ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾ ಕಾರ್ಯ, ಸಾಮಾಜಿಕ ಜವಾಬ್ದಾರಿಗೆ ಮನವಿ

Last Updated 3 ಮಾರ್ಚ್ 2017, 8:41 IST
ಅಕ್ಷರ ಗಾತ್ರ

ಆನೇಕಲ್‌: ಸರ್ಕಾರಿ ಶಾಲೆಗಳಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸಿ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರದ ಜೊತೆಗೆ ಸಾರ್ವಜನಿಕರ ಸಹಭಾಗಿತ್ವ ಅವಶ್ಯಕ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಸಾಮಾಜಿಕ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಟಿ.ದಯಾನಂದ ತಿಳಿಸಿದರು.

ಅವರು ತಾಲ್ಲೂಕಿನ ಹುಸ್ಕೂರು ಗೇಟ್‌ನಲ್ಲಿ ದಯಾನಂದ ಪ್ರತಿಷ್ಠಾನ, ಲ್ಯಾಂಡ್‌ ಮಾರ್ಕ್‌ ಸಂಸ್ಥೆ ಹಾಗೂ ಇಂಡಿಯನ್‌ ಇನ್‌್ಸಸ್ಟಿಟ್ಯೂಟ್ ಆಫ್ ಇಂಟಿಯರ್ ಡೆಕೋರೇಷನ್‌ ಸಂಸ್ಥೆಯ ಸಹಯೋಗದಲ್ಲಿ ಸಾಮಾಜಿಕ ಕಾರ್ಯಗಳನ್ನು ನಿರ್ವಹಿಸಲು ಒಡಂಬಡಿಕೆ ಹಾಗೂ ಸೇವಾ ಕಾರ್ಯಗಳಿಗೆ ವಸ್ತುಗಳಿಗಾಗಿ ಗೋದಾಮು ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲೆಡೆ ಮನೆ ನಿರ್ಮಾಣ ಮಾಡಿ ಉಳಿದ ವಸ್ತುಗಳು ಹಾಗೂ ಇಂಟಿಯರ್‌ ಡೆಕೋರೇಷನ್‌ಗೆ ಬಳಸಿದ ಉಳಿಕೆ ವಸ್ತುಗಳನ್ನು ಸಂಗ್ರಹಿಸಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ, ಕೊಠಡಿಗಳ ನಿರ್ಮಾಣ ಹಾಗೂ ಕೊಳಚೆ ಪ್ರದೇಶಗಳಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸಲು ಸಂಗ್ರಹಣೆ, ವಿಂಗಡಣೆ ಹಾಗೂ ವಿತರಣೆಗಾಗಿ ಲ್ಯಾಂಡ್‌ಮಾರ್ಕ್‌ ಮಳಿಗೆಯ ವಿಶಾಲ ಗೋದಾಮನ್ನು ಉಚಿತವಾಗಿ ನೀಡಲಾಗಿದೆ.

ದಯಾನಂದ ಪ್ರತಿಷ್ಠಾನ, ಲ್ಯಾಂಡ್‌ ಮಾರ್ಕ್‌ ಸಂಸ್ಥೆ ಹಾಗೂ ಇಂಡಿಯನ್‌ ಇನ್ಸ್‌ಸ್ಟಿಟ್ಯೂಟ್ ಆಫ್ ಇಂಟಿಯರ್ ಡೆಕೋರೇಷನ್‌ ಸಂಸ್ಥೆಯ ಸಹಯೋಗದಲ್ಲಿ ಕಾರ್ಯಕ್ರಮವನ್ನು ಅನುಷ್ಠಾನ ಗೊಳಿಸಲಾಗುವುದು ಎಂದರು.

ಸರ್ಕಾರಿ ಶಾಲೆಗಳನ್ನು ಸುಂದರಗೊಳಿಸುವುದು ಸೇರಿದಂತೆ ಶೈಕ್ಷಣಿಕ ಕ್ಷೇತ್ರದಲ್ಲಿ ನೆರವು ನೀಡಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ದೇಶದಲ್ಲೇ ಇದೊಂದು ಅತ್ಯುತ್ತಮ ಪ್ರಯತ್ನವಾಗಿದ್ದು ಸಂಸ್ಥೆಯು ಸಾಮಾಜಿಕ ಜವಾಬ್ದಾರಿ ಯೋಜನೆಯಡಿ (ಸಿಎಸ್‌ಆರ್‌) ಕಾರ್ಯರೂಪಕ್ಕೆ ತರಲು ಕ್ರಮ ಕೈಗೊಂಡಿದ್ದು ಅನುಭವಿಗಳು ಹಾಗೂ ತಜ್ಞರ ತಂಡವು ರಾಜ್ಯದಲ್ಲಿಯೇ ಮೊದಲ ಶಾಖೆಯನ್ನು ಹುಸ್ಕೂರು ಗೇಟ್‌ ಬಳಿ ತೆರೆದಿದೆ ಎಂದರು. 

ಐಐಐಡಿ ಸಂಸ್ಥೆಯ ಅಧ್ಯಕ್ಷೆ ಗಾಯತ್ರಿ ಶೆಟ್ಟಿ ಮಾತನಾಡಿ, ಅನುಪಯುಕ್ತ ವಸ್ತುಗಳನ್ನು ಹಾಗೂ ಬಳಕೆ ಮಾಡಿ ಉಳಿದ ವಸ್ತುಗಳನ್ನು ಉಪಯೋಗಿಸಿ ಸಮಾಜ ಕಾರ್ಯಗಳಲ್ಲಿ ಪುನರ್‌ ಉಪಯೋಗಿಸಲು ಯೋಜನೆ ರೂಪಿಸಲಾಗಿದೆ ಎಂದರು.

ಭಾರತ್‌ ಗೋಲ್‌ಸ್ಟಾರ್‌ ನಿರ್ದೇಶಕ ಭರತ್‌, ಐಐಐಡಿ ನಿರ್ದೇಶಕರಾದ ಶ್ಯಾಮಲಪ್ರಸಾದ್, ದಿನೇಶ್ ವರ್ಮಾ, ದೆಬ್ರಾಯ್, ಕವಿತಾಶಾಸ್ತ್ರಿ, ಗುಂಜನ್‌ದಾಸ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT