ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇವಣಸಿದ್ದೇಶ್ವರ ಪುತ್ಥಳಿ ಅನಾವರಣ

ಶ್ರೀಕ್ಷೇತ್ರ ರೇವಗ್ಗಿ ಗುಡ್ಡದಲ್ಲಿ ವೈಭವದ ರೇವಗ್ಗಿ–ರಟಕಲ್ ಉತ್ಸವ
Last Updated 11 ಮಾರ್ಚ್ 2017, 6:12 IST
ಅಕ್ಷರ ಗಾತ್ರ
ಕಾಳಗಿ: ಶ್ರೀಕ್ಷೇತ್ರ ರೇವಗ್ಗಿ ರೇವಣ ಸಿದ್ದೇಶ್ವರ ಗುಡ್ಡದಲ್ಲಿ ಜರುಗಿದ ರೇವಗ್ಗಿ–ರಟಕಲ್ ಉತ್ಸವದಲ್ಲಿ 54 ಅಡಿ ಎತ್ತರದ ರೇವಣಸಿದ್ದೇಶ್ವರ ಹಾಗೂ 15 ಅಡಿ ಶಿವನಂದಿ ಪ್ರತಿಮೆಯನ್ನು ಲೋಕಾರ್ಪಣೆ  ಮಾಡಲಾಯಿತು.
 
ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಮುಜರಾಯಿ ಸಚಿವ ರುದ್ರಪ್ಪ ಲಮಾಣಿ, ಒಂಬತ್ತು ತಿಂಗಳ ಹಿಂದೆ  ರೇವಗ್ಗಿ ಗುಡ್ಡ ಅವ್ಯವಸ್ಥೆಯಿಂದ ಕೂಡಿತ್ತು. ಹಲವು ಅಭಿವೃದ್ಧಿ ಕೆಲ ಸಗಳಿಂದಾಗಿ ಈಗ ಸುಂದರವಾಗಿ ಕಾಣುತ್ತಿದೆ ಎಂದು ಹೇಳಿದರು.
 
ವೈದ್ಯಕೀಯ ಶಿಕ್ಷಣ ಚಿವ ಡಾ.ಶರಣಪ್ರಕಾಶ ಪಾಟೀಲ ಮಾತ ನಾಡಿ, ಈ ಕ್ಷೇತ್ರವು ಮುಂದಿನ ದಿನಗಳಲ್ಲಿ ಪ್ರಸಿದ್ಧ ಪ್ರವಾಸಿ ತಾಣವಾಗಿ ಬೆಳೆಯಲಿದೆ ಎಂದರು.
ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ಮಾತನಾಡಿ, ಅಭಿ ವೃದ್ಧಿ ಹೊಂದಿರುವ ಈ ಕ್ಷೇತ್ರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸ್ಥಳೀಯ ಮತ್ತು ಸುತ್ತಲಿನ ಗ್ರಾಮಸ್ಥರು ಪಂಚ ಮಂಡಳಿ ರಚಿಸಿ ಕಾರ್ಯಪ್ರವೃತ ರಾಗಬೇಕು ಎಂದು ಸಲಹೆ ನೀಡಿದರು.
 
ಸಾನಿಧ್ಯ ವಹಿಸಿದ್ದ ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು, ಹೊನ್ನಕಿರಣಗಿಯ ಚಂದ್ರಗುಂಡ ಶಿವಾಚಾರ್ಯರು ಆಶೀರ್ವಚನ ಮಾಡಿದರು.
ಶಾಸಕ ಡಾ.ಉಮೇಶ ಜಾಧವ್ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ ಸದಸ್ಯ ರಾಜೇಶ ಗುತ್ತೇದಾರ ಹಾಗೂ ಆಡಳಿ ತಾಧಿಕಾರಿ ಭೀಮಾಶಂಕರ ತೆಗ್ಗಳ್ಳಿ ಪ್ರಾಸ್ತಾವಿಕ ಮಾತನಾಡಿದರು.
 
ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ, ಜಿ.ಪಂ ಅಧ್ಯಕ್ಷೆ ಸುವರ್ಣಾ ಮಲಾಜಿ, ಜಿ.ಪಂ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ್ ಯಾಕಾ ಪುರ, ತಾ.ಪಂ ಅಧ್ಯಕ್ಷ ಜಗನಗೌಡ ರಾಮತೀರ್ಥ, ಚಿಂಚೋಳಿ ತಾ.ಪಂ ಅಧ್ಯಕ್ಷೆ ರೇಣುಕಾ ಚವಾಣ್, ಜಿ.ಪಂ ಸದಸ್ಯ ರಾಮಲಿಂಗರೆಡ್ಡಿ ದೇಶಮುಖ, ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ ಕಂಬಾದ ಇದ್ದರು.
 
ಆಕರ್ಷಿಸಿದ ಸಂಗೀತ ಕಾರ್ಯಕ್ರಮ: ಕಲಬುರ್ಗಿ ಸ್ವರಸಂಗಮ ಮೆಲೋಡಿಸ್ ಕಲಾವಿದರ ತಂಡದ ರಸಮಂಜರಿ, ಗದಗಿನ ಶಂಕ್ರಪ್ಪ ರಾಮಪ್ಪ ಸಂಕಣ್ಣವರ ಅರುಣೋದಯ ಕಲಾ ತಂಡದ ಜನಪದ ವೈವಿಧ್ಯಮಯ ಕಾರ್ಯಕ್ರಮ, ಪ್ರಶಾಂತ ಚೌಧರಿ ಅವರ ನಗೆಹಬ್ಬ ಜನರ ಮನಗೆದ್ದಿತು.
 
54 ಅಡಿ ಎತ್ತರದ ರೇವಣ ಸಿದ್ಧೇಶ್ವರರ ಮೂರ್ತಿ, 15 ಅಡಿ ಎತ್ತರದ ಶಿವನಂದಿ ಮೂರ್ತಿ, ದಾಸೋಹ ಭವನ, ಉದ್ಯಾನವನ, ವಿಭಜಕದ ಡಾಂಬರ್‌ ರಸ್ತೆ, ವ್ಯಾಪಾರಸ್ಥರ ಮಳಿಗೆಗಳು, ಸಿಮೆಂಟ್ ಕಾಂಕ್ರಿಟ್ ರಸ್ತೆ, ಮಹಾದ್ವಾರ, ಆಡಳಿತ ಅಧಿಕಾರಿ ಕಚೇರಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT