ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಕ್ರಾಂತಿಗಳಿಗೆ ರಷ್ಯಾ ಸ್ಫೂರ್ತಿ

Last Updated 15 ಮಾರ್ಚ್ 2017, 5:34 IST
ಅಕ್ಷರ ಗಾತ್ರ

ಕೊಪ್ಪಳ: ‘ರಷ್ಯಾದ ಕ್ರಾಂತಿ ಪ್ರಪಂಚದ ಎಲ್ಲ ಕ್ರಾಂತಿಗಳಿಗೆ ಸ್ಫೂರ್ತಿಯಾಗಿದೆ’ ಎಂದು ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.

ನಗರದ ನಗರಸಭೆ ಎದುರು ಮಂಗಳವಾರ ಎಸ್‌ಯುಸಿಐಸಿ ಆಶ್ರಯದಲ್ಲಿ ರಷ್ಯಾದ ಮಹಾನ್‌ ನವೆಂಬರ್‌ ಸಮಾಜವಾದಿ ಕ್ರಾಂತಿಯ ಶತಮಾನೋತ್ಸವದ ಅಂಗವಾಗಿ ನಡೆದ ಮಹಾನ್‌ ನಾಯಕರ ಸೂಕ್ತಿ – ಚಿತ್ರಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ರಷ್ಯಾದಲ್ಲಿ ಸಮಾಜವಾದಿ ಕ್ರಾಂತಿ ನಡೆದು ರೈತರು ಮತ್ತು ಕಾರ್ಮಿಕರು ಒಂದು ಬಲವಾದ ಚಳುವಳಿ ಕಟ್ಟಿದರು. ಅವರು ಓದು, ಬರಹ ಬರದ ಅನಕ್ಷರಸ್ಥರು, ಎಷ್ಟರ ಮಟ್ಟಿಗೆ ಕ್ರಾಂತಿ ಮಾಡುತ್ತಾರೆ ಎನ್ನುವ ಅನುಮಾನ ಕೆಲವರಿಗಿತ್ತು. ಓದುವುದು ಎಂದರೆ ಕೇವಲ ಪುಸ್ತಕ ಓದುವುದಲ್ಲ.

ಜೀವನ ತಿಳಿದುಕೊಳ್ಳುವುದಾಗಿದೆ. ರಾಜಕೀಯ, ಸಾಮಾಜಿಕ ಚಟುವಟಿಕೆಗಳನ್ನು ವಿಮರ್ಶೆ ಮಾಡುವಂತಹ ಮನೋಧರ್ಮ ಇರುವ ಯಾರು ಬೇಕಾದರೂ ಕೂಡಾ ಮುಂದಾಳುತ್ವ ವಹಿಸಿ, ಕ್ರಾಂತಿಯನ್ನು ಹುಟ್ಟುಹಾಕಬಹುದು ಎಂಬುದಕ್ಕೆ ರಷ್ಯಾದ ಕ್ರಾಂತಿ ನಿದರ್ಶನ. ಈ ಕ್ರಾಂತಿಯಿಂದ ಪ್ರೇರಣೆಗೊಂಡು ಬೇರೆ ಬೇರೆ ದೇಶಗಳಲ್ಲಿ ಅನೇಕ ಸ್ವಾತಂತ್ರ್ಯ ಹೋರಾಟಗಳು ನಡೆದವು.

ಇಂಥಹ ಕ್ರಾಂತಿಯನ್ನು ನೆನಪಿಸುವ ನಿಟ್ಟಿನಲ್ಲಿ ಅದರ ಬಗ್ಗೆ ಸಮರ್ಥನೆ ಒದಗಿಸುವಂತಹ ನಮ್ಮ ದೇಶದ ಹಾಗೂ ಬೇರೆ ದೇಶಗಳ ಕ್ರಾಂತಿಕಾರಿಗಳ, ಲೇಖಕರ ಸೂಕ್ತಿಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ. ಎಲ್ಲ ಯುವಜನರು ಈ ಕ್ರಾಂತಿಯ ವಿಚಾರಧಾರೆಯಿಂದ ಪ್ರೇರಣೆ ಪಡೆಯಬೇಕು. ಕೇಸರಿಯು ದೇಶದಲ್ಲಿ ಅವಾಂತರ ಸೃಷ್ಟಿಸುತ್ತಿದ್ದು,ಕೆಂಪು ಮತ್ತು ಹಸಿರು ಇದನ್ನು ವಿರೋಧಿಸುವ ಕಾಲ ಸನ್ನಿಹಿತವಾಗಿದೆ. ರೈತರು ಮತ್ತು ಕಾರ್ಮಿಕರು ಒಗ್ಗೂಡಿರುವ ಶಕ್ತಿ ಇಂದಲ್ಲ ನಾಳೆ ದೇಶದಲ್ಲಿ ಬರಬೇಕಿದೆ. ಆಗ ರಷ್ಯಾ ಮಾದರಿ ಕ್ರಾಂತಿ ದೇಶದಲ್ಲಿ ನಡೆಯಲಿದೆ ಎಂದರು. 

ನಿವೃತ್ತ ವಾರ್ತಾಧಿಕಾರಿ ಬಸವರಾಜ ಆಕಳವಾಡಿ, ಎಸ್‌ಯುಸಿಐಸಿ ಕಾರ್ಯಕರ್ತರಾದ ಶರಣು ಗಡ್ಡಿ, ರಮೇಶ ವಂಕಲಕುಂಟಿ, ರಾಯಣ್ಣ ಗಡ್ಡಿ, ದೇವರಾಜ ಹೊಸಮನಿ, ಮಂಜುಳಾ ಇದ್ದರು.

**

ದೇಶದಲ್ಲಿ ಕೇಸರಿ ಅವಾಂತರ ಸೃಷ್ಟಿಸುತ್ತಿದ್ದು, ಕೆಂಪು ಮತ್ತು ಹಸಿರು ಇದನ್ನು ವಿರೋಧಿಸುವ ಕಾಲ ಸನ್ನಿಹಿತವಾಗಿದೆ. ದೇಶದಲ್ಲಿ  ರಷ್ಯಾ ಮಾದರಿ ಕ್ರಾಂತಿ ನಡೆಯಲಿದೆ.
-ಅಲ್ಲಮಪ್ರಭು ಬೆಟ್ಟದೂರು,
ಹಿರಿಯ ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT