ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯರು ಅಮೆರಿಕದ ಐಟಿ ಕೆಲಸಗಳನ್ನು ಕಿತ್ತು ಕೊಂಡಿದ್ದಾರೆ–ಅಮೆರಿಕ ಪ್ರಜೆಯ ವಿಡಿಯೊ

Last Updated 6 ಮಾರ್ಚ್ 2017, 9:25 IST
ಅಕ್ಷರ ಗಾತ್ರ
ADVERTISEMENT

ಕೊಲಂಬಸ್‌ ಸಿಟಿ (ಅಮೆರಿಕ): ‘ಭಾರತೀಯರು ನಮ್ಮ ಐಟಿ ಕೆಲಸಗಳನ್ನು ಕಿತ್ತುಕೊಂಡಿದ್ದಾರೆ’ ಎಂದು ಅಮೆರಿಕದ ನಾಗರಿಕರೊಬ್ಬರು ಪಾರ್ಕ್‌ವೊಂದರಲ್ಲಿ ಭಾರತೀಯರು ವಿಶ್ರಾಂತಿ ಪಡೆಯುತ್ತಿರುವ ವಿಡಿಯೊವನ್ನು ಯೂಟೂಬ್ ಮತ್ತು ಖಾಸಗಿ ವೆಬ್‌ಸೈಟ್‌ನಲ್ಲಿ ಆಪ್‌ಲೋಡ್‌ ಮಾಡಿದ್ದಾರೆ.

ಕೊಲಂಬಸ್‌ ನಗರದ ಒಹಿಒ ಪ್ರಾಂತ್ಯದಲ್ಲಿ ಭಾರತೀಯರೇ ಹೆಚ್ಚಾಗಿ ವಾಸಮಾಡುತ್ತಿದ್ದಾರೆ. ಇಲ್ಲಿನ ಇಂಡಿಯನ್‌ ಪಾರ್ಕ್‌ ನಲ್ಲಿ ಭಾರತೀಯ ಕುಟುಂಬದವರು ವಿಶ್ರಾಂತಿ ಪಡೆಯುತ್ತಿರುವ, ಮಕ್ಕಳು ಆಟವಾಡುತ್ತಿರುವ, ಯುವಕರು ವಾಲಿಬಾಲ್‌ ಆಡುತ್ತಿರುವ ವಿಡಿಯೊವನ್ನು ಅಪ್‌ಲೋಡ್‌ ಮಾಡಿ ’ಅಮೆರಿಕದ ಐಟಿ ಕೆಲಸಗಳನ್ನು ಉಳಿಸಿ’ ಎಂಬ ಸಂದೇಶ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ  ಅಮೆರಿಕದಲ್ಲಿನ ಭಾರತೀಯ ರಾಯಭಾರಿ ಕಚೇರಿಯು ಭಾರತೀಯರು ಜಾಗ್ರತೆಯಿಂದ ಇರುವಂತೆ ಮೌಖಿಕ ಸಂದೇಶ ನೀಡಿದೆ.

ಈ ವಿಡಿಯೊವನ್ನು ವರ್ಜಿನಿಯಾ ಮೂಲದ ಸ್ಟೀವ್ ಪುಷಾರ್‌ ಎಂಬುವರು ಅಪ್‌ಲೋಡಿದ್ದಾರೆ ಎಂದು ಅಮೆರಿಕದ ನೂಸ್‌ ವೆಬ್‌ಪೊರ್ಟಲ್‌ಗಳು ವರದಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT