ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಸ್ಟರ್‌ನಲ್ಲಿ ಕಾಣಿಸಿದ ದೇಗುಲ ಯಾವುದು?

Last Updated 27 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

‘ಬಾಹುಬಲಿ 2’ ಸಿನಿಮಾದ ಪೋಸ್ಟರ್‌ ಅಭಿಮಾನಿಗಳ ಮನ ಗೆಲ್ಲುವಲ್ಲಿ ಸಫಲವಾಗಿದೆ. ಫೆ.25ರಂದು ಅಪ್‌ಲೋಡ್ ಆಗಿರುವ ಪೋಸ್ಟರ್‌ ಅನ್ನು ಈವರೆಗೆ ಸುಮಾರು 6 ಲಕ್ಷ ಮಂದಿ ವೀಕ್ಷಿಸಿದ್ದಾರೆ.

ಆನೆಯ ಸೊಂಡಿಲ ಮೇಲೆ ಕಾಲಿಟ್ಟಿರುವ ಪ್ರಭಾಸ್ ಚಿತ್ರ ಅಭಿಮಾನಿಗಳನ್ನು ಚಿತ್ರಕ್ಕಾಗಿ ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ಶೀಘ್ರ ಟ್ರೇಲರ್‌ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ.

‘ಬಾಹುಬಲಿ 2’ ಸಿನಿಮಾದ ಪ್ರಚಾರ ಪೋಸ್ಟರ್‌ನಲ್ಲಿ ಹಿನ್ನೆಲೆಯಾಗಿ ಕಾಣಿಸಿಕೊಂಡಿರುವ ದೇಗುಲ ಯಾವುದು ಎಂಬ ಬಗ್ಗೆ ಆನ್‌ಲೈನ್‌ನಲ್ಲಿ ಬಿಸಿಬಿಸಿ ಚರ್ಚೆ ಆರಂಭವಾಗಿದೆ.

‘ತಮಿಳುನಾಡಿನ ಗಂಗೈಕೊಂಡದಲ್ಲಿರುವ ಚೋಳಾಪುರಂ ದೇಗುಲ ಪೋಸ್ಟರ್‌ನಲ್ಲಿ ಕಾಣಿಸಿಕೊಂಡಿದೆ. ಕಾಶಿಯನ್ನು ಗೆದ್ದ ನೆನಪಿಗೆ ರಾಜೇಂದ್ರ ಚೋಳ ಈ ದೇಗುಲ ಕಟ್ಟಿಸಿದ್ದ. ಇದು ದಿಗ್ವಿಜಯದ ಸಂಕೇತ’ ಎಂದು ನಿರಂಜನ್‌ ರಂಜನ್ ಎಂಬ ಅಭಿಮಾನಿಯೊಬ್ಬರು ಯುಟ್ಯೂಬ್‌ನಲ್ಲಿ ಕಾಮೆಂಟ್‌ ಮಾಡಿದ್ದಾರೆ.
ಪ್ರಭಾಸ್ ಪೋಸ್ಟರ್‌ನಲ್ಲಿ ಆನೆಯ ಮೇಲೆ ಕಾಣಿಸಿಕೊಂಡಿರುವ ದೃಶ್ಯಕ್ಕೂ ಥಾಯ್ ಚಿತ್ರ ‘ಆಂಗ್‌ ಬಾಕ್ 2’ ಚಿತ್ರವೇ ಪ್ರೇರಣೆ ಎಂಬ ಮಾತುಗಳು ಕೇಳಿ ಬಂದಿವೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT