೀಡುವುದರಿಂದ ಯಾವುದೇ ತೊಂದರೆ ಇಲ್ಲ ಎಂದೂ ಡಾ. ಪ್ರಭು ಹೇಳುತ್ತಾರೆ.
 
**
ಮನೆಯ ಮಹಡಿಯಲ್ಲೇ ಉತ್ಪಾದಿಸಬಹುದು
ಸೌರಶಕ್ತಿಯಿಂದ ವಿದ್ಯುತ್‌ ಉತ್ಪಾದಿಸುವುದು ಸರಳ ಹಾಗೂ ಸುರಕ್ಷಿತ. ಮನೆಯ ಮಹಡಿಯಲ್ಲೇ ಉತ್ಪಾದಿಸಬಹುದು. ಸಲಕರಣೆ ಕೊಳ್ಳಲು ಬ್ಯಾಂಕ್‌ಗಳು ಸಹಾಯ ಮಾಡುತ್ತವೆ. ಇದರಿಂದ ಸಾಮಾಜಿಕ ಸೇವೆ ಮಾಡಿದ ತೃಪ್ತಿಯೂ ದೊರಕುತ್ತದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಹೆಸ್ಕಾಂ ಕಚೇರಿ ಸಂಪರ್ಕಿಸಬಹುದು ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಮಂಜುನಾಥ ಕೆ. ಜಿ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT