ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದೃಢ ದೇಶ ನಿರ್ಮಾಣಕ್ಕೆ ಮುಂದಾಗಿ

ರಾಜ್ಯ ಮಟ್ಟದ ಕೌಶಲ, ಉದ್ಯೋಗ ಮೇಳದಲ್ಲಿ ಸಚಿವ ಸಂತೋಷ ಲಾಡ್‌ ಸಲಹೆ
Last Updated 4 ಮಾರ್ಚ್ 2017, 7:20 IST
ಅಕ್ಷರ ಗಾತ್ರ

ಸಂಡೂರು: ಯುವಕರು ಉತ್ತಮ ಶಿಕ್ಷಣ, ಕೌಶಲವನ್ನು ಬೆಳೆಸಿಕೊಂಡು ಸದೃಢ ರಾಜ್ಯ ಹಾಗೂ ದೇಶ ನಿರ್ಮಾಣದಲ್ಲಿ ತೊಡಗಬೇಕೆಂದು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಸಲಹೆ ನೀಡಿದರು.

ಅವರು ತಾಲ್ಲೂಕಿನ ತೋರಣಗಲ್‌ನಲ್ಲಿ ಶುಕ್ರವಾರ ಕಾರ್ಮಿಕ, ಉದ್ಯೋಗ ಮತ್ತು ತರಬೇತಿ ಇಲಾಖೆ, ಜಿಲ್ಲಾಡಳಿತ ಹಾಗೂ ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ಕೌಶಲ ಮತ್ತು ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಮೇಳದಲ್ಲಿ ಉದ್ಯೋಗ ಪಡೆದ ಹಲವರು ಕೆಲಸಕ್ಕೆ ಬರುತ್ತಿಲ್ಲವೆಂದು ಕೆಲವು ಕಂಪೆನಿಗಳು ಹೇಳುತ್ತಿವೆ. ಆದ್ದರಿಂದ ಉದ್ಯೋಗ ಮೇಳದಲ್ಲಿ ಭಾಗವಹಿಸಿದವರು ಸಂದರ್ಶನದ ಸಂದರ್ಭದಲ್ಲಿ ಸಂಬಳ ಮುಂತಾದ ವಿಷಯಗಳನ್ನು ಸರಿಯಾಗಿ ವಿಚಾರಿಸಿ, ಉದ್ಯೋಗ ಪಡೆದುಕೊಳ್ಳಿ.

ಒಮ್ಮೆ ಉದ್ಯೋಗ ಪತ್ರ ಪಡೆದ ಮೇಲೆ ಉದ್ಯೋಗಕ್ಕೆ ಹೋಗಬೇಕು ಎಂದರಲ್ಲದೆ, ಉದ್ಯೋಗ ಮೇಳದಲ್ಲಿ ಸುಮಾರು 36 ಸಾವಿರ ಅಭ್ಯರ್ಥಿಗಳು ಉದ್ಯೋಗಕ್ಕಾಗಿ ಹೆಸರು ನೊಂದಾಯಿಸಿಕೊಂಡಿದ್ದಾರೆ.

ಮೇಳದಲ್ಲಿ ಇನ್ಫೋಸಿಸ್, ಟೊಟೊಟಾ, ಟಾಟಾ, ಡೆನ್ಸೂ, ಬ್ರಿಟಾನಿಯಾ ಸೇರಿದಂತೆ 96 ಕಂಪೆನಿಗಳು ಬಂದಿದ್ದು, ಇವುಗಳಿಂದ ಒಟ್ಟು 11218ಜನರಿಗೆ ಉದ್ಯೋಗ ದೊರೆಯಲಿವೆ. ಯುವ ಜನತೆ ಈ ಮೇಳವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.

ಶಾಸಕರಾದ ಅನಿಲ್‌ ಲಾಡ್, ಅಮರನಾಥ್, ಅಲ್ಲಂ ವೀರಭದ್ರಪ್ಪ, ಕೌಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರಳೀಧರ್ ಹಾಲಪ್ಪ,  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಈ. ತುಕಾರಾಂ ಮಾತನಾಡಿದರು.

ಜಿಲ್ಲಾ ಪಂಚಾಯ್ತಿ ಹಂಗಾಮಿ ಅಧ್ಯಕ್ಷೆ ದೀನಾ ಮಂಜುನಾಥ್, ಮಾಜಿ ಶಾಸಕ ಚಂದ್ರಶೇಖರಯ್ಯ, ಎ. ಮಾನಯ್ಯ, ವಿ.ಎಸ್. ಗಿರಿಮಲ್ಲಪ್ಪ,  ಜಿಲ್ಲಾಧಿಕಾರಿ ರಾಮಪ್ರಸಾದ್ ಮನೋಹರ್, ಎಸ್ಪಿ ಆರ್. ಚೇತನ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ರಾಜೇಂದ್ರ, ವಾಡಾ ಅಧ್ಯಕ್ಷ ರೋಷನ್ ಜಮೀರ್ ಸೇರಿದಂತೆ ಹಲವು ಜನಪ್ರತಿನಿಧಿಗಳು, ಸಾವಿರಾರು ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT