ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾ ವಿಧಾನಸಭೆ ಅತಂತ್ರ; ಸರ್ಕಾರ ರಚನೆಗೆ ಕಾಂಗ್ರೆಸ್‌–ಬಿಜೆಪಿ ಪೈಪೋಟಿ?

Last Updated 11 ಮಾರ್ಚ್ 2017, 14:13 IST
ಅಕ್ಷರ ಗಾತ್ರ

ಪಣಜಿ: ಗೋವಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಿಂದಿಕ್ಕಿರುವ ಕಾಂಗ್ರೆಸ್‌ 17 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಸರ್ಕಾರ ರಚನೆಗೆ ಅಗತ್ಯವಿದ್ದ ಬಹುಮತ ಪಡೆಯುವಲ್ಲಿ ಎರಡೂ ಪಕ್ಷಗಳು ವಿಫಲವಾಗಿದ್ದು, ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

ಮತ ಎಣಿಕೆ ಆರಂಭದಿಂದಲೂ ಮುನ್ನಡೆ ಸಾಧಿಸಿದ್ದ ಬಿಜೆಪಿಯನ್ನು ಹಿಂದಿಕ್ಕಿದ ಕಾಂಗ್ರೆಸ್‌ ಕೊನೆ ಹಂತದಲ್ಲಿ ಮುನ್ನಡೆ ಕಾಯ್ದುಕೊಂಡಿತು. ಒಂದು ಹಂತದಲ್ಲಿ ಎರಡೂ ಪಕ್ಷಗಳು ತಲಾ 14 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಸಮಬಲ ಪಡೆದಿದ್ದವು.

ಅಂತಿಮ ಘಟ್ಟದಲ್ಲಿ ಚಿತ್ರಣವೇ ಬದಲಾಯಿತು. ಕಾಂಗ್ರೆಸ್‌ 17 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿತು. 15 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದ ಬಿಜೆಪಿ 13 ಸ್ಥಾನ ಗೆಲುವು ಪಡೆಯಲಷ್ಟೇ ಸೀಮಿತವಾಯಿತು.

ಎನ್‌ಸಿಪಿ ಒಂದು ಕ್ಷೇತ್ರದಲ್ಲಿ ಎಂಎಜಿ 3 ಕ್ಷೇತ್ರದಲ್ಲಿ, ಗೋವಾ ಫರ್ವರ್ಡ್‌ ಪಾರ್ಟಿ(ಜಿಎಫ್‌ಪಿ) 3 ಕ್ಷೇತ್ರಗಳಲ್ಲಿ ಹಾಗೂ ಪಕ್ಷೇತರರು 3 ಕ್ಷೇತ್ರಗಳಲ್ಲಿ ಜಯ ಗಳಿಸಿದ್ದಾರೆ.

ಒಟ್ಟು 40 ವಿಧಾನಸಭಾ ಕ್ಷೇತ್ರಗಳಿವೆ. ಸರ್ಕಾರ ರಚನೆಗೆ 40 ಸ್ಥಾನಗಳ ಪೈಕಿ 21 ಸ್ಥಾನ ಬೇಕು. ಯಾವ ಪಕ್ಷವೂ ಬಹುಮತ ಪಡೆದಿಲ್ಲ.

ಇತರ ಪಕ್ಷಗಳಿಂದ ಗೆಲುವು ಪಡೆದ ಹಾಗೂ ಪಕ್ಷೇತರರಾಗಿ ಗೆದ್ದವರ ಬೆಂಬಲ ಪಡೆದು ಯಾರು ಸರ್ಕಾರ ರಚಿಸುತ್ತಾರೆ, ಗದ್ದುಗೆ ಯಾರ ಪಾಲಾಗಲಿದೆ ಎಂಬುದು ಎಲ್ಲರ ಕತೂಹಲ ಕೆರಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT