ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ಪಾನೀಯ ಬಿಡಿ; ಎಳನೀರು ಕುಡಿಯಿರಿ

ವಿದೇಶಿ ತಂಪು ಪಾನೀಯಗಳನ್ನು ರಸ್ತೆಗೆ ಚೆಲ್ಲಿದ ಕಾರ್ಯಕರ್ತರು
Last Updated 6 ಮಾರ್ಚ್ 2017, 8:59 IST
ಅಕ್ಷರ ಗಾತ್ರ
ಹುಬ್ಬಳ್ಳಿ: ವಿದೇಶಿ ತಂಪು ಪಾನೀಯಗಳು ಆರೋಗ್ಯಕ್ಕೆ ಹಾನಿಕರವಾಗಿದ್ದು, ಅವುಗ­ಳನ್ನು ಉಪಯೋಗಿಸುವುದನ್ನು ಬಿಟ್ಟು ದೇಸಿ ವಸ್ತುಗಳಾದ ಎಳನೀರು ಮತ್ತು ಮಜ್ಜಿಗೆಯನ್ನು ಬಳಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣ ವೇದಿಕೆ (ಪ್ರವೀಣಕುಮಾರ ಶೆಟ್ಟಿ) ಬಣದ ಕಾರ್ಯಕರ್ತರು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.
 
ವಿದೇಶಿ ತಂಪು ಪಾನೀಯಗಳನ್ನು ರಸ್ತೆಗೆ ಚೆಲ್ಲಿದ ಕಾರ್ಯಕರ್ತರು ಘೋಷಣೆ­ಗಳನ್ನು ಕೂಗಿ ಸಾರ್ವಜನಿಕರಿಗೆ ಮಜ್ಜಿಗೆ ಮತ್ತು ಎಳನೀರನ್ನು ವಿತರಿಸುವ ಮೂಲಕ ಗಮನ ಸೆಳೆದರು. 
 
‘ವಿದೇಶಿ ತಂಪು ಪಾನೀಯಗಳ ಮೇಲೆ ಯುವ ಜನಾಂಗಕ್ಕೆ ವ್ಯಾಮೋಹ ಹೆಚ್ಚಾಗಿದೆ. ಅಲ್ಲದೆ, ಪೋಷಕರು ಕಿರಾಣಿ ಮತ್ತು ಬೇಕರಿಗಳಲ್ಲಿ ಅದನ್ನೇ ಕೊಡಿ­ಸುತ್ತಿದ್ದಾರೆ. ವಿದೇಶಿ ತಂಪು ಪಾನೀಯ­ಬಳಸದಂತೆ ಮಕ್ಕಳಲ್ಲಿ ಹಿರಿಯರು ಮತ್ತು ಪೋಷಕರು ತಿಳಿ ಹೇಳಬೇಕು’ ಎಂದು ವೇದಿಕೆ ರಾಜ್ಯ ಘಟಕ ಅಧ್ಯಕ್ಷ ಪ್ರವೀಣಕುಮಾರ್‌ ಶೆಟ್ಟಿ ತಿಳಿಸಿದರು. 
 
‘ವಿದೇಶಿ ಕಂಪೆನಿಗಳ ವಸ್ತುಗಳು ದೇಶಕ್ಕೆ ಸುಲಭವಾಗಿ ಬರುತ್ತಿವೆ. ಸೂಪರ್‌ ಮಾರುಕಟ್ಟೆಗಳಿಂದ ಹಿಡಿದು ಕಿರಾಣಿ ಅಂಗಡಿಯವರು ಅದಕ್ಕೆ ಮಣೆ ಹಾಕುತ್ತಿದ್ದಾರೆ. ವಿದೇಶಿ ವಸ್ತುಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುವ ಮೂಲಕ ದೇಸಿ ವಸ್ತುಗಳಿಗೆ ಉತ್ತೇಜನ ನೀಡಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿ­ಸಿದರು. 
 
ವೇದಿಕೆಯ ಧಾರವಾಡ ಜಿಲ್ಲಾ ಘಟಕ ಅಧ್ಯಕ್ಷ ಮಂಜುನಾಥ ಲೂತಿಮಠ ಮತ್ತು ಇತರರು ಇದ್ದರು. ಪ್ರತಿಭಟನೆ ಬಳಿಕ ಚನ್ನಮ್ಮ ವೃತ್ತಕ್ಕೆ ತೆರಳಿದ ಕಾರ್ಯಕರ್ತರು ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT