ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಹನ್‌ಲಾಲ್ ಹೊಸ ಸಿನಿಮಾ

Last Updated 17 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಮಲಯಾಳಿ ಮಾಂತ್ರಿಕ ಮೋಹನ್ ಲಾಲ್ ಅಭಿನಯದ ‘1971 ಬಿಯಾಂಡ್ ಬಾರ್ಡರ್ಸ್’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಲಾಲ್‌ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.
 
ಮೇಜರ್ ರವಿ ನಿರ್ದೇಶನದ  ಈ ಸಿನಿಮಾ ಯುದ್ಧಕ್ಕೆ ಸಂಬಂಧಿಸಿದ್ದು. ಇದರಲ್ಲಿ ಮೋಹನ್‌ಲಾಲ್ ದ್ವಿಪಾತ್ರ ಮಾಡಿರುವುದು ವಿಶೇಷ. ಮೇಜರ್ ಮಹಾದೇವನ್ ಮತ್ತು ಕರ್ನಲ್ ಸಹದೇವನ್ ಎನ್ನುವ ಎರಡು ಪಾತ್ರಗಳಲ್ಲಿ ಅವರು ಅಭಿಮಾನಿಗಳನ್ನು ರಂಜಿಸಲಿದ್ದಾರೆ. 
 
ತೆಲುಗು ನಟ ಅಲ್ಲು ಅರ್ಜುನ್ ಅವರ ಸಹೋದರ ಅಲ್ಲು ಶಿರೀಶ್ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವುದು  ವಿಶೇಷ. ಚಿತ್ರ ನಿರ್ದೇಶನದ ಜತೆಗೆ ಚಿತ್ರಕಥೆಯನ್ನೂ ಮೇಜರ್ ರವಿ ಅವರೇ ಬರೆದಿದ್ದು, ಶಿಜು ನಂಬಾಯತ್ ಸಂಭಾಷಣೆ ಬರೆದಿದ್ದಾರೆ. ಸುಜಿತ್ ವಾಸುದೇವನ್ ಛಾಯಾಗ್ರಹಣ ಇರುವ ಈ ಚಿತ್ರವನ್ನು ರೆಡ್ ರೋಸ್ ಕ್ರಿಯೇಷನ್ಸ್ ಕಂಪೆನಿ ನಿರ್ಮಾಣ ಮಾಡಿದೆ.
 
ಹಳ್ಳಿಯೊಂದರ ಹಬ್ಬದ ಸನ್ನಿವೇಶದ ಮೂಲಕ ಆರಂಭವಾಗುವ ಸಿನಿಮಾದ ಟ್ರೇಲರ್‌ನಲ್ಲಿ  ಯುದ್ಧದ ದೃಶ್ಯಗಳನ್ನೂ ತೋರಿಸಲಾಗಿದೆ. ಟ್ರೇಲರ್ ಕೊನೆಯಲ್ಲಿ ಮಿಲಿಟರಿ ಯೂನಿಫಾರಂ ಧರಿಸಿದ ಮೋಹನ್ ಲಾಲ್ ಕಾಣುತ್ತಾರೆ. 1970 ಬಿಯಾಂಡ್ ಬಾರ್ಡರ್ಸ್ ಸಿನಿಮಾ ಏ. ಏಳರಂದು ಬಿಡುಗಡೆಯಾಗಲಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT