ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯ ವಂಚಿತರು

Last Updated 15 ಮಾರ್ಚ್ 2017, 19:30 IST
ಅಕ್ಷರ ಗಾತ್ರ

‘ಸಂಘಟಿತ ವಲಯದಲ್ಲಿ ದುಡಿಯುವ ಮಹಿಳೆಯರಿಗೆ ಹೆರಿಗೆ ಸೌಲಭ್ಯ ಹೆಚ್ಚಳ’ ಎಂಬ ಸುದ್ದಿ ತಿಳಿದು ಸಂತೋಷವಾಯಿತು. ಆದರೆ ಸಂಘಟಿತ ವಲಯ ಎಂದರೆ ಯಾವುದೆಲ್ಲ ಸೇರುತ್ತದೆ ಎಂಬುದು ತಿಳಿಯದೆ ಅಸಂಖ್ಯಾತ ಮಹಿಳೆಯರು ಗೊಂದಲಕ್ಕೆ ಒಳಗಾಗಿದ್ದಾರೆ. ಅತಿಥಿ ಉಪನ್ಯಾಸಕರಿಗೆ ಈ ಸೌಲಭ್ಯವಿಲ್ಲ. ಇದರಿಂದಾಗಿಯೇ ಎಷ್ಟೋ ಮಹಿಳೆಯರು ಕೆಲಸದಿಂದ ವಂಚಿತರಾಗುತ್ತಿದ್ದಾರೆ.

ವರ್ಷದ ಮಧ್ಯದಲ್ಲಿ ಹೆರಿಗೆಯಾದಲ್ಲಿ ಅವರನ್ನು ರಿಲೀವ್ ಮಾಡಿ ಕಳುಹಿಸಲಾಗುತ್ತದೆ. ಅವರ ಜಾಗದಲ್ಲಿ ಮತ್ತೊಬ್ಬರನ್ನು ತೆಗೆದುಕೊಳ್ಳಲಾಗುತ್ತದೆ. ಹೀಗೆ ಕೊನೆಗೆ ಬಂದವರೇ ಮರುವರ್ಷ ಮುಂದುವರಿಯುತ್ತಾರೆ. ಹಾಗಾಗಿ ಕೆಲಸ ಕಳೆದುಕೊಳ್ಳುವ ಭೀತಿಯಿಂದ, ಹೆರಿಗೆಯಾಗುವ ದಿನದವರೆಗೂ ಬಂದು ಪಾಠ ಮಾಡುವವರಿದ್ದಾರೆ. ಡಿಸೆಂಬರ್ ರಜೆಯಲ್ಲಿ ಹೆರಿಗೆಯಾದರೆ ನಂತರ ಹದಿನೈದು ದಿನದ ಬಾಣಂತಿ ಬಂದು ಪಾಠ ಮಾಡುತ್ತಾರೆ.

ಕೆಲವರು ಇವರ ಅಸಹಾಯಕತೆಯನ್ನು ಗೇಲಿ ಮಾಡುವುದರ ಜೊತೆಗೆ ಅಧಿಕ ಕೆಲಸ ಕೊಟ್ಟು ವಿಕೃತ ಆನಂದಪಡುವುದೂ ಇದೆ. ಇದಕ್ಕೆಲ್ಲಾ ಕಾರಣ, ಸರ್ಕಾರ ಅತಿಥಿ ಉಪನ್ಯಾಸಕರನ್ನು ನಡೆಸಿಕೊಳ್ಳುವ ಪರಿ. ಹೆರಿಗೆ ಸೌಲಭ್ಯ ಕಾಯ್ದೆ ತಿದ್ದುಪಡಿ ಮಸೂದೆಯು ಇಂತಹ ಮಹಿಳೆಯರಿಗೆ ಅನ್ವಯವಾಗದಿದ್ದರೆ ಪ್ರಯೋಜನವೇನು?
-ವೃಂದಾ ಹೆಗಡೆ, ಸಾಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT