ಈ ತಿಂಗಳ ಅಂತ್ಯದಲ್ಲಿ ಸೆಟ್ಟೇರಲಿರುವ ಹರ್ಷ ಖಾಸನೀಸ್, ಸಂಜೀವ್ ಖಾಸನೀಸ್, ಶ್ರೀಕಾಂತ್ ಖಾಸನೀಸ್ ನಿರ್ಮಾಣದ ‘ಉತ್ಸವ್’ ಚಿತ್ರಕ್ಕೆ ದಿಗಂತ್ ನಾಯಕರಾಗಿ ಆಯ್ಕೆ ಆಗಿದ್ದಾರೆ. ಜಿ.ಎನ್. ರುದ್ರೇಶ್ ನಿರ್ದೇಶಕರು. ದತ್ತಣ್ಣ, ಲತಾ ಹೆಗ್ಡೆ ತಾರಾಗಣದಲ್ಲಿದ್ದಾರೆ. ಇದು ಮಲಯಾಳಂನ ‘ಚಾರ್ಲಿ’ಯ ರಿಮೇಕ್. ಸೆಲ್ವಂ ಛಾಯಾಗ್ರಹಣ, ಆಶ್ಲೆ ಮೆಂಡೂಕ್ ಸಂಗೀತ ಇರಲಿದೆ.

‘ಪಾದರಸ’ ಬಹುತೇಕ ಪೂರ್ಣ

ಹೃಷಿಕೇಶ್ ಜಂಬಗಿ ನಿರ್ದೇಶನದ ‘ಪಾದರಸ’ ಚಿತ್ರೀಕರಣ ಬಹುಭಾಗ ಮುಕ್ತಾಯವಾಗಿದ್ದು ಮೂರು ಹಾಡುಗಳು ಮಾತ್ರ ಬಾಕಿ ಇದೆ. ತಾರಾಗಣದಲ್ಲಿ ಸಂಚಾರಿ ವಿಜಯ್, ನಿರಂಜನ್ ದೇಶಪಾಂಡೆ, ವೈಷ್ಣವಿ ಮೆನನ್, ಮನಸ್ವಿನಿ, ಜೈಜಗದೀಶ್, ಗುರುದತ್, ಶೋಭರಾಜ್ ಇದ್ದಾರೆ. ಎಂ.ಬಿ. ಅಳ್ಳಿಕಟ್ಟಿ ಛಾಯಾಗ್ರಹಣ, ಎ.ಟಿ. ರವೀಶ್ ಸಂಗೀತ, ಕೆ.ಎಂ. ಪ್ರಕಾಶ್ ಸಂಕಲನ, ಜಯಂತ್ ಕಾಯ್ಕಿಣಿ, ಗೌಸ್ ಪೀರ್, ಸಂಜಯ್ ಕುಲಕರ್ಣಿ ಗೀತ ಸಾಹಿತ್ಯ ಇದೆ.

ಈವಾರ ತೆರೆಗೆ
ಉರ್ವಿ
ಬಿ.ಆರ್.ಪಿ. ಭಟ್ ನಿರ್ಮಿಸಿರುವ ‘ಉರ್ವಿ’ ಚಿತ್ರವನ್ನು ಬಿ.ಎಸ್. ಪ್ರದೀಪ್ ವರ್ಮ ನಿರ್ದೇಶಿಸಿದ್ದಾರೆ. ಮನೋಜ್ ಜಾರ್ಜ್ ಸಂಗೀತ, ಆನಂದ್ ಸುಂದರೇಶ್ ಛಾಯಾಗ್ರಹಣ, ಸೂರ್ಯತೇಜ ಸಂಕಲನ ಇದೆ. ಶ್ರುತಿ ಹರಿಹರನ್, ಶ್ರದ್ಧಾ ಶ್ರೀನಾಥ್, ಶ್ವೇತಾ ಪಂಡಿತ್, ಅಚ್ಯುತ ಕುಮಾರ್, ಮಧುಕರ್ ತಾರಾಗಣದಲ್ಲಿದ್ದಾರೆ.

ಎರಡು ಕನಸು
ಅಶೋಕ್ ಕೆ. ಬಿ. ನಿರ್ಮಾಣ ಹಾಗೂ ಮದನ್ ನಿರ್ದೇಶನದ ಚಿತ್ರ ‘ಎರಡು ಕನಸು’. ವಿಜಯ ರಾಘವೇಂದ್ರ, ಕಾರುಣ್ಯ ರಾಮ್, ಕೃಷಿ ತಾಪಂಡ ನಟಿಸಿದ್ದಾರೆ. ಸ್ಟೀವ್-ಕೌಶಿಕ್ ಸಂಗೀತ, ದರ್ಶನ್ ಕನಕ ಛಾಯಾಗ್ರಹಣ, ವಿ. ಮನೋಹರ್, ಜಯಂತ್ ಕಾಯ್ಕಿಣಿ, ಡಾ ವಿ ನಾಗೇಂದ್ರ ಪ್ರಸಾದ್, ಚಂದನ್ ಶೆಟ್ಟಿ ಗೀತ ಸಾಹಿತ್ಯ ಒದಗಿಸಿದ್ದಾರೆ.

ಶುದ್ಧಿ
ನಂದಿನಿ ಮಾದೇಶ್, ಮಾದೇಶ್ ಟಿ. ಭಾಸ್ಕರ್ ನಿರ್ಮಿಸಿದ ಚಿತ್ರ ‘ಶುದ್ಧಿ’ಗೆ ಆದರ್ಶ್ ಎಚ್. ಈಶ್ವರಪ್ಪ ನಿರ್ದೇಶಕರು. ನಿವೇದಿತಾ, ಲಾರೆನ್ಸ್ ಸ್ಪಾರ್ಟೆನೋ, ಅಮೃತಾ ಕರಗದ, ಶಶಾಂಕ್, ಸಿದ್ಧಾರ್ಥ್ ನಟಿಸಿದ್ದಾರೆ. ಜೆಸ್ಸಿ ಕ್ಲಿಂಟನ್ ಸಂಗೀತ, ಆಂಡ್ಯು ಆಯಿಲೊ ಛಾಯಾಗ್ರಹಣ ಇದೆ.

ಕಲಬೆರಕೆ
ಮಧು ದಿವಾಕರ್ ನಿರ್ದೇಶನದ ಚಿತ್ರ ‘ಕಲಬೆರಕೆ’. ಶ್ರೀಧರ್ ನಿರ್ಮಾಪಕರು. ಅನಿರುದ್ಧ್, ಸಂಜನಾ ಪ್ರಕಾಶ್, ಜೈ ಜಗದೀಶ್, ಶೋಭರಾಜ್, ಬ್ಯಾಂಕ್ ಜನಾರ್ದನ್ ತಾರಾಗಣದಲ್ಲಿದ್ದಾರೆ. ಕೀರ್ತಿ ಜೈನ್ ಸಂಗೀತ ಸಂಯೋಜನೆ ಇದೆ.

ಧ್ವನಿ
ಲಯನ್ ಆರ್. ರಮೇಶ್ ಬಾಬು ನಿರ್ಮಾಣದ, ಸೆಬಾಸ್ಟೀನ್ ಡೇವಿಡ್ ನಿರ್ದೇಶನದ ಚಿತ್ರ ‘ಧ್ವನಿ’. ರಾಜ್ ಭಾಸ್ಕರ್ ಸಂಗೀತವಿದೆ. ಚಂದನ್ ಶರ್ಮ, ಇತಿ ಆಚಾರ್ಯ, ರಮೇಶ್ ಭಟ್, ವಿನಯಾ ಪ್ರಕಾಶ್ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.