ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ನಲ್ಲಿ ನಿರ್ಲಕ್ಷ್ಯ: ಸಿಐಟಿಯು ಪ್ರತಿಭಟನೆ

Last Updated 17 ಮಾರ್ಚ್ 2017, 8:49 IST
ಅಕ್ಷರ ಗಾತ್ರ

ಕೊಪ್ಪಳ: ರಾಜ್ಯ ಬಜೆಟ್‌ನಲ್ಲಿ ಅಕ್ಷರ ದಾಸೋಹ ಕಾರ್ಮಿಕರನ್ನು ನಿರ್ಲಕ್ಷಿಸ ಲಾಗಿದೆ ಎಂದು ದೂರಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.

ಶಾಲೆಗಳಲ್ಲಿ ಬಿಸಿಯೂಟ ತಯಾರಿಕೆಯಲ್ಲಿ ದಿನನಿತ್ಯ 1.19 ಲಕ್ಷ ಮಹಿಳೆಯರು ಸುಮಾರು 63 ಲಕ್ಷ ಮಕ್ಕಳಿಗೆ ಅಡುಗೆ ಮಾಡಿ ಬಡಿಸುತ್ತಿದ್ದಾರೆ. ಶಾಲೆಗಳಲ್ಲಿ ನಡೆಯುವ ಎಲ್ಲಾ ಸಾರ್ವತ್ರಿಕ ಕಾರ್ಯಕ್ರಮಗಳಿಗೆ, ಚುನಾವ ಣೆಗಳಿಗೂ ಅಡುಗೆ ಮಾಡುವುದಲ್ಲದೆ, ಬೇಸಿಗೆ ರಜೆಯಲ್ಲಿಯೂ ಕೂಡಾ ಅಡುಗೆ ಮಾಡಬೇಕಿದೆ. ಇಷ್ಟೆಲ್ಲ ಕೆಲಸ ಮಾಡಿದರೂ ಸರ್ಕಾರವು ಬಿಸಿಯೂಟ ತಯಾರಿಕರತ್ತ ನಿರ್ಲಕ್ಷ್ಯ ತೋರುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಅಕ್ಷರ ದಾಸೋಹ ನೌಕರರತ್ತ ಸರ್ಕಾರ ಸ್ವಲ್ಪವು ಗಮನಹರಿಸದೇ  ಸಂಪೂ ರ್ಣವಾಗಿ ನಿರ್ಲಕ್ಷಿಸಿರುವುದು ಸರಿಯಲ್ಲ. ಅವರಿಗೆ ತಿಂಗಳಿಗೆ ಕೇವಲ ₹ 1,900 ರಿಂದ 2 ಸಾವಿರ ರೂಪಾಯಿ ಸಂಭಾವನೆ ಮಾತ್ರವಿದೆ. ಕೇಂದ್ರ ಸರ್ಕಾರವು ಕಳೆದ 7 ವರ್ಷಗಳಿಂದ ಯಾವುದೇ ಸಂಭಾವನೆ ಹೆಚ್ಚಿಸಿಲ್ಲ. ಸಾಮಾಜಿಕ ನ್ಯಾಯದ ಪರಿಕಲ್ಪನೆ, ದೇಶದ ಪ್ರತಿಯೊಬ್ಬ ಪ್ರಜೆಯ ಸ್ವಾವಲಂ ಬನೆಯ ಬಗ್ಗೆ ಮಾತನಾಡುವ ಸಂವಿಧಾ ನ್ಮಾತಕ ಆಶಯಗಳನ್ನು ಸಂಪೂರ್ಣವಾಗಿ ಮರೆತಿದೆ ಎಂದು  ದೂರಿದರು.

ಬಜೆಟ್‌ನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಗೆ ಒಟ್ಟಾರೆಯಾಗಿ ₹ 18,266 ಕೋಟಿ ಹಣ ಒದಗಿಸಿದ್ದು ಈ ಹಣದಲ್ಲಿ ನೌಕರರ ವೇತನಕ್ಕಾಗಿ ಹೆಚ್ಚು ಅನುದಾನ ಮೀಸಲಿರಿಸಿ ಘೋಷಣೆ ಮಾಡಬೇಕು. 4 ಲಕ್ಷ ಮಕ್ಕಳಿಗೆ ಸಾರವರ್ಧಕ ಅಕ್ಕಿ ನೀಡುವ ನೆಪದಲ್ಲಿ 4 ಜಿಲ್ಲೆಗಳಲ್ಲಿ ವಿಕೇಂದ್ರಿಕರಣದ ಕ್ರಮವನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಲಕ್ಷ್ಮೀದೇವಿ ಸೋನಾರ, ಶಿವುನಗೌಡ ಪೊಲೀಸ್ ಪಾಟೀಲ್ ನೇತೃತ್ವ ವಹಿಸಿದ್ದರು.

**

ಅಡುಗೆ ದಾಸೋಹ ನೌಕರರತ್ತ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿರುವುದು ಸರಿಯಲ್ಲ. ಬೇಡಿಕೆ ಈಡೇರಿಸಲು ಸರ್ಕಾರ ಪ್ರಥಮ ಆದ್ಯತೆ ನೀಡಬೇಕಿತ್ತು.
–ಲಕ್ಷ್ಮಿದೇವಿ ಸೋನಾರ, ನಾಯಕಿ, ಸಿಐಟಿಯು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT