ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಜೆಯ ಸ್ನ್ಯಾಕ್ಸ್‌ಗೆ ಕಾತಿ ರೋಲ್ಸ್‌ !

Last Updated 12 ಮಾರ್ಚ್ 2017, 5:04 IST
ಅಕ್ಷರ ಗಾತ್ರ
ADVERTISEMENT

ಸಂಜೆಯ ಕಾಫಿ/ಟೀ ಜೊತೆಗೆ ರುಚಿಕಟ್ಟಾದ, ಆರೋಗ್ಯಪೂರ್ಣ ಕಾತಿ ರೋಲ್ಸ್‌  ಸವಿದರೆ ಅದುವೇ ಸುಂದರ ಸಂಜೆಯಾಗುತ್ತದೆ! ಸವಿರುಚಿಯ ಕಾತಿ ರೋಲ್ಸ್‌  ಮಾಡುವುದು ಬಹಳ ಸುಲಭ. ಈ ಸಲ ಪ್ರಜಾವಾಣಿಯು ಕಾತಿ ರೋಲ್ಸ್‌ ಮಾಡುವ ರೆಸಿಪಿಯನ್ನು ತಂದಿದೆ.

ಬೇಕಾಗುವ ಸಾಮಗ್ರಿಗಳು:
1 ಚಪಾತಿ ಮಾಡಲು ಗೋಧಿಹಿಟ್ಟು, ಸೋಡ, ಬೆಣ್ಣೆ, ಮೈದಾ. ಸ್ವಲ್ಪ ನೀರಿನೊಂದಿಗೆ ಚಪಾತಿ ಹಿಟ್ಟಿನ ಹದಕ್ಕೆ 1 ಗಂಟೆ ಮುಂಚೆ ಕಲಸಿಡುವುದು.
2. ಪನ್ನೀರ್ ಹೆಚ್ಚಿದ್ದು              100ಗ್ರಾಂ
3.ಮೊಸರು                         2 ದೊಡ್ಡ ಚಮಚ
4.ಖಾರದ ಪುಡಿ                   1/2 ಚಮಚ
5.ಅರಿಶಿನ                          ಸ್ವಲ್ಪ
6.ಶುಂಠಿ-ಬೆಳ್ಳ್ಳುಳ್ಳಿ ಪೇಸ್ಟ್        1 ಚಮಚ
7.ಗರಂ ಮಸಾಲ                  1 ಚಮಚ
8.ಕಡಲೆಹಿಟ್ಟು                      1ಚಮಚ
9.ಕಿಚನ್‍ಕಿಂಗ್ ಪುಡಿ               ಚಿಟಿಕೆ
10.ತಂದೂರಿ ಬಣ್ಣ                  ಸ್ವಲ್ಪ
11.ಉಪ್ಪು                            ಸ್ವಲ್ಪ
12.ಈರುಳ್ಳಿ ಹೆಚ್ಚಿದ್ದು                1
13.ದೊಡ್ಡ ಮೆಣಸಿನಕಾಯಿ         ಸ್ವಲ್ಪ(ಹೆಚ್ಚಿದ್ದು)

14.ಟೊಮ್ಯಾಟೊ                    ಸ್ವಲ್ಪ(ಹೆಚ್ಚಿದ್ದು)

15. ಎಣ್ಣೆ                              2ಚಮಚ
ಕಿಚನ್ ಕಿಂಗ್                          ಸ್ವಲ್ಪ

ಮಾಡುವ ವಿಧಾನ: ಪನ್ನೀರ್ ಟಿಕ್ಕ ಸಾಮಗ್ರಿಗಳನ್ನು ಒಂದು ಬೌಲ್‍ಗೆ ಹಾಕಿ (ಪನ್ನೀರ್ ಹೆಚ್ಚಿದ್ದು, ಮೊಸರು, ಖಾರದ ಪುಡಿ, ಅರಿಶಿನ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲ, ಕಡಲೆ ಹಿಟ್ಟು, ಕಿಚನ್ ಕಿಂಗ್ ಪುಡಿ, ತಂದೂರಿ ಬಣ್ಣ, ಉಪ್ಪು, ಈರುಳ್ಳಿ ಹೆಚ್ಚಿದ್ದು, ದೊಡ್ಡ ಮೆಣಸಿನ ಕಾಯಿ, ಟೊಮ್ಯಾಟೊ ಹೆಚ್ಚಿದ್ದು ಮತ್ತು ಎಣ್ಣೆ) 3 ಗಂಟೆಗಳ ಕಾಲ ನೆನೆಯಲು ಬಿಡಿ.

ನಂತರ ಗ್ರಿಲ್ ಪ್ಯಾನ್‍ಗೆ ಸ್ವಲ್ಪ ಎಣ್ಣೆ ನೆನೆಸಿದ ಪನ್ನೀರ್ ಟಿಕ್ಕ ಹಾಕಿ ಎರಡು ಕಡೆ ಚೆನ್ನಾಗಿ ಬೇಯಿಸಿ ತಯಾರಾದ ಒಂದು ಚಪಾತಿಯ ಮೇಲೆ ಪುದೀನ ಚಟ್ನಿಯನ್ನು ಹರಡಿ, ಪನ್ನೀರ್ ಟಿಕ್ಕವನ್ನು ಹರಡಿ ರೋಲ್ ಮಾಡಿ ಕಾದ ಕಂಚಿನ ಮೇಲೆ ಒಂದೆರಡು ನಿಮಿಷ ಬೇಯಿಸಿ ಟಿಶ್ಯೂ ಪೇಪರ್‍ನಲ್ಲಿ ಸುತ್ತಿ ಟಿಫನ್ ಬಾಕ್ಸ್‍ಗೆ ಸರ್ವ್ ಮಾಡಿದರೆ, ಜೊತೆಯಲ್ಲಿ ಪುದೀನ್ ಚಟ್ನಿಯೊಂದಿಗೆ ಸರ್ವ್ ಮಾಡಿದರೆ ರೋಲ್ಸ್ ಸವಿಯಲು ಸಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT