ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಲಾಸಿ ಜೀವನಶೈಲಿಗೆ ‘ಎಂಪೊರಿಯೊ’ ಸಾಥ್‌

Last Updated 19 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಪೀಠೋಪಕರಣಗಳೆಂದರೆ ಕಣ್ಣಿಗೆ ರಾಚುವ ಬಣ್ಣ ಹಾಗೂ ಬೃಹತ್‌ ಗಾತ್ರವಲ್ಲ.  ನಿಮ್ಮ ಶ್ರೀಮಂತಿಕೆ, ಜೀವನಶೈಲಿ, ಜೀವನಪ್ರೀತಿಗೆ ಕನ್ನಡಿ ಹಿಡಿಯುವ ಗುಣಮಟ್ಟದ್ದಾಗಿರಬೇಕು.

– ಪೀಠೋಪಕರಣ, ಗೃಹಾಲಂಕಾರ, ಒಳಾಂಗಣ ಅಲಂಕಾರ ಮತ್ತು ವಿನ್ಯಾಸಕ್ಕೆ ಬೇಕಾದ ವಿಶ್ವದರ್ಜೆಯ ಗುಣಮಟ್ಟದ ಸಾಮಗ್ರಿಗಳನ್ನು ಒಂದೇ ಸೂರಿನಡಿ ಒದಗಿಸುತ್ತಿರುವ ‘ಎಂಪೋರಿಯೊ ಗ್ಲೋಬಲ್‌ ಲಿವಿಂಗ್‌’ ಮೆಗಾ ಮಳಿಗೆ ಹಾಗೂ ‘ಸ್ಟ್ಯಾನ್ಸಿ ಲೈಫ್‌ಸ್ಟೈಲ್ಸ್‌’ನ ಸಂಸ್ಥಾಪಕ   ಸುನೀಲ್‌ ಸುರೇಶ್‌ ಅವರ ವ್ಯಾಖ್ಯಾನವಿದು.

‘ಸ್ಟ್ಯಾನ್ಲಿ’ ಒಳಗೊಂಡು 10 ದೇಶಗಳ 60ಕ್ಕೂ ಹೆಚ್ಚು ಬ್ರ್ಯಾಂಡ್‌ಗಳ ಲೈಫ್‌ಸ್ಟೈಲ್‌ ಮತ್ತು ಲಿವಿಂಗ್‌ಗೆ ಬೇಕಾದ ಸಾಮಗ್ರಿಗಳಿರುವ ‘ಎಂಪೋರಿಯೊ’ ಅತ್ಯಾಧುನಿಕ ಮಳಿಗೆ ಇತ್ತೀಚೆಗೆ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಆರಂಭಗೊಂಡಿದೆ. ಬರೋಬ್ಬರಿ ಒಂದು ಲಕ್ಷ ಚದರ ಅಡಿಗಳಷ್ಟು ವಿಶಾಲವಾದ ಮೆಗಾ ಮಳಿಗೆಯಿದು. ಸುನೀಲ್‌ ಅವರು ಇದನ್ನು ‘ಡೆಕೊರ್‌ ಮಾಲ್‌’ ಎಂದೇ ಹೇಳುತ್ತಾರೆ.

ತಾಜಾ ಚರ್ಮ ಮತ್ತು ರಫ್ತು ಗುಣಮಟ್ಟ ‘ಸ್ಟ್ಯಾನ್ಸಿ’ ಬ್ರ್ಯಾಂಡ್‌ನ ವಿಲಾಸಿ ಪೀಠೋಪಕರಣಗಳ ವಿಶೇಷ. ತಾಜಾ ಮತ್ತು ಕೃತಕ ಚರ್ಮವನ್ನು ಹದಗೊಳಿಸುವ, ಸಿದ್ಧಗೊಳಿಸುವ ಪ್ರಕ್ರಿಯೆ ದುಬಾರಿ. ಕಣ್ಣಿಗೆ ರಾಚುವ ಬಣ್ಣದ ಮೇಲುಹೊದಿಕೆ ಹಾಕಿದ ಪೀಠೋಪಕರಣಗಳನ್ನು ದುಬಾರಿ ದರದಲ್ಲಿ ಮಾರುವ ಗಿಮಿಕ್‌ ‘ಸ್ಟ್ಯಾನ್ಲಿ’ಯಲ್ಲಿಲ್ಲ. ಎಂಪೋರಿಯೊದಲ್ಲಿ ಸಿಗುವ ಪ್ರತಿ ವಸ್ತುಗಳೂ ರಫ್ತು ದರ್ಜೆಯವು. ಹಾಗಾಗಿ ಬೆಲೆ ದುಬಾರಿ ಇರುತ್ತದೆ. ಕಾರ್ಪೊರೇಟ್‌ ವಲಯ ಮತ್ತು ವಿಲಾಸಿ ಜೀವನಶೈಲಿಯ ಜನರೇ ನಮ್ಮ ಗ್ರಾಹಕರು. ಜತೆಗೆ ‘ಸ್ಟ್ಯಾನ್ಸಿ’ಯಲ್ಲಿ ಸಿಗುವುದು ಕರಕುಶಲ ಕರ್ಮಿಗಳು ಕೈಯಿಂದಲೇ ಮಾಡಿರುವ ಪೀಠೋಪಕರಣಗಳು ಎಂಬ ನಂಬಿಕೆಯನ್ನು 20 ವರ್ಷಗಳಿಂದಲೂ ಉಳಿಸಿಕೊಂಡಿದೆ. ಗ್ರಾಹಕರ ನಂಬಿಕೆಯೇ ನಮ್ಮ ಯಶಸ್ಸಿನ ಗುಟ್ಟು’ ಎಂದರು.

ನೀಲ್‌ ಸುರೇಶ್‌. ತಂತ್ರಜ್ಞಾನ, ಸಾಮಗ್ರಿ ಮತ್ತು ಟ್ರೆಂಡ್‌ನಲ್ಲಿ ಆಗಿರುವ ಬದಲಾವಣೆಗಳಿಂದಾಗಿ ವಿನ್ಯಾಸ ಮತ್ತು ಲೈಫ್‌ಸ್ಟೈಲ್‌ನಲ್ಲಿ ಕ್ರಾಂತಿಯೇ ಉಂಟಾಗಿದೆ ಎನ್ನಬಹುದು. ಪಕ್ಕದ ರಾಜ್ಯಗಳ ಗ್ರಾಹಕರು ಮತ್ತು ಡೀಲರ್‌ಗಳು  ‘ಸ್ಟ್ಯಾನ್ಲಿ’ ಮತ್ತು ‘ಎಂಪೋರಿಯ’ದಲ್ಲಿ ಹೊಸ ವಿನ್ಯಾಸ ಮತ್ತು ಟ್ರೆಂಡ್‌ಗಳಿಗೆ ಹೆಚ್ಚು ಬೇಡಿಕೆ ಮುಂದಿಡುತ್ತಿದ್ದಾರೆ  ಎಂಬುದು ಅವರ ವಿವರಣೆ.

ಅಡುಗೆ ಮನೆ, ಊಟದ ಮನೆ, ಲಿವಿಂಗ್‌ ರೂಂ, ಮಲಗುವ ಕೋಣೆ, ಹಾಸಿಗೆ, ಹೊದಿಕೆ, ದಿಂಬಿನ ಹೊದಿಕೆ, ಕೊಠಡಿಯ ಫರ್ನಿಶಿಂಗ್‌, ಲೈಟಿಂಗ್‌, ಕಾರ್ಪೆಟ್‌, ರಗ್‌ಗಳು ಮತ್ತು ಇತರ ವಿನ್ಯಾಸಕ್ಕೆ ಬೇಕೆನಿಸುವ ಪರಿಕರ/ಸಾಮಗ್ರಿಗಳು ‘ಎಂಪೊರಿಯೊ’ದಲ್ಲಿ ಲಭ್ಯ. ಸೋಫಾಗಳ ಬೆಲೆ ₹2 ಲಕ್ಷದಿಂದ ಆರಂಭ.
ಇಟಲಿ, ಬ್ರಿಟನ್‌, ಸ್ಪೇನ್‌, ಸ್ವಿಟ್ಜರ್‌ಲೆಂಡ್‌, ಅಮೆರಿಕ, ಆಸ್ಟ್ರಿಯಾ, ನಾರ್ವೆ, ಜೆಕ್‌ ಗಣರಾಜ್ಯ ಮತ್ತು ಜಪಾನ್‌ನ ವಿನ್ಯಾಸಗಳ ಸಂಗ್ರಹ ಇಲ್ಲಿ ಲಭ್ಯ.
ಮಳಿಗೆಯ ಬಗ್ಗೆ ಹೆಚ್ಚಿನ ಮಾಹಿತಿಗೆ: www.globallivingemporio.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT