ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಪ್ಪಳ ತಯಾರಿಕೆಗೆ ಹೊಸ ಯಂತ್ರ

Last Updated 2 ಮಾರ್ಚ್ 2017, 19:46 IST
ಅಕ್ಷರ ಗಾತ್ರ

ಮೈಸೂರು: ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ಅಭಿವೃದ್ಧಿಪಡಿಸಿರುವ ಎರಡು ನೂತನ ಉತ್ಪನ್ನಗಳನ್ನು ಸಂಸ್ಥೆಯ ನಿರ್ದೇಶಕ ಪ್ರೊ.ರಾಮರಾಜಶೇಖರನ್ ಗುರುವಾರ ಇಲ್ಲಿ ಬಿಡುಗಡೆ ಮಾಡಿದರು.

ಪೆಡಲ್‌ ಮೂಲಕ ಹಪ್ಪಳ ತಯಾರಿಸುವ ಯಂತ್ರ ಹಾಗೂ ರೈಸ್‌್ ಮಿಲ್ಕ್ ಮಿಕ್ಸ್‌್ ಉತ್ಪನ್ನಗಳನ್ನು ಅನಾವರಣಗೊಳಿಸಿದರು. 
ಹಪ್ಪಳ ತಯಾರಿಸುವ ಯಂತ್ರದಿಂದ ಒಂದು ಗಂಟೆಗೆ 400 ಹಪ್ಪಳ ತಯಾರಿಸಬಹುದು. ಇದಕ್ಕೆ ₹ 15 ಸಾವಿರ ತಗಲುತ್ತದೆ. ರೈಸ್‌ಮಿಲ್ಕ್ ಮಿಕ್ಸ್‌್ 6 ತಿಂಗಳ ಮಗುವಿನಿಂದ 6 ವರ್ಷದವರೆಗಿನ ಮಕ್ಕಳಿಗೆ ನೀಡಬಹುದಾದ ಪೌಷ್ಟಿಕಾಂಶಯುಕ್ತ ಉತ್ಪನ್ನ. ಇದು ಮಕ್ಕಳ ಬೆಳವಣಿಗೆಗೆ ಸಹಕಾರಿ.

ಆಮ್ಲಾ ಕ್ಯಾಂಡಿ, ಸಂಯೋಜಿತ ರಾಗಿ ಬ್ರೆಡ್, ಹಣ್ಣಿನ ಲೇಹ್ಯ, ಹಸಿಮೆಣಸಿನಕಾಯಿ ಸಾಸ್, ಪ್ರೊಟೀನ್‌ಯುಕ್ತ ಬನ್‌ಗಳು, ದೋಸೆ ಹಾಗೂ ಇಡ್ಲಿ ಹಿಟ್ಟು, ಸಂಸ್ಕರಿಸಿದ ಅರಿಸಿನ, ಫ್ಲೇಕ್ಸ್ ರೈಸ್, ಸಂಸ್ಕರಿಸಿದ ಸಿರಿಧಾನ್ಯಗಳ ಉತ್ಪನ್ನಗಳ ತಯಾರಿಕಾ ತಂತ್ರಜ್ಞಾನಗಳನ್ನು ಸಿಎಫ್‌ಟಿಆರ್‌ಐ 2013ರಲ್ಲಿ ಅಂತರ್ಜಾಲದಲ್ಲಿ ಉಚಿತವಾಗಿ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿತ್ತು.

ಇದನ್ನು 4,539 ಮಂದಿ ಡೌನ್‌ಲೋಡ್‌ ಮಾಡಿಕೊಂಡಿದ್ದು, ಇವರಲ್ಲಿ ಕೆಲವರು ತಯಾರಿಕೆ ಆರಂಭಿಸಿದ್ದಾರೆ. ಅಂತರ್ಜಾಲ ವಿಳಾಸ www.cftri.com.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT