ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಧರ ಕರ್ತವ್ಯದ ಅರಿವಿಗಾಗಿ ಅಭಿಯಾನ

ಜಿಲ್ಲೆಯ ವಿವಿಧೆಡೆ ಆರ್‌ಎಫ್‌ ಯೋಧರ ಪಥ ಸಂಚಲನ; ಶಾಂತಿ ಪಾಲನೆ, ತುರ್ತುಪರಿಸ್ಥಿತಿ ನಿರ್ವಹಣೆ ಕುರಿತು ಮಾಹಿತಿ
Last Updated 3 ಮಾರ್ಚ್ 2017, 9:09 IST
ಅಕ್ಷರ ಗಾತ್ರ

ಲಕ್ಕುಂಡಿ (ಗದಗ ತಾ.): ದೇಶದಲ್ಲಿ ಅತಿ ವೃಷ್ಟಿ, ಭೂಕಂಪ, ಕೋಮು ಗಲಭೆ, ಹಿಂಸಾಚಾರ ಸೇರಿದಂತೆ ವಿವಿಧ ಘಟನೆ ಗಳಲ್ಲಿ ಸಿಲುಕಿಕೊಂಡ ಅಮಾಯಕರ ಸಂರಕ್ಷಣೆ ಮಾಡುವುದೇ ಸಿಆರ್‌ಪಿಎಫ್ ಯೋಧರ ಕರ್ತವ್ಯವಾಗಿದೆ ಎಂದು ಸಿಕಂದರಾಬಾದ್‌ನ ಆರ್‌ಎಫ್‌ 99 ಬೆಟಾಲಿಯನ್‌ನ ಸಹಾಯಕ ಕಮಾಡೆಂಟ್ ಸಂತೋಷಕುಮಾರ್‌ ಹೇಳಿದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಿಕಂದರಾಬಾದ್‌ನ ಆರ್‌ಎಫ್‌ 99 ಬೆಟಾಲಿಯನ್‌ ತಂಡದಿಂದ ಪಥ ಸಂಚ ಲನ ಈಚೆಗೆ ನಡೆಯಿತು. ನಂತರ ಅನ್ನ ದಾನೀಶ್ವರ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಸಿಆರ್‌ಪಿಎಫ್‌ ಅಡಿಯಲ್ಲಿ ಆರ್‌ಎಫ್‌ 99 ಬೆಟಾಲಿಯನ್ ಹೈದ್ರಾಬಾದ್‌ನ ಕೇಂದ್ರ ಸ್ಥಾನದಲ್ಲಿ ಕಾರ್ಯ ನಿರ್ವಹಿಸು ತ್ತಿದೆ. ಬೆಂಕಿ ಅವಘಡ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಪ್ರಾಣಾಪಾಯದಲ್ಲಿ ಜನರು ಸಿಲುಕಿದ್ದರೆ, ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಒಂದು ಗಂಟೆಯೊಳಗೆ ಆಯಾ ಸ್ಥಳಕ್ಕೆ ಪಡೆ ಬರುತ್ತದೆ.

ಈ ಬೆಟಾಲಿಯನ್‌ ವ್ಯಾಪ್ತಿಗೆ ಕರ್ನಾಟಕ, ಗೋವಾ, ಮಹಾ ರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳು ಸೇರುತ್ತವೆ ಎಂದು ಅವರು, ಸಮಾಜ ದಲ್ಲಿ ಶಾಂತಿ, ಸುವ್ಯವಸ್ಥೆ, ಭಯೋತ್ಪಾ ದನೆಯನ್ನು ತಡೆಯುವುದು ಪಡೆಯ ಮುಖ್ಯ ಉದ್ದೇಶವಾಗಿದೆ. ಗ್ರಾಮಗಳ ಮುಖಂಡರಿಗೆ ಈ ಕುರಿತು ಮಾಹಿತಿ ಇರಬೇಕು ಎನ್ನುವ ಕಾರಣಕ್ಕೆ ಪಥ ಸಂಚಲನ ಜರುಗಿತು ಎಂದರು.

ದೇಶ ಕಾಯುವ ಯೋಧರ ಬಗ್ಗೆ ಎಲ್ಲರಲ್ಲೂ ಗೌರವಿರಬೇಕು. ಸೈನಿಕರು ಪರಿಶ್ರಮದಿಂದ ಗಡಿ ಕಾಯುತ್ತಿರುವುದರಿಂದ ದೇಶದಲ್ಲಿರುವ ಎಲ್ಲರೂ ಸುರಕ್ಷೀತವಾಗಿದ್ದೇವೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಎಂ.ಬೂದಿ ಹಾಳ ತಿಳಿಸಿದರು.

ಪಂಥ ಸಂಚಲನದಲ್ಲಿ 10 ಮಹಿಳಾ ಯೋಧರು ಸೇರಿದಂತೆ 90 ಜನ ಯೋಧರು ಪಾಲ್ಗೊಂಡರು. ಬಳಿಕ ಯೋಧರು ಐತಿಹಾಸಿಕ ಸ್ಮಾರಕ ಕಾಶಿ ವಿಶ್ವನಾಥ, ನನ್ನೇಶ್ವರ, ಬ್ರಹ್ಮ ಜೀನಾ ಲಯ, ಸೂರ್ಯ ದೇವಾಲಯಗಳನ್ನು ವೀಕ್ಷಿಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪ್ರೇಮಾ ಮಟ್ಟಿ, ಗ್ರಾಮೀಣ ಪಿಎಸ್ಐ ಎಲ್.ಕೆ.ಜೂಲಕಟ್ಟಿ, ಅ.ದ.ಕ ಟ್ಟಿಮನಿ ಇದ್ದರು.

ಜನರ ಆತ್ಮಸ್ಥೈರ್ಯ ಹೆಚ್ಚಿಸಿದ ಯೋಧರು
ಮುಂಡರಗಿ:
ಪಟ್ಟಣ ಸೇರಿ ತಾಲ್ಲೂಕಿನಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಿಕಂದ್ರಾಬಾದ್‌ನ ಕ್ಷಿಪ್ರ ಕಾರ್ಯಾಚರಣೆ ಪಡೆಯ ಯೋಧರು ಗುರುವಾರ ಪಟ್ಟ ಣದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ಕೈಗೊಂಡರು.

ಮಧ್ಯಾಹ್ನ 1 ಗಂಟೆಗೆ ಸ್ಥಳೀಯ ಪೊಲೀಸ ಠಾಣೆಯಿಂದ ಹೊರಟ ಕ್ಷಿಪ್ರ ಕಾರ್ಯಾಚರಣೆಯ ಪಡೆಯ ಯೋಧರು ಪಟ್ಟಣದ ಜಾಗೃತ ವೃತ್ತ, ಗಾಂಧೀ ವೃತ್ತ, ಮುಖ್ಯ ಮಾರುಕಟ್ಟೆ, ಮಾಬುಸುಬಾನಿ ನಗರ, ಅಂಬಾಭವಾನಿ ನಗರ, ಕೇಂದ್ರ ಬಸ್ ನಿಲ್ದಾಣ, ಕಾಲೇಜು ರಸ್ತೆ, ಭಜಂತ್ರಿ ಓಣಿ, ಕೊಪ್ಪಳ ಕ್ರಾಸ್ ಮಾರ್ಗವಾಗಿ ಪುನಃ ಪೊಲೀಸ ಠಾಣೆಗೆ ಆಗಮಿಸಿದರು. ನಂತರ ಪೊಲೀಸ ಠಾಣೆಯಲ್ಲಿ ಸಾರ್ವಜ ನಿಕರ ಶಾಂತಿ ಸಭೆ ಹಮ್ಮಿಕೊಳ್ಳಲಾಯಿತು.

ಸಿಪಿಐ ಮಂಜುನಾಥ ನಡುವಿನಮನಿ ಮಾತನಾಡಿ, ನಮ್ಮ ಭಾಗದಲ್ಲಿ ಯಾವು ದಾದರೂ ಪ್ರಾಕೃತಿಕ ವಿಕೋಪ ಅಥವಾ ಸಾರ್ವಜನಿಕ ಗಲಾಟೆಗಳು ಸಂಭವಿಸಿದರೆ ಕ್ಷಿಪ್ರ ಕಾರ್ಯಾಚರಣೆಯ ಪಡೆಯ ಯೋಧರ ತಕ್ಷಣ ಸ್ಥಳಕ್ಕಾಗಮಿಸಿ ಪೊಲೀ ಸರ ನೆರವಿನೊಂದಿಗೆ ಶಾಂತಿ ಸುವ್ಯವ ಸ್ಥೆಯನ್ನು ಸ್ಥಾಪಿಸಲು ಪ್ರಯತ್ನಿಸುತ್ತಾರೆ ಎಂದು ತಿಳಿಸಿದರು.

ಕ್ಷಿಪ್ರ ಕಾರ್ಯಾಚರಣೆಯ ಪಡೆಯ ಯೋಧರು ಗುರುವಾರ ಮುಂಜಾನೆ ತಾಲ್ಲೂಕಿನ ಡಂಬಳ ಹಾಗೂ ಡೋಣಿ ಗ್ರಾಮಗಳಲ್ಲಿ ಸಂಚರಿಸಿ ಜನ ಜಾಗೃತಿ ಮೂಡಿಸಿದ್ದಾರೆ. ಮುಂಡರಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ಕೈಗೊಂಡಿದ್ದಾರೆ. ತುರ್ತು ಸಂದರ್ಭಗಳಲ್ಲಿ ಸ್ಥಳಿಯ ಪೊಲೀಸರ ನೆರವಿನೊಂದಿಗೆ ಸದಾ ಸಾರ್ವಜನಿಕರ ಸೇವೆಗೆ ಸನ್ನದ್ಧ ರಾಗಿರುತ್ತಾರೆ ಎಂದು ತಿಳಿಸಿದರು.

ಪುರಸಭೆ ಸದಸ್ಯ ಬಸವರಾಜ ರಾಮೇನಹಳ್ಳಿ, ಮುಖಂಡರಾದ ಶ್ರೀನಿ ವಾಸ ಅಬ್ಬಿಗೇರಿ, ನಾಗೇಶ ಹುಬ್ಬಳ್ಳಿ, ಪಿಎಸ್ಐ ತಳವಾರ, ಮಹಾಂತೇಶ, ಯರಾಸಿ ಹಾಜರಿದ್ದರು.

ನರಗುಂದದಲ್ಲೂ ಪಥ ಸಂಚಲನ
ನರಗುಂದ:
ಕ್ರಿಪ್ರ ಕಾರ್ಯಾಚರಣೆ ಪಡೆ ಸದಸ್ಯರು ಪಟ್ಟಣದಲ್ಲಿ ಬುಧವಾರ ಪಥ ಸಂಚಲನ ನಡೆಸಿ ಜನಸಾಮಾನ್ಯರಿಗೆ ಭದ್ರತೆ ಒದಗಿಸುವ ಸಂದೇಶ ಸಾರುವ ಮೂಲಕ ಜಾಗೃತಿ ಮೂಡಿಸಿದರು.

ಸಿಕಂದರಾಬಾದ್‌ ಹಾಕಿಂಪೇಟನ 99ನೇ ಬೆಟಾಲಿಯನ್‌ ಕ್ರಿಪ್ರ ಕಾಯಾರ್ಚರಣೆ ಪಡೆ  (ಆರ್‌ಎಎಫ್‌) 15 ಮಹಿಳಾ ಸಿಬ್ಬಂದಿ ಸೇರಿ 120  ಸಿಬ್ಬಂದಿ ಒಳ ಗೊಂಡ ತುಕಡಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿ ಸಿತು. ನಂತರ ಪೊಲೀಸ್‌ ಠಾಣೆ  ಆವರಣ ದಲ್ಲಿ ಸಭೆ ನಡೆಸಿ ಶಾಲಾ ವಿದ್ಯಾರ್ಥಿಗಳಿಗೆ ಪಥ ಸಂಚಲನದ ವಿವರ ನೀಡಿತು.

ಈ ಸಂದರ್ಭದಲ್ಲಿ ಮಾತನಾಡಿದ 99ನೇ ಬೆಟಾಲಿಯನ್‌ನ ಸಹಾಯಕ ಕಮಾಂಡರ್‌ ಸಂತೋಷಕುಮಾರ ಕ್ರಿಪ್ರ ಕಾರ್ಯಾಚರಣೆ ಪಡೆಯು ಯಾವಾಗಲೂ ದುಷ್ಟ ಶಕ್ತಿಗಳ ವಿರುದ್ದ ಹೋರಾಡುತ್ತದೆ. ಶಾಂತಿ ವ್ಯವಸ್ಥೆ ಕದಡುವ  ಯಾರೇ ಇದ್ದರೂ ಅವರ ವಿರುದ್ಧ ಸಮರಕ್ಕೆ ಸಿದ್ದ ಎಂದರು. ಪಡೆಯ ಉದ್ದೇಶವನ್ನು ವಿವರಿಸಿದರು.

ಸಿಪಿಐ ರಮಾಕಾಂತ ಮಾತನಾಡಿ ದರು. ಆರ್‌ಎಎಫ್‌ ಮುಖ್ಯಸ್ಥ  ಸುರೇಂದ್ರ ಪಾಲ, ಪುರಸಭೆ ಅಧ್ಯಕ್ಷ ಪ್ರಕಾಶ ಪಟ್ಟಣ ಶೆಟ್ಟಿ, ಸದಸ್ಯರಾದ ಶಿವಾನಂದ ಮುತ ವಾಡ, ಸಮದ್‌ ಮುಲ್ಲಾ, ನಂದೀಶ ಮಠದ, ಚನ್ನು ನಂದಿ, ನಂದೀಶ ಮಠದ, ಪೊಲೀಸ್‌ ಅಧಿಕಾರಿಗಳಾದ ಎಸ್‌.ಎಚ್‌. ದಾಸರ, ಆರ್‌.ಕೆ.ನಾರಾಯಣಕರ್‌, ರಮಾಬಾಯಿ ಮುರಳಿರದಾಸ್‌, ಉದಯ ಬೀರಸಿಂಗ್‌, ಎಸ್‌.ಎಸ್‌.ಹೆಬ್ಸೂರ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT