ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ತಿತ್ವ ಹೋರಾಟದಲ್ಲಿ ಗೆದ್ದ ಆ್ಯಪ್ಸ್‌

Last Updated 7 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ನಿತ್ಯ ಬದುಕಿನ ಪ್ರತಿಯೊಂದು ವ್ಯವಹಾರಗಳನ್ನೂ ಅಪ್ಲಿಕೇಷನ್‌ ಮೂಲಕವೇ ನಿರ್ವಹಣೆ ಮಾಡಬಹುದಾದ ಡಿಜಿಟಲ್‌ ಕಾಲಘಟ್ಟದಲ್ಲಿ ನಾವಿದ್ದೇವೆ. ಆಧುನಿಕ ಜೀವನ ಶೈಲಿಗೆ ಇದು ಅನಿವಾರ್ಯವೂ, ಅನುಕೂಲವೂ ಆಗಿವೆ. ಮನೆ ಅಥವಾ ಕಚೇರಿಯಲ್ಲಿ  ಕಾಗದ ಬಳಕೆಯನ್ನೂ ಈ ಅಪ್ಲಿಕೇಷನ್ಸ್‌ಗಳು ಗಣನೀಯವಾಗಿ ತಗ್ಗಿಸಿವೆ ಎನ್ನುವುದೂ ಗಮನೀಯ.

‘ಗಾರ್ಟ್‌ನರ್‌’ ಸಮೀಕ್ಷೆಯಂತೆ  ಆಂಡ್ರಾಯ್ಡ್‌ನ ಪ್ಲೇ ಸ್ಟೋರ್‌ನಲ್ಲಿ ಸದ್ಯ  22 ಲಕ್ಷ ಅಪ್ಲಿಕೇಷನ್ಸ್‌ಗಳು ಡೌನ್‌ಲೋಡ್‌ಗೆ ಲಭ್ಯ ಇವೆ. ಆ್ಯಪಲ್‌ನ ಐ ಸ್ಟೋರ್‌ನಲ್ಲೂ 20 ಲಕ್ಷ ಅಪ್ಲಿಕೇಷನ್ಸ್‌ಗಳಿವೆ. ಪ್ರತಿನಿತ್ಯ ಲಕ್ಷಾಂತರ ಅಪ್ಲಿಕೇಷನ್ಸ್‌ಗಳು ಡೌನ್‌ಲೋಡ್‌ ಆಗುತ್ತಿರುತ್ತವೆ. ಸಾವಿರಾರು ಸಂಖ್ಯೆಯಲ್ಲಿ ಹೊಸ ಅಪ್ಲಿಕೇಷನ್ಸ್‌ಗಳು ಅಭಿವೃದ್ಧಿಯಾಗುತ್ತಿರುತ್ತವೆ.  ಇಂದು ಹೊಸತು ಎನಿಸುವ ಅಪ್ಲಿಕೇಷನ್ಸ್‌ಗಳು ನಾಳೆಗೆ ಹಳತಾಗಿರುತ್ತವೆ. ಗ್ರಾಹಕರನ್ನು ಉಳಿಸಿಕೊಳ್ಳಬೇಕಾದರೆ, ಅಪ್ಲಿಕೇಷನ್ಸ್‌ಗಳು ಕಾಲಕ್ಕೆ ತಕ್ಕಂತೆ ಪರಿಷ್ಕೃತಗೊಳ್ಳುತ್ತಿರಬೇಕು. ಸಾಮಾನ್ಯವಾಗಿ ಒಬ್ಬ ಸ್ಮಾರ್ಟ್‌ಫೋನ್‌ ಬಳಕೆದಾರ ಒಂದು ಅಪ್ಲಿಕೇಷನ್‌ ಅನ್ನು 1 ಅಥವಾ 2 ವರ್ಷಕ್ಕಿಂತ ಹೆಚ್ಚಿನ ಕಾಲ ತನ್ನ ಮೊಬೈಲ್‌ನಲ್ಲಿ ಇಟ್ಟುಕೊಳ್ಳಲು ಬಯಸುವುದಿಲ್ಲ. 2 ವರ್ಷಕ್ಕಿಂತಲೂ ಹೆಚ್ಚಿನ ಅವಧಿಗೆ ಒಂದು ಅಪ್ಲಿಕೇಷನ್‌ ಮೊಬೈಲ್‌ ಪರದೆಯಲ್ಲಿ ಸ್ಥಾನ ಉಳಿಸಿಕೊಂಡಿದೆ ಎಂದರೆ ಆ ಅಪ್ಲಿಕೇಷನ್‌, ಅಸ್ತಿತ್ವ ಹೋರಾಟದಲ್ಲಿ ಗೆದ್ದಿದೆ ಎಂದರ್ಥ.

ಅಪ್ಲಿಕೇಷನ್ಸ್‌ಗಳ ಬಳಕೆ ಅವರವರ ಹವ್ಯಾಸಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. ಛಾಯಾಗ್ರಹಣದ ಆಸಕ್ತಿ ಇದ್ದವರು, ಅದಕ್ಕೆ ಸಂಬಂಧಿಸಿದ ವಿವಿಧ ಅಪ್ಲಿಕೇಷನ್ಸ್‌ಗಳನ್ನು ಅಂದರೆ ವಿವಿಧ ಆಯಾಮಗಳಲ್ಲಿ ಚಿತ್ರೀಕರಣ ಮಾಡಲು ಸಾಧ್ಯವಿರುವ, ಸಂಕಲನ ಮಾಡಲು, ದೃಶ್ಯ  ಪರಿಣಾಮ ಹೆಚ್ಚಿಸಲು ಸಹಕಾರಿಯಾದ ಅಪ್ಲಿಕೇಷನ್ಸ್‌ಗಳನ್ನು ಹುಡುಕಿಕೊಂಡು ಡೌನ್‌ಲೋಡ್‌ ಮಾಡಿಕೊಂಡು ಪರೀಕ್ಷಿಸುತ್ತಿರುತ್ತಾರೆ.

ಛಾಯಾಗ್ರಹಣಕ್ಕೆ ಸಂಬಂಧಿಸಿದಂತೆ 360 ಪನೋರಮಾ ಎಂಬ ಅಪ್ಲಿಕೇಷನ್‌ ಬಿಡುಗಡೆಯಾದ ಕಾಲದಿಂದ ಅಂದರೆ  ಎರಡು ವರ್ಷಗಳಿಂದ ಮಾರುಕಟ್ಟೆಯಲ್ಲಿ ಅಸ್ತಿತ್ವ ಉಳಿಸಿಕೊಂಡಿದೆ. 360-ಡಿಗ್ರಿ ಛಾಯಾಚಿತ್ರಗಳು ಅಪರೂಪದ ದೃಶ್ಯ ವೈಭವವನ್ನು ಸಾಧ್ಯವಾಗಿಸುತ್ತವೆ. ಹಿಂದೆ, ಮುಂದೆ, ಮೇಲೆ ಕೆಳಗೆ, ಹೀಗೆ ಸುತ್ತಲೂ ಕಾಣುವ ದೃಶ್ಯಗಳನ್ನು ಸೆರೆಹಿಡಿದು ಜೋಡಿಸಿ ಚಿತ್ರವನ್ನು ರೂಪಿಸುವುದು ಈ ಅಪ್ಲಿಕೇಷನ್‌ ವೈಶಿಷ್ಟ್ಯ. ಅಷ್ಟೇ ಅಲ್ಲ, ಇಂತಹ ಚಿತ್ರಗಳನ್ನು 2–ಡಿ ಚಿತ್ರಗಳಾಗಿ ಸಂಗ್ರಹಿಸಿ ಇಡಬಹುದು. ಅಷ್ಟೇ ಅಲ್ಲ, ಈ ಅಪ್ಲಿಕೇಷನ್‌ನಲ್ಲಿರುವ ಗುಂಡಿ ಒತ್ತಿದರೆ,  ಚೌಕಾರದ ಚಿತ್ರಗಳು ವೃತ್ತಾಕಾರದ ಚಿತ್ರಗಳಾಗಿ ಬದಲಾಗುತ್ತವೆ. ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರಗಳು ಅದ್ಭುತವಾಗಿ ಕಾಣಿಸುತ್ತವೆ. ಇಂತಹ ಅಪ್ಲಿಕೇಷನ್ಸ್‌ಗಳಿಗೆ ಇತ್ತೀಚೆಗೆ ಬೇಡಿಕೆ ಹೆಚ್ಚಿದೆ. ಸಾವಿರಾರು ಅಪ್ಲಿಕೇಷನ್ಸ್‌ಗಳು ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದರೂ ಅದರಲ್ಲಿ ಒಂದೋ, ಎರಡೋ ಅಸ್ತಿತ್ವ ಉಳಿಸಿಕೊಂಡಿವೆ.

ಆಂಡ್ರಾಯ್ಡ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ‘ಫೋಟೋ 360’ ಎಂಬ ಅಪ್ಲಿಕೇಷನ್‌ ಕೂಡ ಹವ್ಯಾಸಿ ಛಾಯಾಗ್ರಾಹಕರ ನೆಚ್ಚಿನ ತಂತ್ರಾಂಶ. ಆದರೆ, ಸೆರೆಹಿಡಿದ ಚಿತ್ರಗಳನ್ನು ಅಭಿವೃದ್ಧಿಪಡಿಸಿದ ನಂತರ ಅಂತಿಮವಾಗಿ  ಲಭಿಸುವ ದೃಶ್ಯ ಸೊಬಗು 3ಪನೋರಮಾ 360 ಅಪ್ಲಿಕೇಷನ್ಸ್‌ನಲ್ಲೇ ತುಸು ಹೆಚ್ಚು ಎನ್ನಬಹುದು. ಉಳಿದಂತೆ ಇನ್ನಿತರ ಎಲ್ಲ ಸೌಲಭ್ಯಗಳು ಇದರಲ್ಲಿವೆ.   ಒಂದು ವರ್ಷದಲ್ಲಿ ಛಾಯಾಗ್ರಹಣಕ್ಕೆ ಸಂಬಂಧಿಸಿದ ಸಾವಿರಾರು ಅಪ್ಲಿಕೇಷನ್ಸ್‌ಗಳು ಅಭಿವೃದ್ಧಿಯಾಗಿವೆ. ಐಫೋನ್‌ ಬಳಕೆದಾರರಿಗೆ ಇರುವ ಟಿನ್‌ಟೈಪ್‌ (TinType) ಅಂದರೆ 21ನೇ ಶತಮಾನ ಡಿಜಿಟಲ್‌ ಚಿತ್ರಗಳನ್ನು 19ನೇ ಶತಮಾನದ ಕಪ್ಪು–ಬಿಳುಪು ಚಿತ್ರಗಳಾಗಿ ಪರಿವರ್ತಿಸುವ ಅಪ್ಲಿಕೇಷನ್‌್ ಕೂಡ ಹೆಚ್ಚು ಬಾರಿ ಡೌನ್‌ಲೋಡ್‌ ಆಗಿರುವ ಅಪ್ಲಿಕೇಷನ್.

ಗೇಮಿಂಗ್‌ ಅಪ್ಲಿಕೇಷನ್‌
ಛಾಯಾಗ್ರಹಣಕ್ಕಿಂತ ಹೆಚ್ಚು ಡೌನ್‌ಲೋಡ್‌ ಆಗುವ ಅಪ್ಲಿಕೇಷನ್‌ ವಿಭಾಗ ಗೇಮಿಂಗ್‌ ಕ್ಷೇತ್ರದ್ದು. ಸಾಕಷ್ಟು ಜನರ ಸ್ಮಾರ್ಟ್‌ಫೋನ್‌ ಮುಖ್ಯಪರದೆಯಲ್ಲಿ ಫ್ಲಾಪಿಬರ್ಡ್‌ (Flappy Bird), ಮೈನ್‌ಕ್ರಾಫ್ಟ್‌ (Minecraft), ಟಿನಿವಿಂಗ್ಸ್‌ (TinyWings)  ಅಥವಾ ಆ್ಯಂಗ್ರಿಬರ್ಡ್‌ (Angry Birds) ಅಥವಾ ಇತ್ತೀಚಿನ  ಆ್ಯಂಗ್ರಿ ಬರ್ಡ್‌  ಸ್ಟಾರ್‌ ವಾರ್ಸ್‌ ಇದರಲ್ಲಿ ಯಾವುದಾದರೂ ಒಂದು ಗೇಮಿಂಗ್‌ ಅಪ್ಲಿಕೇಷನ್‌ ಇದ್ದೇ ಇರುತ್ತದೆ.

ಸ್ಮಾರ್ಟ್‌ಫೋನ್‌ ಎನ್ನುವುದು ಮನರಂಜನೆ ಮಾರುಕಟ್ಟೆಯ ಶಕ್ತವಾದ ಮಾಧ್ಯಮವಾಗಿ ಬೆಳೆದಿದೆ. ಹೀಗಾಗಿ, ಪ್ರತಿಯೊಬ್ಬ ಅಪ್ಲಿಕೇಷನ್ಸ್‌ ಅಭಿವೃದ್ಧಿದಾರ ಕೂಡ ಈ ಅಂಗೈಯಗಲದ ಪರದೆಯಲ್ಲಿ ದೀರ್ಘ ಕಾಲ ಅಸ್ತಿತ್ವ ಉಳಿಸಿಕೊಳ್ಳಬಹುದಾದ ಅಪ್ಲಿಕೇಷನ್‌ ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿರುತ್ತಾನೆ. ಒನ್‌ ನೋಟ್‌ (OneNote) ಟಿಇಡಿ ( TED)  ಸ್ಲೀಪ್‌ ಸೈಕಲ್‌  (Sleep Cycle)  ಮ್ಯೂಸಿಕ್‌ ಆ್ಯಪ್‌ ಶಾಝಂ (Shazam) ಹೀಗೆ ಕಾಲ, ದೇಶಗಳನ್ನು ಮೀರಿ ಮೊಬೈಲ್‌ ಬಳಕೆದಾರ ಬದುಕಿನ ಅವಿಭಾಜ್ಯ ಅಂಗವಾಗಿ ಬದಲಾಗಿರುವ ಹಲವು ಅಪ್ಲಿಕೇಷನ್ಸ್‌ಗಳನ್ನು ಉದಾಹರಿಸಬಹುದು.

–ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT