ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಭಾರತೀಯ ಮೂಲದವರ ಮೇಲೆ ಗುಂಡಿನ ದಾಳಿಗೆ ಖಂಡನೆ; ತನಿಖೆಗೆ ಆದೇಶ: ಸುಷ್ಮಾ ಸ್ವರಾಜ್‌

Last Updated 5 ಮಾರ್ಚ್ 2017, 10:00 IST
ಅಕ್ಷರ ಗಾತ್ರ

ನವದೆಹಲಿ: ಅಮೆರಿಕದ ದಕ್ಷಿಣ ಕ್ಯಾರೊಲಿನಾದ ಲ್ಯಾಂಕಸ್ಟರ್‌ ಕೌಂಟಿಯಲ್ಲಿ ಗುರುವಾರ ರಾತ್ರಿ ಭಾರತ ಮೂಲದ ಉದ್ಯಮಿ ಹರ್ನೀಶ್ ಪಟೇಲ್(43) ಎಂಬುವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಬೆನ್ನಲ್ಲೇ ಭಾರತೀಯ ಮೂಲದ ಸಿಖ್‌ ವ್ಯಕ್ತಿ ದೀಪ್ ರೈ ಎಂಬುವವರ ಮೇಲೆ ಗುಂಡಿನ ದಾಳಿ ನಡೆದಿದೆ.

ದೀಪ್ ರೈ (39) ಎಂಬವರು ವಾಷಿಂಗ್ಟನ್‍ನ ಕೆಂಟ್ ನಲ್ಲಿ ಶುಕ್ರವಾರ ರಾತ್ರಿ ಮನೆಯ ಬಳಿ ತಮ್ಮ ವಾಹನ ರಿಪೇರಿ ಮಾಡುತ್ತಿದ್ದ ವೇಳೆ ಆಗಂತುಕನೊಬ್ಬರು ಗುಂಡಿನ ದಾಳಿ ನಡೆಸಿದ್ದ.

ಕೆಂಟ್ ಪೊಲೀಸರ ಪ್ರಕಾರ ಇಬ್ಬರು ವ್ಯಕ್ತಿಗಳು ರೈ ಜತೆ ಜಗಳ ಮಾಡಿದ್ದಾರೆ. ಈ ನಡುವೆ ಆಗಂತುಕನೊಬ್ಬ ನಿನ್ನ ದೇಶಕ್ಕೆ ಹಿಂದಿರುಗಿ ಹೋಗು ಎಂದು ಕಿರುಚಿ ಗುಂಡು ಹಾರಿಸಿದ್ದಾನೆ ಎಂದು ಹೇಳಲಾಗುತ್ತಿದೆ.

ಹರ್ನೀಶ್ ಪಟೇಲ್ ಹತ್ಯೆ ಕುರಿತಂತೆ ಭಾರತ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಸಂತಾಪ ಸೂಚಿಸಿದ್ದಾರೆ. ಅಮೆರಿಕದ ಭಾರತೀಯ ರಾಯಭಾರಿ ಹರ್ನೀಶ್ ಪಟೇಲ್ ಅವರ ಕುಟುಂಬ ಭೇಟಿ ಮಾಡಿ ಮಾಹಿತಿ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

ಭಾರತೀಯ ಮೂಲದವರ ಸರಣಿ ಹತ್ಯೆಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.

‘ದೀಪ್ ರೈ ಅವರ ಮೇಲೆ ನಡೆದ ದಾಳಿಯ ಬಗ್ಗೆ ತಿಳಿಯಲು ಕ್ಷಮೆಯಾಚಿಸುತ್ತೇನೆ. ಘಟನೆ ಕುರಿತು ದೀಪ್ ರೈ ಅವರ ತಂದೆಯೊಂದಿಗೆ ಮಾಹಿತಿ ಪಡೆದಿದ್ದೇನೆ’ ಎಂದು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT