ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದಲ್ಲಿ ಸಿಪಿಎಂ-ಆರ್‍ಎಸ್‍ಎಸ್ ಸಂಘರ್ಷ; ಡಿವೈಎಫ್‍ಐ ಕಾರ್ಯಕರ್ತರ ಮೇಲೆ ಹಲ್ಲೆ

Last Updated 3 ಮಾರ್ಚ್ 2017, 9:55 IST
ಅಕ್ಷರ ಗಾತ್ರ

ಪಾಲಕ್ಕಾಡ್ : ಕೇರಳದಲ್ಲಿ ಸಿಪಿಎಂ ಮತ್ತು ಆರ್‌‍ಎಸ್‍ಎಸ್ ನಡುವೆ ಸಂಘರ್ಷ ಮುಂದುವರಿದಿದ್ದು, ಪಾಲಕ್ಕಾಡ್ ಜಿಲ್ಲೆಯ ಇಲುಪುಳ್ಳಿ ಎಂಬಲ್ಲಿ ಡಿವೈ‍ಎಫ್‍ಐ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ.

ಬೈಕ್‍‌ನಲ್ಲಿ ಬಂದ 5 ಮಂದಿ ಡಿವೈ‍ಎಫ್‍ಐ ಕಾರ್ಯಕರ್ತರಾದ ರತೀಶ್ (30), ಯೂಸಫ್ (31) ಮತ್ತು ಸುದೇಶ್ (28) ಎಂಬವರ ಮೇಲೆ ಹಲ್ಲೆ ನಡೆಸಿದ್ದಾರೆ. ಗುರುವಾರ ಕೋಝಿಕ್ಕೋಡ್ ಜಿಲ್ಲೆಯ ಕಳ್ಳಾಚ್ಚಿಯಲ್ಲಿ ಆರ್‍ಎಸ್‍ಎಸ್ ಕಚೇರಿ ಮೇಲೆ ಬಾಂಬ್ ದಾಳಿ ನಡೆಯುವುದಕ್ಕಿಂತ ತುಸು ಗಂಟೆಗಳ ಮುನ್ನ ಪಾಲಕ್ಕಾಡ್‍ನಲ್ಲಿ  ಹಲ್ಲೆ ನಡೆದಿದೆ.

ಡಿವೈ‍ಎಫ್‍ಐ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಬಿಜೆಪಿ ಕಾರ್ಯಕರ್ತರ ಮೇಲೆ ಕೇಸು ದಾಖಲಿಸಿದ್ದಾರೆ.

ಗುರುವಾರ ರಾತ್ರಿ ಕೋಝಿಕ್ಕೋಡ್‍ನ ವಿಷ್ಣುಮಂಗಲಂನಲ್ಲಿರುವ ಸಿಪಿಎಂ ಕಚೇರಿಗೆ ಕಿಚ್ಚಿಡಲಾಗಿದೆ.

[related]

ಕೇರಳದಲ್ಲಿ ಕಮ್ಯೂನಿಸ್ಟ್ ಸರ್ಕಾರ ಅಧಿಕಾರಕ್ಕೇರಿದ ನಂತರ ಕಳೆದ ಎಂಟು ತಿಂಗಳಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತರ ಮೇಲೆ ಹಲ್ಲೆ, ದಾಳಿಗಳು ನಡೆದು ಬರುತ್ತಿವೆ ಎಂದು ಆರ್‍ಎಸ್‍ಎಸ್ ದೂರಿದೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಲೆಕಡಿದವರೆ ₹1 ಕೋಟಿ ಬಹುಮಾನ ನೀಡುವುದಾಗಿ ಉಜ್ಜೈನಿಯ ಆರ್‍ಎಸ್‍ಎಸ್ ನೇತಾರ ಕುಂದನ್ ಚಂದ್ರಾವತ್ ಘೋಷಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಪಿಣರಾಯಿ ವಿಜಯನ್,  ತಾನು ಇಂಥಾ ಬೆದರಿಕೆಗಳಿಗೆ ಹೆದರುವವನಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT