ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಮೂರನೇ ಸಿರಿವಂತ ನಗರ ಬೆಂಗಳೂರು

Last Updated 26 ಫೆಬ್ರುವರಿ 2017, 19:52 IST
ಅಕ್ಷರ ಗಾತ್ರ

ಭಾರತದ ಅತ್ಯಂತ ಶ್ರೀಮಂತ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೂರನೇ ಸ್ಥಾನ ಪಡೆದಿದೆ. ದೇಶದ ಅತ್ಯಂತ ಶ್ರೀಮಂತ ನಗರ ಎಂಬ ಹೆಗ್ಗಳಿಕೆಗೆ ವಾಣಿಜ್ಯ ನಗರಿ ಮುಂಬೈ ಪಾತ್ರವಾಗಿದ್ದರೆ, ದೆಹಲಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಮುಂಬೈನ ಸಂಪತ್ತಿನ ಮೊತ್ತ ₹ 54.6 ಲಕ್ಷ ಕೋಟಿ. ಇನ್ನು ದೆಹಲಿ ಮತ್ತು ಬೆಂಗಳೂರಿನ ಸಂಪತ್ತು ಕ್ರಮವಾಗಿ ₹ 29.9 ಲಕ್ಷ ಕೋಟಿ ಮತ್ತು ₹ 21.3 ಲಕ್ಷ ಕೋಟಿಯಷ್ಟಿದೆ. ಮಾರುಕಟ್ಟೆ ಸಂಶೋಧನಾ ಸಂಸ್ಥೆ, ನ್ಯೂ ವರ್ಲ್ಡ್‌ ವೆಲ್ತ್‌ ಬಿಡುಗಡೆ ಮಾಡಿರುವ 2016ನೇ ಸಾಲಿನ ವರದಿಯಲ್ಲಿ ಈ ಮಾಹಿತಿ ಇದೆ.

ಸಿರಿವಂತರ ವಲಸೆಯಲ್ಲಿ ಹೆಚ್ಚಳ
ಸ್ವದೇಶದಿಂದ ವಲಸೆ ಹೋಗುತ್ತಿರುವ ಸಿರಿವಂತರ ಸಂಖ್ಯೆಯಲ್ಲಿ ಭಾರಿ ಏರಿಕೆ ಆಗಿದೆ. 2016ರಲ್ಲಿ ವಿಶ್ವದಾದ್ಯಂತ 82 ಸಾವಿರ, ಅತಿ ಸಿರಿವಂತರು ವಲಸೆ ಹೋಗಿದ್ದಾರೆ. ಈ ರೀತಿ ಅತಿ ಹೆಚ್ಚು ವಲಸೆ ಹೋದ ಮೊದಲ ಐದು ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಇದೆ.

ಈ ಸಾಲಿನಲ್ಲಿ ಒಟ್ಟು 6 ಸಾವಿರ ಸಿರಿವಂತರು ತಮ್ಮ ವಾಸ್ತವ್ಯವನ್ನು ಭಾರತದಿಂದ ಬೇರೆ ದೇಶಗಳಿಗೆ ಬದಲಿಸಿದ್ದಾರೆ. 2015ನೇ ಸಾಲಿನಲ್ಲಿ ಹೀಗೆ ವಲಸೆ ಹೋದವರ ಸಂಖ್ಯೆ 4 ಸಾವಿರ. ಹಿಂದಿನ ವರ್ಷಕ್ಕೆ ಹೋಲಿಸಿದರೆ 2016ರಲ್ಲಿ ವಲಸೆ ಹೋದ ಸಿರಿವಂತರ ಸಂಖ್ಯೆಯಲ್ಲಿ ಶೇ 50 ರಷ್ಟು ಹೆಚ್ಚಳವಾಗಿದೆ.



ಶತ ಕೋಟ್ಯಧಿಪತಿಗಳೆಂದರೆ...
10 ಲಕ್ಷ ಅಮೆರಿಕನ್ ಡಾಲರ್‌ನಿಂದ 100 ಕೋಟಿ ಅಮೆರಿಕನ್ ಡಾಲರ್‌ವರೆಗೆ (ಸುಮಾರು ₹ 6.6 ಕೋಟಿಯಿಂದ ₹ 6.6 ಸಾವಿರ ಕೋಟಿ) ಸಂಪತ್ತು ಹೊಂದಿರುವವರನ್ನು ಮಿಲಿಯನೇರ್ ಅಥವಾ ಶತ ಕೋಟ್ಯಧಿಪತಿ ಎಂದು ನ್ಯೂ ವರ್ಲ್ಡ್‌ ವೆಲ್ತ್‌ ವರದಿಯಲ್ಲಿ ಪರಿಗಣಿಸಲಾಗಿದೆ. 100 ಕೋಟಿ ಅಮರಿಕನ್‌ ಡಾಲರ್‌ಗಿಂತ (ಸು. ₹ 6.6 ಸಾವಿರ ಕೋಟಿ) ಹೆಚ್ಚು ಸಂಪತ್ತು ಇದ್ದವರನ್ನು ಬಿಲಿಯನೇರ್‌ ಅಥವಾ ಸಹಸ್ರ ಕೋಟ್ಯಧಿಪತಿಗಳು ಎಂದು ಕರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT