ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿಗೆ ಕೃತಜ್ಞತೆ ಹೇಳುವ ವಿಶಿಷ್ಟ ಉತ್ಸವ

Last Updated 1 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಸಾವು ಖಚಿತ. ಆದರೆ ಎಷ್ಟೋ ಮಂದಿ ಸಾವಿನ ಸಮೀಪ ಹೋಗಿ ಬದುಕಿಗೆ ಮರಳಿರುತ್ತಾರೆ. ಇದು ಅವರ ಜೀವನದಲ್ಲಿ ದೊರೆತ ಎರಡನೇ ಅವಕಾಶವೂ ಆಗಿರುತ್ತದೆ. ಬದುಕಿನ ಕುರಿತು ಒಂದು ಕೃತಜ್ಞ ಭಾವವೂ ಮೂಡುತ್ತದೆ.

ಇಂಥ ಅನುಭವವನ್ನುಮನಗಾಣಲು ಹಾಗೂ ಮನಗಾಣಿಸಲು ಸ್ಪೇನ್‌ನಲ್ಲಿ ಒಂದು ಉತ್ಸವವೇ ನಡೆಯುತ್ತದೆ. ಅದರ ಹೆಸರು ‘ನಿಯರ್ ಡೆತ್ ಫೆಸ್ಟಿವಲ್’ (ಸಾವಿನ ಸಮೀಪದ ಉತ್ಸವ). ಸ್ಪೇನ್‌ನ ಲಾಸ್‌ ನೀವ್ಸ್‌ ಎಂಬಲ್ಲಿ ಪ್ರತಿ ವರ್ಷ ಜುಲೈ 29ರಂದು ಈ ಉತ್ಸವ ನಡೆಯುತ್ತದೆ.

ಧಾರ್ಮಿಕ ವಿಧಿ ವಿಧಾನದಂತೆ ಆಚರಿಸುವ ಈ ಉತ್ಸವ ಬದುಕಿಗೆ ನಾವು ತೋರಬೇಕಾದ ಕೃತಜ್ಞತೆಯ ಧ್ಯೋತಕವಂತೆ. ಆ ದಿನ ಅಲ್ಲಿ ನೂರಾರು ಮಂದಿ ಸೇರುತ್ತಾರೆ. ಆ ವರ್ಷದಲ್ಲಿ ನಿಜವಾಗಿಯೂ ಸಾವಿನ ಸಮೀಪಕ್ಕೆ ಹೋಗಿಬಂದಂಥ ಅನುಭವ ಪಡೆದವರನ್ನು ಶವದ ಪೆಟ್ಟಿಗೆಯಲ್ಲಿ ಇರಿಸಿ ಬೆಟ್ಟದ ಮೇಲಿನ ಸಮಾಧಿಗೆ ಹೊತ್ತೊಯ್ಯಲಾಗುತ್ತದೆ. ನಂತರ ಅಲ್ಲಿಂದ ಕೆಳಗಿರುವ ಚರ್ಚ್‌ಗೆ ಬಂದು, ಪ್ರದಕ್ಷಿಣೆ ಹಾಕಿ ಅವರನ್ನು ಇಳಿಸಲಾಗುತ್ತದೆ.

ಅವರಿಗೆ ಬದುಕಲು ಸಿಕ್ಕ ಎರಡನೇ ಅವಕಾಶವನ್ನು ಗೌರವಿಸುವ ರೀತಿ ಇದಾಗಿದ್ದು, ಅವರು ಪೆಟ್ಟಿಗೆಯಿಂದ ಎದ್ದ ನಂತರ ತಮ್ಮ ಅನುಭವವನ್ನು ಜನರೊಂದಿಗೆ ಹಂಚಿಕೊಳ್ಳುವುದು ಉತ್ಸವದ ರಿವಾಜು. ಆ ಮೂಲಕ ಸಾವು–ಬದುಕಿನ ಮೌಲ್ಯವನ್ನು ತಿಳಿಸುವುದು ಈ ಉತ್ಸವದ ಮೂಲ ಉದ್ದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT