ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ್ತೂರಿ ರಂಗನ್‌ ವರದಿ: ಕೇಂದ್ರಕ್ಕೆ ಮನವಿ

Last Updated 14 ಮಾರ್ಚ್ 2017, 7:23 IST
ಅಕ್ಷರ ಗಾತ್ರ

ಕಳಸ: ಪಶ್ಚಿಮ ಘಟ್ಟದ ನೂರಾರು ಹಳ್ಳಿಗಳನ್ನು ಕಸ್ತೂರಿ ರಂಗನ್‌ ವರದಿಯ ಅನುಸಾರ ಪರಿಸರಸೂಕ್ಷ್ಮ  ಪ್ರದೇಶ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತೆ ಕೇಂದ್ರಕ್ಕೆ ಮನವಿ ಸಲ್ಲಿಸಲಿದೆ ಎಂದು ಮಾಜಿ ಸಚಿವ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು.

ಪಟ್ಟಣದ ದುರ್ಗಾ ಮಂಟಪದಲ್ಲಿ ಸೋಮವಾರ ಬ್ಲಾಕ್‌ ಕಾಂಗ್ರೆಸ್‌ ವತಿ ಯಿಂದ ನಡೆದ ಜನವೇದನಾ ಸಮಾವೇಶದಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್‌ ವರದಿಯ ಬಗೆಗಿನ ಸಭೆಗಳಲ್ಲಿ ಗೈರು ಹಾಜರಾದ ನಮ್ಮ ಸಂಸದರು ಈಗ ಪ್ರಚಾರಕ್ಕಾಗಿ ಅದನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಖಂಡಿಸಿದರು.

ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರನ್ನು ಟೀಕಿಸಿದ ಅವರು, ಮೋದಿ ಒಬ್ಬ ಸರ್ವಾಧಿಕಾರಿ, ಪ್ರಜಾಪ್ರಭುತ್ವ ವಿರೋಧಿ. ಅವರ ಸಾಧನೆ ಶೂನ್ಯ, ಭ್ರಮೆಯೇ ದೊಡ್ಡದು ಎಂದು ವ್ಯಾಖ್ಯಾನಿಸಿದರು. ರಾಜ್ಯ ಸರ್ಕಾರ ಅನ್ನಭಾಗ್ಯ, ಕ್ಷೀರಭಾಗ್ಯದ ಮೂಲಕ 2 ಕೋಟಿ ಜನರನ್ನು ಮುಟ್ಟಿದೆ.10 ಸಾವಿರ ಶುದ್ಧ ನೀರಿನ ಘಟಕದ ಮೂಲಕ ಒಂದು ಕೋಟಿ ಜನರ ಬಾಯಾರಿಕೆ ತಣಿಸುತ್ತಿದೆ. ರಾಜ್ಯದಲ್ಲಿ 40 ಸಾವಿರ ಕಿ.ಮೀ. ರಸ್ತೆಯನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಈ ವರ್ಷ ₹22 ಸಾವಿರ ಕೋಟಿಯನ್ನು ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಮೀಸಲಿ ಡಲಾಗಿದೆ. ಮುಂದಿನ ಚುನಾವಣೆ ಯಲ್ಲೂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವೇ ಅಧಿಕಾರ ಹಿಡಿಯಲಿದೆ ಎಂದರು.

ಮಾಜಿ ಸಚಿವ ಬಿ.ಎಲ್‌. ಶಂಕರ್‌ ಮಾತನಾಡಿ, ಬಿಜೆಪಿ ಜನರ ಭಾವನೆ ಯನ್ನೇ ಬಂಡವಾಳ ಮಾಡಿಕೊಂಡು ರಾಜಕಾರಣ ಮಾಡುತ್ತಿದ್ದು, ಎಲ್ಲ ಕ್ಷೇತ್ರಗಳಲ್ಲೂ 70 ವರ್ಷದಿಂದ ಆಗಿರುವ ಸಾಧನೆಯನ್ನು ಕಳೆದ 2 ವರ್ಷದ ಸಾಧನೆ ಎಂಬಂತೆ ಬಿಂಬಿಸುವ ಯತ್ನ ನಡೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನ ಪರಿಷತ್‌ ಸದಸ್ಯೆ ಮೋಟಮ್ಮ ಮಾತನಾಡಿ, ಭ್ರಷ್ಟಾಚಾರದ ಕೂಪ ಆಗಿರುವ ಬಿಜೆಪಿ ಮತ್ತೆ ಅಧಿ ಕಾರಕ್ಕೆ ಬರದಂತೆ ಎಚ್ಚರವಹಿಸಿ ಎಂದರು.

ಕೆಪಿಸಿಸಿ ಕಿಸಾನ್‌ ಸೆಲ್‌ ಅಧ್ಯಕ್ಷ ಸಚಿನ್‌ ಮೀಗಾ ಮಾತನಾಡಿ, ಅದಾನಿ, ಅಂಬಾನಿಗೆ ಲಕ್ಷಗಟ್ಟಲೆ ಕೋಟಿ ನೆರವು ನೀಡುವ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಲಿ ಎಂದು ಸವಾಲೆಸೆದರು.

ಕೇಂದ್ರದ ಮಾಜಿ ಸಚಿವೆ ತಾರಾದೇವಿ ಮಾತನಾಡಿ, ಕಸ್ತೂರಿ ರಂಗನ್‌ ವರದಿ ಅನುಷ್ಟಾನ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯದೆಡೆಗೆ ಮಲ ತಾಯಿ ಧೋರಣೆ ತೋರುತ್ತಾ ಪ್ರಜಾ ಪ್ರಭುತ್ವ ವಿರೋಧಿ ನಡವಳಿಕೆ ಹೊಂದಿದೆ ಎಂದರು.

ಈ ಬಾರಿ ಕಳಸ ತಾಲ್ಲೂಕು ಕೇಂದ್ರ ಆಗಲೇಬೇಕು ಎಂದು ಜಿಲ್ಲಾ ಪಂಚಾ ಯಿತಿ ಸದಸ್ಯ ಪ್ರಭಾಕರ್‌ ಆಗ್ರಹಿಸಿದರು. ಪ್ರತಿ ಬೂತ್‌ನಲ್ಲೂ 25 ಪಕ್ಷ ನಿಷ್ಟ ಕಾರ್ಯಕರ್ತರನ್ನು ಸಜ್ಜುಪಡಿಸಿ ಮುಂದಿನ ವಿಧಾನಸಭೆ ಚುನಾವಣೆ ಗೆಲ್ಲುವುದು ತಮ್ಮ ಗುರಿ ಎಂದು ಹೊಸದಾಗಿ ಅಧಿಕಾರ ಸ್ವೀಕರಿಸಿದ ಶ್ರೀನಿವಾಸ ಹೆಬ್ಬಾರ್‌ ಹೇಳಿದರು. ವಿಶ್ವನಾಥ್‌ ಮರಸಣಿಗೆ ಕಾರ್ಯ ದರ್ಶಿಯಾಗಿ ಆಯ್ಕೆಯಾದರು.

ಮುಖಂಡರಾದ ಗಾಯತ್ರಿ ಶಾಂತೇ ಗೌಡ, ಡಿ.ಎಲ್‌. ವಿಜಯಕುಮಾರ್‌, ಎ.ಎನ್‌.ಮಹೇಶ್‌, ರಾಮದಾಸ್‌, ಟಿ.ಡಿ.ರಾಜೇಗೌಡ, ರಾಜೇಂದ್ರ, ಹಿತ್ಲುಮಕ್ಕಿ, ದೇವದಾಸ್‌, ಧರಣೇಂದ್ರ, ಚೆನ್ನಕೇಶವೇಗೌಡ, ಕೇಶವೇಗೌಡ, ಬಿ.ಸಿ.ಗೀತಾ, ಜಯರಾಂ., ಹೇಮ ಶೇಖರ್‌, ಬಿ.ಎಲ್‌. ಸಂದೀಪ್‌ ಮತ್ತಿ ತರರು ಕಾರ್ಯಕ್ರಮದಲಲಿ ಭಾಗವ ಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT