ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದಾಯದ ಅಭಿವೃದ್ಧಿಗೆ ಸಕಲ ನೆರವು: ಭರವಸೆ

ಸಮಾಜ ಸಂಘಟಿತರಾದರೆ ಅನುಕೂಲ: ಹಿಂದೂ ಕ್ಷತ್ರಿಯ ಸಮಾಜದ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಸಲಹೆ
Last Updated 6 ಮಾರ್ಚ್ 2017, 11:53 IST
ಅಕ್ಷರ ಗಾತ್ರ
ಬಾಗಲಕೋಟೆ: ‘ಹಿಂದೂ ಕ್ಷತ್ರಿಯ ಸಮಾಜದವರು ಅತ್ಯಂತ ಸಭ್ಯರು ಹಾಗೂ ಸುಸಂಸ್ಕೃತರೂ ಆಗಿದ್ದಾರೆ. ಆದರೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಅವರು ಹೆಚ್ಚಿನ ಪ್ರಗತಿ ಸಾಧಿಸಬೇಕಿದೆ’ ಎಂದು ಸಂಸದ ಪಿ.ಸಿ.ಗದ್ದಿಗೌಡರ ಅಭಿಪ್ರಾಯಪಟ್ಟರು. 
 
ಇಲ್ಲಿನ ನವನಗರದ ಕಲಾ ಭವನದಲ್ಲಿ ಭಾನುವಾರ ನಡೆದ ಜಿಲ್ಲಾ ಹಿಂದೂ ಕ್ಷತ್ರಿಯ ಸಂಘದಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. 
 
ಇತಿಹಾಸ ಕಾಲಘಟ್ಟ ಅವಲೋಕಿಸಿದಾಗ ಈ ಸಮಾಜ ತನ್ನದೇಯಾದ ಅಸ್ತಿತ್ವ ಹೊಂದಿರುವುದು ಕಂಡು ಬರುತ್ತದೆ. ಇದರಿಂದ ಈ ಸಮಾಜವು ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವುದು ವೇದ್ಯವಾಗುತ್ತದೆ. ಧೈರ್ಯ, ಸಾಹಸ, ಶೌರ್ಯಕ್ಕೆ ಹೆಸರಾಗಿರುವ ಹಿಂದು ಕ್ಷತ್ರಿಯ  ಸಮಾಜದಲ್ಲಿ ನಾಯಕ್ವದ ಕೊರತೆ ಇಲ್ಲ ಎಂದರು. 
 
ವಿಶಾಲ ಮನಸ್ಥಿತಿ ಉಳ್ಳುವರಾಗಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಸಂಘಟಿತರಾಗಬೇಕು. ಆದರೆ ಅದು ಕೆಲವೇ ಜನರ ಸಹಾಯಕ್ಕೆ ಮೀಸಲಾಗಬಾರದು. ಪ್ರತಿಯೊಬ್ಬರಿಗೂ ಪ್ರೋತ್ಸಾಹ ದೊರೆಯಬೇಕು. ಶಿಕ್ಷಣದಲ್ಲಿ, ಉದ್ಯೋಗದಲ್ಲಿ ಮೀಸಲಾತಿ ದೊರಕುವಂತಾಗಿ ಸಮಾಜ ಮುಂಚೂಣಿಗೆ ಬರಬೇಕು ಎಂದ ಹೇಳಿದ ಅವರು, ಹಿಂದೂ ಕ್ಷತ್ರಿಯ ಸಮಾಜಕ್ಕೆ ಅಗತ್ಯವಿರುವ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದರು. 
 
ಶಾಸಕ ಜೆ.ಟಿ.ಪಾಟೀಲ ಮಾತನಾಡಿ,  ಇಂದು ಆರ್ಥಿಕವಾಗಿ, ರಾಜಕೀಯವಾಗಿ ಸಮಾಜದ ಸ್ಥಿತಿ ಹೇಳಿಕೊಳ್ಳುವಂತೆ ಇಲ್ಲ. ಹಾಗಾಗಿ ಎಲ್ಲರೂ ಒಂದಾಗಿ ಪರಿಶ್ರಮದ  ಮೂಲಕ ಮತ್ತೆ ಸಮಾಜವನ್ನು ಸದೃಢವಾಗಿ ಕಟ್ಟಬೇಕಿದೆ ಎಂದರು.
 
ಇದೇ ವೇಳೆ ಸಮಾಜದ ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ಎಪಿಎಂಸಿ ಸದಸ್ಯರು ಹಾಗೂ ಕ್ರೀಡೆ, ಸ್ನಾತಕೋತ್ತರ ಪದವಿ, ಪಿಎಚ್‌ಡಿ ಪದವಿ ಪಡೆದವರನ್ನು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. 
 
ಕಾರ್ಯಕ್ರಮದಲ್ಲಿ ಆಲೂರು ಧರ್ಮರ ಮಠದ ರಾಮಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಮಾಜಿ ಶಾಸಕರಾದ ಎಂ.ಕೆ.ಪಟ್ಟಣಶೆಟ್ಟಿ, ರಾಜಶೇಖರ ಶೀಲವಂತ, ನಾರಾಯಣ ಸಾ ಭಾಂಡಗೆ, ಹಿಂದೂ ಕ್ಷತ್ರಿಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚಿಕ್ಕಪ್ಪ ಗಂಗಪ್ಪ ನಾಯಕ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಮಹಾಂತೇಶ ಮಮದಾಪೂರ, ಡಾ.ಎಚ್.ಎ.ಯೋಗಪ್ಪನವರ, ಬಿ.ಬಿ.ಬಿಳೇಕುದರಿ, ಮಹಾಂತೇಶ ಪೂಜಾರಿ, ಶಿವಾನಂದ ಕಣವಿ, ಬಿ.ವೈ.ಗೌಡರ, ಆರ್.ಎಂ.ಹುನ್ನೂರ, ಬಿ.ಕೆ.ಪಟ್ಟದಕಲ್, ಹರ್ಷವರ್ಧನ ದೇಸಾಯಿ ಉಪಸ್ಥಿತರಿದ್ದರು. 
 
* ಸಮಾಜದ ಭವನ ಕಟ್ಟಲು ಹಿಂದೂ ಕ್ಷತ್ರಿಯರು ನಿವೇಶನಕ್ಕೆ ಮನವಿ ಮಾಡಿದ್ದಾರೆ.  ಬೀಳಗಿ ಪಟ್ಟಣದಲ್ಲಿ ಸಮಾಜದ ಭವನ ನಿರ್ಮಿಸಲು 4 ಗುಂಟೆ ಜಮೀನು ನೀಡಲಾಗುವುದು.
-ಜೆ.ಟಿ.ಪಾಟೀಲ, ಬೀಳಗಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT