ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ವೇತಭವನ ಪತ್ರಕರ್ತರ ಒಕ್ಕೂಟದ ಔತಣಕೂಟಕ್ಕೆ ಟ್ರಂಪ್ ಗೈರು?

Last Updated 26 ಫೆಬ್ರುವರಿ 2017, 20:17 IST
ಅಕ್ಷರ ಗಾತ್ರ
ವಾಷಿಂಗ್ಟನ್ :ಅಮೆರಿಕದ ಮಾಧ್ಯಮಗಳು ಹಾಗೂ ಅಧ್ಯಕ್ಷರ ನಡುವಿನ ತಿಕ್ಕಾಟ ಮುಂದುವರಿದಿದ್ದು,  ಶ್ವೇತಭವನ ಪತ್ರಕರ್ತರ ಒಕ್ಕೂಟದ  ವಾರ್ಷಿಕ ಔತಣಕೂಟದಲ್ಲಿ ಭಾಗಿಯಾಗದಿರಲು ಡೊನಾಲ್ಡ್  ಟ್ರಂಪ್ ನಿರ್ಧರಿಸಿದ್ದಾರೆ. ಟ್ವಿಟರ್‌ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ. 
 
ನ್ಯೂಯಾರ್ಕ್ ಟೈಮ್ಸ್, ಸಿಎನ್‌ಎನ್‌, ಬಿಬಿಸಿ ಸೇರಿದಂತೆ ಹಲವು ಮಾಧ್ಯಮಗಳಿಗೆ ಶ್ವೇತಭವನದ ಸುದ್ದಿಗೋಷ್ಠಿಗೆ ತಾತ್ಕಾಲಿಕ ನಿರ್ಬಂಧ ಹೇರಿದ್ದ ಬಳಿಕ ಟ್ರಂಪ್ ಈ ನಿರ್ಧಾರ ಕೈಗೊಂಡಿದ್ದಾರೆ. 
 
ಈ ಕಾರ್ಯಕ್ರಮಕ್ಕೆ ಅಮೆರಿಕದ ಅಧ್ಯಕ್ಷರೊಬ್ಬರು ಗೈರುಹಾಜರಾಗುತ್ತಿರುವುದು ದಶಕಗಳಲ್ಲಿ ಇದೇ ಮೊದಲು. ಪತ್ರಿಕೋದ್ಯಮ ವಿದ್ಯಾರ್ಥಿವೇತನಕ್ಕೆ ದೇಣಿಗೆ ಸಂಗ್ರಹಿಸಲು ಪ್ರತಿವರ್ಷ ಈ ಔತಣಕೂಟ ಏರ್ಪಡಿಸಲಾಗುತ್ತದೆ.
 
ಸಾಮಾನ್ಯವಾಗಿ ಅಮೆರಿಕ ಅಧ್ಯಕ್ಷರು, ಪತ್ರಕರ್ತರು, ಗಣ್ಯರು ಭಾಗಿಯಾಗುತ್ತಾರೆ. 1981ರಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದ ರೊನಾಲ್ಡ್ ರೇಗನ್ ಅವರು ತಮ್ಮ ಮೇಲೆ ನಡೆದ ಹತ್ಯೆ ಯತ್ನದಿಂದ ಚೇತರಿಸಿಕೊಳ್ಳುತ್ತಿದ್ದ ಕಾರಣ ಔತಣಕೂಟಕ್ಕೆ ಗೈರಾಗಿದ್ದರು. ಆದರೂ ದೂರವಾಣಿಯಲ್ಲಿ ಶುಭಕೋರಿದ್ದರು. 1972ರಲ್ಲಿ ರಿಚರ್ಡ್ ನಿಕ್ಸನ್  ಅವರೂ ಗೈರಾಗಿದ್ದರು ಎಂದು ನ್ಯಾಷನಲ್ ಪಬ್ಲಿಕ್ ರೇಡಿಯೊ ತಿಳಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT