ಮಧ್ಯಾಹ್ನ ಅಥವಾ ರಾತ್ರಿಯ ಊಟಕ್ಕೆ ರಾಗಿ ಮುದ್ದೆ ಸೊಗಸಾಗಿರುತ್ತದೆ. ಸೊಪ್ಪಿನ ಸಾರು ಅಥವಾ ಮಾಂಸದ ಸಾರಿನ ಜತೆಗೆ ರಾಗಿ ಮುದ್ದೆಯನ್ನು ಊಟ ಮಾಡಬಹುದು. ಈ ವಾರದ ಪ್ರಜಾವಾಣಿ ರೆಸಿಪಿಯಲ್ಲಿ ಬಿಸಿ ಬಿಸಿ ರಾಗಿ ಮುದ್ದೆ ಮಾಡುವುದನ್ನು ಕಲಿತು, ಈ ವಾರಾಂತ್ಯದಲ್ಲಿ ಮಾಡಿ ನೋಡಿರಿ!

ಸಾಮಗ್ರಿಗಳು

1. ನೀರು - 1 ಕಪ್
2. ರಾಗಿ ಹಿಟ್ಟು - 1/2 ಕಪ್
3. ಉಪ್ಪು - ಚಿಟಿಕೆ
4. ತುಪ್ಪ - ಸ್ವಲ್ಪ

ಮಾಡುವ ವಿಧಾನ: ದಪ್ಪ ತಳದ ಪಾತ್ರೆಯಲ್ಲಿ ನೀರನ್ನು ಹಾಕಿ. ಉಪ್ಪು, ತುಪ್ಪ ಹಾಗೂ ಸ್ವಲ್ಪ ರಾಗಿ ಹಿಟ್ಟನ್ನು ಸೇರಿಸಿ ಕಲಸಿ ಕುದಿಸಿ. ಕಮ್ಮಿ ಉರಿಯಲ್ಲಿ 3-4 ನಿಮಿಷ ಕುದಿಸಿದ ನಂತರ ಮಿಕ್ಕ ರಾಗಿ ಹಿಟ್ಟನ್ನೂ ಸೇರಿಸಿ ಮುದ್ದೆಕೋಲಿನಿಂದ ಚೆನ್ನಾಗಿ ಕಲಸುತ್ತಿರಿ. ಹಿಟ್ಟು ತಳ ಬಿಡುವಾಗ ಉರಿ ಆರಿಸಿ. ಬಿಸಿ ಇರುವಾಗಲೇ, ಕೈಗೆ ಸ್ವಲ್ಪ ತುಪ್ಪ ಸವರಿಕೊಂಡು, ಮುದ್ದೆಗಳನ್ನು ತಯಾರಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.