ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರ್ನಡತೆಯ ಮಕ್ಕಳನ್ನು ಮನೆಯಿಂದ ಹೊರದಬ್ಬಿ

ದೆಹಲಿ ಹೈಕೋರ್ಟ್‌ ಆದೇಶ
Last Updated 19 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ನವದೆಹಲಿ: ಸದಾ ನಿಂದಿಸುತ್ತ ದುರ್ವರ್ತನೆ ತೋರುವ ಪ್ರೌಢ ವಯಸ್ಕ ಮಕ್ಕಳನ್ನು ಪಾಲಕರು ಮನೆಯಿಂದ ಹೊರಗೆ ಹಾಕಬಹುದು ಎಂದು ದೆಹಲಿ ಹೈಕೋರ್ಟ್ ಆದೇಶ ನೀಡಿದೆ.
 
ಮನೆಯು ಕಾನೂನುಬದ್ಧವಾಗಿ ಪಾಲಕರ ಸ್ವಾಧೀನದಲ್ಲಿದ್ದರೆ ದುರ್ನಡತೆಯ ಮಕ್ಕಳನ್ನು ಹೊರಗೆ ಹಾಕಬಹುದಾಗಿದೆ ಎಂದು ನ್ಯಾಯಮೂರ್ತಿ ಮನಮೋಹನ್ ಅವರು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
 
ಹಿರಿಯ ನಾಗರಿಕರು ನೆಮ್ಮದಿಯಿಂದ ಗೌರವಯುತವಾಗಿ ಬದುಕುವ ಎಲ್ಲಾ ಹಕ್ಕುಗಳನ್ನು ಹೊಂದಿದ್ದಾರೆ ಎಂಬುದನ್ನು ನ್ಯಾಯಾಲಯಗಳು ಅನೇಕ ಸಂದ ರ್ಭದಲ್ಲಿ ಹೇಳಿವೆ ಎಂದು ನ್ಯಾಯ ಮೂರ್ತಿಗಳು ತಿಳಿಸಿದ್ದಾರೆ.
 
ಹಿರಿಯ ನಾಗರಿಕರ ರಕ್ಷಣೆಗಾಗಿ 2007ರಲ್ಲಿ ರಚಿಸಲಾಗಿರುವ ಕಾಯ್ದೆಯ ಪ್ರಮುಖ ಉದ್ದೇಶವೇ ಹಿರಿಯ ನಾಗರಿಕರಿಗೆ ನೆಮ್ಮದಿಯ ಬದುಕು ಕೊಡುವುದು ಎಂದು ತೀರ್ಪಿನಲ್ಲಿ ಹೇಳಲಾಗಿದೆ.
 
ಮದ್ಯ ವ್ಯಸನಿಯಾದ ಮಾಜಿ ಪೊಲೀಸ್ ಕಾನ್‌ಸ್ಟೆಬಲ್ ಮತ್ತು ಆತನ ಸಹೋದರನನ್ನು ಮನೆಯಿಂದ ಹೊರಗೆ ಹಾಕಲು ಹಿರಿಯ ನಾಗರಿಕರಿಗೆ ಸಂಬಂಧಿಸಿದ ನ್ಯಾಯಮಂಡಳಿ 2015ರ ಅಕ್ಟೋಬರ್‌ನಲ್ಲಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಹೋದರರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT