ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಟ್ಯೂಬ್‌ನಲ್ಲಿ ‘ಸರ್ಕಾರ್‌ 3’ ಟ್ರೆಂಡಿಂಗ್‌

Last Updated 4 ಮಾರ್ಚ್ 2017, 9:38 IST
ಅಕ್ಷರ ಗಾತ್ರ
ADVERTISEMENT

ರಾಮ್‌ ಗೋಪಾಲ್‌ ವರ್ಮಾ ನಿರ್ದೇಶನದ ‘ಸರ್ಕಾರ್‌’ ಸಿನಿಮಾದ ಮೂರನೇ ಅವತರಣಿಕೆ ಬಿಡುಗಡೆಗೆ ಸಿದ್ಧಗೊಂಡಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್‌ ಯುಟ್ಯೂಬ್‌ ಟ್ರೆಂಡಿಂಗ್‌ನಲ್ಲಿ ಮುಂಚೂಣಿಯಲ್ಲಿದೆ.

‘ಯಾವುದು ಸರಿ ಅನಿಸುತ್ತದೆಯೋ ಅದನ್ನೇ ಮಾಡ್ತೀನಿ. ಅದು ದೇವರ ವಿರುದ್ಧವೇ ಆಗಲಿ...ಸಮಾಜ ಅಥವಾ ಪೊಲೀಸ್, ಕಾನೂನು ಅಥವಾ ಇಡೀ ವ್ಯವಸ್ಥೆಯ ವಿರುದ್ಧವೇ ಆಗಲಿ...’ ಅಮಿತಾಬ್‌ ಗಟ್ಟಿ ದನಿಯಲ್ಲಿ ಹೊರಬಂದಿರುವ ಸಂಭಾಷಣೆ ಚಿತ್ರದ ಕುರಿತ ಕುತೂಹಲ ಹೆಚ್ಚಿಸುವಂತಿದೆ.

ರಾಜಕೀಯ, ಕ್ರೈಂ, ನಾಟಕೀಯ ಅಂಶಗಳ ಮಿಶ್ರಣವೆನಿಸುವ ‘ಸರ್ಕಾರ್‌’ ಚಿತ್ರದ ಮೂರನೇ ಭಾಗ ಏಪ್ರಿಲ್‌ 7ರಂದು ಬಿಡುಗಡೆಯಾಗಲಿದೆ.

ಇತ್ತೀಚೆಗಷ್ಟೇ ಚಿತ್ರತಂಡ ಟ್ರೇಲರ್‌ ಬಿಡುಗಡೆ ಮಾಡಿದ್ದು, ಎರಡೇ ದಿನಗಳಲ್ಲಿ ಟ್ರೇಲರ್‌ 39 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ.

ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಸಕ್ರಿಯನಾಗಿದ್ದ ನಾಯಕ ಇಬ್ಬರು ಮಕ್ಕಳ ಸಾವಿನ ನಂತರ ಮತ್ತಷ್ಟು ಅಪಾಯಕಾರಿ ಆಗಿದ್ದಾನೆ! ಇಲ್ಲಿಂದಲೇ ಕಥೆ ತೆರೆದುಕೊಳ್ಳುತ್ತದೆ.

ರಾಮ್‌ ಗೋಪಾಲ್‌ ವರ್ಮಾ ನಿರ್ದೇಶನದ ಚಿತ್ರಕ್ಕೆ ರವಿ ಶಂಕರ್‌ ಸಂಗೀತವಿದೆ. ಅಮಿತಾಬ್ ಬಚ್ಚನ್‌, ಯಾಮಿ ಗೌತಮ್‌, ಮನೋಜ್‌ ಬಾಜ್ಪೇಯಿ ಹಾಗೂ ಜಾಕಿ ಶ್ರಾಫ್‌ ಮುಂತಾದವರ ಅಭಿನಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT