ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಪಾಂಜಿ ಅಸ್ವಸ್ಥ, 2 ಕಾಡುನಾಯಿ ಸಾವು

ಮೈಸೂರು ಮೃಗಾಲಯಕ್ಕೆ ಹೊಸ ಅತಿಥಿಗಳ ಸೇರ್ಪಡೆ
Last Updated 13 ಮಾರ್ಚ್ 2017, 6:41 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಎರಡು ಗಂಡು ಕಾಡುನಾಯಿಗಳು ಮೃತಪಟ್ಟಿವೆ.

‘ಕಾಡುನಾಯಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿಗಾಗಿ ಕಾಯುತ್ತಿದ್ದೇವೆ’ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಕೆ.ಕಮಲಾ ತಿಳಿಸಿದ್ದಾರೆ.

ಈ ನಡುವೆ, ಮೃಗಾಲಯಕ್ಕೆ ಹೊಸ ಅತಿಥಿಗಳು ಸೇರ್ಪಡೆಯಾಗಿವೆ. ತೋಳ ಜಾತಿಯ ಸಸ್ತನಿಯೊಂದು ನಾಲ್ಕು ಮರಿ ಹಾಗೂ ಕೋತಿ (ಬಬೂನ್‌) ಒಂದು ಮರಿ ಹಾಕಿವೆ. ಕಾಡೆಮ್ಮೆ ಒಂದು ಕರುವಿಗೆ ಜನ್ಮ ನೀಡಿದೆ.

ಚಿಂಪಾಂಜಿಗೆ ಅನಾರೋಗ್ಯ: ಗಂಗಾ ಹೆಸರಿನ ಹೆಣ್ಣು ಚಿಂಪಾಂಜಿಯೊಂದು ಅಸ್ವಸ್ಥಗೊಂಡಿದೆ. 56 ವರ್ಷ 9 ತಿಂಗಳ ಈ ಚಿಂಪಾಂಜಿ ಕಳೆದ ಹತ್ತು ದಿನಗಳಿಂದ ಸರಿಯಾಗಿ ಆಹಾರ ಸೇವಿಸುತ್ತಿಲ್ಲ. ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೃಗಾಲಯದ ವೈದ್ಯರು ತಿಳಿಸಿದ್ದಾರೆ.

ಈ ಚಿಂಪಾಂಜಿಯನ್ನು 2003ರಲ್ಲಿ ಚೆನ್ನೈನ ಸರ್ಕಸ್‌ ಕಂಪೆನಿಯಿಂದ ಚಾಮರಾಜೇಂದ್ರ ಮೃಗಾಲಯಕ್ಕೆ ತರಲಾಗಿತ್ತು. ಇದು ಇಲ್ಲಿರುವ ಚಿಂಪಾಂಜಿಗಳಲ್ಲಿ ಹಿರಿಯದಾದುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT