ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ವಹಣೆ ಸಮರ್ಪಕವಾಗಲಿ

Last Updated 17 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಮಳೆಗಾಲಕ್ಕೆ ಇನ್ನೂ ಬಹಳಷ್ಟು ದಿನಗಳು ಇರುವಾಗಲೇ ಎಲ್ಲಿ ನೋಡಿದರಲ್ಲಿ ನೀರಿನ ಕೊರತೆ ಎದ್ದು ಕಾಣುತ್ತಿದೆ. ಕೆರೆ– ಕಾಲುವೆಗಳು ಬತ್ತಿ ಹೋಗಿವೆ. ಅಡವಿಗಳಲ್ಲಿ ನೀರು ಮತ್ತು ಮೇವಿನ ಕೊರತೆಯಿಂದಾಗಿ ಪ್ರಾಣಿಗಳು ನಾಡಿಗೆ ಲಗ್ಗೆ ಇಡುತ್ತಿವೆ. ಇಂತಹ ಸಂಕಷ್ಟದ ಸಮಯದಲ್ಲಿ ನೀರಿನ ಮಿತಬಳಕೆ ಬಗ್ಗೆ, ಜಲಮೂಲಗಳ ಸಂರಕ್ಷಣೆಗಾಗಿ ನಾವು ಬಿಗಿ ಕ್ರಮಗಳನ್ನು ಕೈಗೊಳ್ಳಲೇಬೇಕಾಗಿದೆ.

ನೀರನ್ನು ಅತಿ ಜಾಗರೂಕತೆಯಿಂದ ಬಳಸುವ ಬಗ್ಗೆ ಮಕ್ಕಳಿಗೆ ತಿಳಿ ಹೇಳಬೇಕಾಗಿದೆ. ಬಳಸಿದ ನೀರನ್ನು ಹಾಳು ಮಾಡದೆ ಹೂಗಿಡಗಳಿಗೆ ಹಾಕುವುದು, ಮಳೆ ನೀರನ್ನು ಸಂಗ್ರಹಿಸುವುದು, ನಲ್ಲಿಗಳಲ್ಲಿ ನೀರಿನ ಅನವಶ್ಯಕ ಸೋರುವಿಕೆ  ತಡೆಗಟ್ಟುವುದು.

ನೀರಿನ ಮೂಲಗಳು ಕಲುಷಿತಗೊಳ್ಳದಂತೆ ಮುತುವರ್ಜಿ ವಹಿಸುವುದು, ಖಾಲಿ ಇರುವ ಜಾಗಗಳಲ್ಲಿ ಗಿಡಮರಗಳನ್ನು ನೆಟ್ಟು ಬೆಳೆಸುವುದು, ಕೆರೆ ಕಾಲುವೆಗಳ ಹೂಳೆತ್ತಿಸಿ ಅವುಗಳ ಆಳವನ್ನು ಹೆಚ್ಚಿಸಿ ನೀರಿನ ಸಂಗ್ರಹಕ್ಕೆ ಅನುಕೂಲ ಕಲ್ಪಿಸುವುದರಿಂದ ಮುಂದಿನ ದಿನಗಳಲ್ಲಿ ನೀರಿನ ಕೊರತೆ ಉಲ್ಬಣಿಸುವುದನ್ನು ತಡೆಗಟ್ಟಲು ಸಾಧ್ಯ.
–ಡಾ.ಎಸ್‌.ಡಿ ನಾಯ್ಕ್‌, ಕಾರವಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT