ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ 7 ಕಲಾವಿದರ ಸಾಕ್ಷ್ಯಚಿತ್ರ ಸಿದ್ಧ

ಡಿ.ಎಸ್‌. ಸುರೇಶ್‌ ನಿರ್ದೇಶನ, ಬಿಡುಗಡೆ
Last Updated 11 ಮಾರ್ಚ್ 2017, 12:44 IST
ಅಕ್ಷರ ಗಾತ್ರ
ಬಳ್ಳಾರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಇದೇ ಮೊದಲ ಬಾರಿಗೆ ಜಿಲ್ಲೆಯ ಏಳು ಹಿರಿಯ ಕಲಾವಿದರ ಕುರಿತ ಸಾಕ್ಷ್ಯಚಿತ್ರವನ್ನು ನಿರ್ಮಿಸಿದ್ದು, ಲೋಕಾಪರ್ಣೆಗೆ ಸಜ್ಜಾಗಿದೆ.
 
ಇದುವರೆಗೆ ಕರ್ನಾಟಕ ನಾಟಕ ಅಕಾಡೆಮಿ ಮಾತ್ರ ಕಲಾವಿದರ ಕುರಿತ ಸಾಕ್ಷ್ಯಚಿತ್ರವನ್ನು ನಿರ್ಮಿಸುತ್ತಿತ್ತು. ಅಕಾಡೆಮಿಯು ಈಗಾಗಲೇ ಜಿಲ್ಲೆಯ ದರೋಜಿ ಈರಮ್ಮ, ಬೆಳಗಲ್ಲು ವೀರಣ್ಣ, ಸುಭದ್ರಮ್ಮ ಮನ್ಸೂರು ಅವರ ಕುರಿತ ಸಾಕ್ಷ್ಯಚಿತ್ರವನ್ನು ನಿರ್ಮಿಸಿದೆ. ಈಗ ಇಲಾಖೆಯು ಕೂಡ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ ಅಡಿ ಆ ಕಾರ್ಯವನ್ನು ಆರಂಭಿಸಿದೆ.
 
ಪರಿಶಿಷ್ಟ ಜಾತಿಯ ಬಯಲಾಟ ಕಲಾವಿದೆ ಬಳ್ಳಾರಿಯ ಕಪ್ಪಗಲ್ಲು ಪದ್ಮಮ್ಮ ಹಾಗೂ ಹೊಸಪೇಟೆಯ ಸುಡುಗಾರು ಸಿದ್ದರಾದ ಎಸ್‌.ಕೆ.ವಿರೂಪಾಕ್ಷಪ್ಪ, ಪರಿಶಿಷ್ಟ ಪಂಗಡದ ಬಯಲಾಟ ಕಲಾವಿದೆ ಸುಜಾತಮ್ಮ, ರಂಗಭೂಮಿ ಕಲಾವಿದರಾದ ಮರಿಯಮ್ಮನಹಳ್ಳಿಯ ಕೆ.ನಾಗರತ್ನಮ್ಮ, ಕೂಡ್ಲಿಗಿಯ ಪಿ.ಪದ್ಮಾ, ಹಗರಿಬೊಮ್ಮನಹಳ್ಳಿಯ ಕೋಗಳಿ ಪಂಪಣ್ಣ ಮತ್ತು ಬಿ.ವೀಣಾಕುಮಾರಿ ಅವರ ಸಾಕ್ಷ್ಯಚಿತ್ರವನ್ನು ನಿರ್ಮಿಸಲಾಗಿದೆ. ಇಲಾಖೆಯ ನೇತೃತ್ವದಲ್ಲಿ ಸಾಕ್ಷ್ಯಚಿತ್ರವನ್ನು ಬೆಂಗಳೂರಿನ ನಿರ್ದೇಶಕ ಡಿ.ಎಸ್‌.ಸುರೇಶ್‌ ನಿರ್ದೇಶಿಸಿದ್ದಾರೆ.
 
30 ನಿಮಿಷದ ಅವಧಿ: ಪ್ರತಿ ಕಲಾವಿದರ ಮನೆಗೆ ಭೇಟಿ ನೀಡಿ, ಅವರನ್ನು ಹಾಗೂ ಅವರನ್ನು ಬಲ್ಲವರನ್ನು ಸಂದರ್ಶನ ಮಾಡಿ ಸಾಕ್ಷ್ಯಚಿತ್ರ ನಿರ್ಮಿಸಲಾಗಿದೆ. ಅವರ ಕಲಾ ಜೀವನದ ಪ್ರಮುಖ ಘಟ್ಟಗಳು, ಘಟನೆಗಳು, ಪ್ರತಿಭಾ ಪ್ರದರ್ಶನ, ಕಲಾ ಕ್ಷೇತ್ರಕ್ಕೆ ಅವರು ಸಲ್ಲಿಸಿರುವ ಸೇವೆಯನ್ನು ಸಮಗ್ರವಾಗಿ ಚಿತ್ರೀಕರಿಸಲಾಗಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ‘ಪ್ರಜಾವಾಣಿ’ಗೆ ಶುಕ್ರವಾರ ತಿಳಿಸಿದರು.
 
₹ 92 ಸಾವಿರ ವೆಚ್ಚ: ಸಾಕ್ಷ್ಯಚಿತ್ರ ನಿರ್ಮಾಣದ ಸಲುವಾಗಿ ₹ 92,200 ವೆಚ್ಚ ಮಾಡಲಾಗಿದೆ. ನಿರ್ದೇಶಕರು ಹೊಣೆ ಹೊತ್ತಿದ್ದು, ಇಲಾಖೆಗೆ ಪ್ರತಿ ಕಲಾವಿದರ ಐದು ಸಿ.ಡಿ.ಗಳನ್ನು ನೀಡುತ್ತಾರೆ. ಅದನ್ನು ಇಲಾಖೆಯ ಅಂತರ್ಜಾಲ ತಾಣ ಕಣಜಕ್ಕೂ ಸೇರಿಸಲಾಗುವುದು. ನಂತರ ಅದನ್ನು ವಿಶ್ವದ ಎಲ್ಲಿಯಾದರೂ ಆಸಕ್ತರು ವೀಕ್ಷಿಸಲು ಸಾಧ್ಯವಾಗಲಿದೆ ಎಂದರು.
 
ಸಾಕ್ಷ್ಯಚಿತ್ರಗಳನ್ನು ಚಿತ್ರಕಲಾವಿದ ವಿ.ಟಿ.ಕಾಳೆ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಮಾರ್ಚ್‌ 11ರಂದು ಲೋಕಾರ್ಪಣೆ  ಮಾಡಲಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT