ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಂಡಾಗಳ ಕಪ್ಪು–ಬಿಳುಪು ರಹಸ್ಯ

Last Updated 4 ಮಾರ್ಚ್ 2017, 13:37 IST
ಅಕ್ಷರ ಗಾತ್ರ
ADVERTISEMENT

ಲಾಸ್‌ ಏಂಜಲೀಸ್‌: ಪಾಂಡಾಗಳ ಕಪ್ಪು–ಬಿಳುಪು ಮೈ ಬಣ್ಣದ ಪ್ರಾಮುಖ್ಯತೆಯನ್ನು ವಿಜ್ಞಾನಿಗಳು ತೆರೆದಿಟ್ಟಿದ್ದಾರೆ.

ಮತ್ತೊಂದು ಜೀವಿಯೊಂದಿಗೆ ಸಂವಹನ ನಡೆಸಲು ಹಾಗೂ ರಕ್ಷಣೆಗಾಗಿ ಮರೆಮಾಡಿಕೊಳ್ಳಲು ಪಾಂಡಾಗಳ ತುಪ್ಪಳದ ಬಣ್ಣ ಸಹಕಾರಿ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

ಕಣ್ಣಿನ ಸುತ್ತ ಕಪ್ಪು, ಬಿಳಿಯ ಮುಖ, ಕಪ್ಪು ಕಿವಿ,..ಹೀಗೆ ಕಪ್ಪು ಮತ್ತು ಬಿಳಿ ಎರಡೂ ಬಣ್ಣವನ್ನು ಹೊಂದಿರುವ ಪಾಂಡಾಗಳ ಕುರಿತು ವಿಜ್ಞಾನಿಗಳು  ಸಂಶೋಧನೆ ನಡೆಸಿದ್ದಾರೆ.

ಆಹಾರಕ್ಕಾಗಿ ಬಿದಿರು ಸಸ್ಯವನ್ನು ಅವಲಂಬಿಸಿದ್ದು, ಇತರೆ ಜಾತಿಯ ಸಸ್ಯಗಳನ್ನು ತಿಂದು ಜೀರ್ಣಿಸಿಕೊಳ್ಳುವ ಶಕ್ತಿ ಹೊಂದಿಲ್ಲ.

195 ಮಾಂಸಾಹಾರಿ ಪ್ರಭೇದಗಳು ಹಾಗೂ 39 ಕರಡಿ ಪ್ರಭೇದಗಳಲ್ಲಿ ತುಪ್ಪಳದ ಬಣ್ಣದ ಕುರಿತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಅಧ್ಯಯನ ನಡೆಸಿದ್ದಾರೆ.

ಹಿಮಾವೃತ ಪರ್ವತಗಳಿಂದ ಹಿಡಿದು ದಟ್ಟ ಕಾಡಿನ ಪ್ರದೇಶಗಳವರೆಗೂ ಸಂಚರಿಸುವ ಪಾಂಡಾಗಳು, ಚಳಿಗಾಲಕ್ಕಾಗಿ ದೇಹದಲ್ಲಿ ಹೆಚ್ಚಿನ ಕೊಬ್ಬಿನಾಂಶ ಶೇಖರಿಸಿಕೊಳ್ಳುವುದಿಲ್ಲ.

ಅಪಾಯದ ಸಂದರ್ಭದಲ್ಲಿ ಎದುರುಗೊಳ್ಳುವ ಪ್ರಾಣಿಗಳಿಗೆ ಕಿವಿಯ ಕಪ್ಪು ಬಣ್ಣದ ಮೂಲಕ ಎಚ್ಚರಿಕೆ ಸಂದೇಶ ರವಾನಿಸುತ್ತವೆ. ಕಣ್ಣಿನ ಸುತ್ತಲಿನ ಕಪ್ಪು ಬಣ್ಣದಿಂದ ಒಂದಕ್ಕೊಂದು ಗುರುತಿಸಿಕೊಳ್ಳುತ್ತವೆ.

ಇನ್ನೂ ಮೈಮೇಲಿನ ಬಿಳಿಯ ಬಣ್ಣವು ಹಿಮಾವೃತ ಪ್ರದೇಶಗಳಲ್ಲಿ ಉಪಯುಕ್ತ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT