ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರ್ಯಾಗ್ ರೇಸ್: ಒಂದು ಟಿಪ್ಪಣಿ

ಮಿನುಗು ಮಿಂಚು
Last Updated 19 ಮಾರ್ಚ್ 2017, 6:03 IST
ಅಕ್ಷರ ಗಾತ್ರ

ಎರಡು ಕಾರುಗಳು ಅಥವಾ ಮೋಟಾರ್ ಬೈಕ್‌ಗಳ ನಡುವೆ ನಡೆಯುವ 402 ಮೀಟರ್ ದೂರದ ಕರಾಮತ್ತಿನ ರೇಸ್ ಅನ್ನು ಡ್ರ್ಯಾಗ್ ರೇಸ್ ಎನ್ನುತ್ತಾರೆ. ಅಂತಿಮ ಗಡಿಯನ್ನು ಮೊದಲು ತಲುಪುವ ಚಾಲಕ ಅಥವಾ ಸವಾರ ರೇಸ್‌ನಲ್ಲಿ ವಿಜಯಿಯಾಗುತ್ತಾರೆ.

ರೇಸ್‌ನಲ್ಲಿ ಬೈಕ್‌ನ ಒಂದು ಚಕ್ರವನ್ನು ಎಷ್ಟು ಕಾಲ ಸವಾರ ಮೇಲಕ್ಕೆ ಎತ್ತಿ ಹಿಡಿದಿದ್ದ ಅಥವಾ ಕಾರನ್ನು ಚಾಲಕ ಎಷ್ಟು ಮೇಲಕ್ಕೆ ಹಾರಿಸಿ ಮತ್ತೆ ಹಿಡಿತ ಸಾಧಿಸಿದ, ವೇಗದಲ್ಲಿ ಯಾರ ಕೈ ಮೇಲೆ ಎನ್ನುವ ಅಂಶಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ರೇಸ್‌ನ ವಿಜಯಿಯನ್ನು ಆಯ್ಕೆ ಮಾಡುತ್ತಾರೆ. ಹಸಿರು ನಿಶಾನೆ ತೋರಿಸಿದ ನಂತರ ಎಷ್ಟು ವೇಗವಾಗಿ ಸ್ಪರ್ಧಿ ಪ್ರತಿಕ್ರಿಯಿಸುತ್ತಾನೆ ಎನ್ನುವ ಅಂಶವನ್ನೂ ಆಯೋಜಕರು ಗಮನಿಸುತ್ತಾರೆ.

ಮೊದಲ ಲೈನ್‌ನಿಂದ ಗಡುವಿನ ಲೈನ್‌ ತಲುಪಲು ತೆಗೆದುಕೊಳ್ಳುವ ಸಮಯವನ್ನು ‘ಎಲ್ಯಾಪ್ಸ್ಡ್ ಟೈಮ್’ ಎಂದು ಕರೆಯುತ್ತಾರೆ. ಸ್ಪೀಡ್‌ ಗನ್‌ ಮೂಲಕ ರೇಸ್‌ನ ಕೊನೆಯ 20 ಮೀಟರ್‌ ದೂರದಲ್ಲಿ ಸರಾಸರಿ ವೇಗ ಎಷ್ಟಿತ್ತು ಎನ್ನುವುದನ್ನು ಕೂಡ ಮಾಪನ ಮಾಡುತ್ತಾರೆ.

ಡ್ರ್ಯಾಗ್‌ ರೇಸ್‌ ಮೊದಲು ಶುರುವಾದದ್ದು ಅಮೆರಿಕದಲ್ಲಿ. ಕ್ರಮೇಣ ಅದು ಯುನೈಟೆಡ್ ಕಿಂಗ್‌ಡಮ್‌ನಲ್ಲೂ ಪ್ರಾರಂಭವಾಯಿತು. ಅತಿ ವೇಗವಾಗಿ ಸಾಗಬಲ್ಲ ಸೂಪರ್‌ಬೈಕ್‌ಗಳು ಹಾಗೂ ಸ್ಪೋರ್ಟ್ಸ್‌ ಕಾರ್‌ಗಳಿಗೆ ಮಾರುಕಟ್ಟೆ ಕುದುರಿದ ಮೇಲೆ ಭಾರತದಲ್ಲಿಯೂ ಡ್ರ್ಯಾಗ್‌ ರೇಸ್‌ಗಳು ನಡೆಯತೊಡಗಿವೆ.

ಭಾರತದಲ್ಲಿ ಮೊದಲ ಡ್ರ್ಯಾಗ್‌ ರೇಸ್ ಸ್ಪರ್ಧೆ ನಡೆದದ್ದು 2002ರಲ್ಲಿ ಮುಂಬೈನಲ್ಲಿ. ‘ದಿ ಫೆಡರೇಷನ್ ಆಫ್ ಮೋಟಾರ್ ಸ್ಪೋರ್ಟ್ಸ್‌ ಕ್ಲಬ್ಸ್‌ ಆಫ್‌ ಇಂಡಿಯಾ’ (ಎಫ್‌ಎಂಎಸ್‌ಸಿಐ) 2011ರಲ್ಲಿ ಭಾರತದಲ್ಲಿ ತಲೆ ಎತ್ತಿತು. ಇದು ರಾಷ್ಟ್ರಮಟ್ಟದಲ್ಲಿ ಡ್ರ್ಯಾಗ್ ರೇಸ್ ಆಯೋಜಿಸುವ ಸಂಸ್ಥೆ.

ಲೋನಾವಾಲಾದ ಆಂಬಿ ವ್ಯಾಲಿ ಏರ್‌ಸ್ಟ್ರಿಪ್‌ನಲ್ಲಿ ನಡೆಯುವ ‘ವ್ಯಾಲಿ ರನ್’ ಸ್ಪರ್ಧೆಯು ಹೆಚ್ಚು ಜನಪ್ರಿಯ. ಸಾರ್ವಜನಿಕ ರಸ್ತೆಗಳಲ್ಲಿ ನಡೆಯುವ ರೇಸ್‌ಗಳು ಅಕ್ರಮವಾದಂಥವು. ಆದರೆ ‘ವ್ಯಾಲಿ ರೇಸ್’ಗೆ ಸರ್ಕಾರದ ಮಾನ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT