ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಶಾಹಿಗೆ ‘ಲಿಫ್ಟ್ ಮ್ಯಾನ್’ ಕನ್ನಡಿ

ಸಿನಿ ಹನಿ
Last Updated 19 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ನಟ ಸುಂದರ್ ರಾಜ್ ಅಭಿನಯದ ಇನ್ನೂರನೇ ಸಿನಿಮಾ ‘ಲಿಫ್ಟ್ ಮ್ಯಾನ್’.

ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದು ಹಿರಿಯ ನಟ, ನಿರ್ಮಾಪಕ ದ್ವಾರಕೀಶ್. ‘ದ್ವಾರಕೀಶ್‌ಗೂ ಲಿಫ್ಟ್ ಮ್ಯಾನ್‌ಗೂ ಒಂದು ಸೂಕ್ಷ್ಮ ಹೋಲಿಕೆ ಇದೆ. ಲಿಫ್ಟ್ ಮ್ಯಾನ್ ಎಷ್ಟೋ ಜನರನ್ನು ಲಿಫ್ಟ್‌ನಲ್ಲಿ ಬೇರೆ ಬೇರೆ ಹಂತಕ್ಕೆ ಒಯ್ಯುತ್ತಾನೆ. ಹಾಗೇ ದ್ವಾರಕೀಶ್ ಕೂಡ ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಜನರನ್ನು ಮೇಲಕ್ಕೆತ್ತಿದ್ದಾರೆ’ ಎಂದು ಹೇಳಿದ ಸುಂದರ್ ರಾಜ್ ಮೈಕ್‌ ಅನ್ನು ದ್ವಾರಕೀಶ್ ಕೈಗಿತ್ತರು.

ಸುಂದರ್ ರಾಜ್ ಕುರಿತು ಮಾತನಾಡಿದ ದ್ವಾರಕೀಶ್, ‘ನಮ್ಮ ಕಾಲದಲ್ಲಿ ವರ್ಷಕ್ಕೆ ಹತ್ತು ಹದಿನೈದು ಸಿನಿಮಾ ಮಾಡುವುದೇ ದೊಡ್ಡದಾಗಿತ್ತು. ಅಂಥದ್ದರಲ್ಲಿ ಸುಂದರ್ ಇಂದಿಗೆ 200 ಚಿತ್ರಗಳ ಗರಿ ತೊಟ್ಟಿದ್ದಾರೆ. ವ್ಯಕ್ತಿಯಲ್ಲಿ ಕಲಾವಂತಿಕೆ ಇಲ್ಲದಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ’ ಎಂದರು. ಶೀರ್ಷಿಕೆಯಂತೆಯೇ ಸಿನಿಮಾ ಕೂಡ ‘ಲಿಫ್ಟ್’ ಆಗಲಿ ಎಂಬುದು ಅವರ ಹಾರೈಕೆ.

‘ಇಂದಿನ ಸಿನಿಮಾ ನಿರ್ಮಾತೃಗಳ ಜೊತೆ ನಾವು ಕೆಲಸ ಮಾಡಬೇಕೆಂದರೆ ಭಯವಾಗುತ್ತದೆ. ನಾವೆಲ್ಲಿ ಅವರಿಗಿಂತ ಕಡಿಮೆ ಅನ್ನಿಸಿಬಿಡುತ್ತೇವೋ ಅನ್ನುವಷ್ಟು ಉತ್ತಮ ಸಿನಿಮಾಗಳನ್ನು ಹೊಸಬರು ನೀಡುತ್ತಿದ್ದಾರೆ’ ಎಂದರು ಸುಂದರ್ ರಾಜ್. ಈ ಚಿತ್ರದಲ್ಲಿ ಅವರು ವಿಧಾನ ಸೌಧದ ಲಿಫ್ಟ್ ನಿರ್ವಾಹಕನಾಗಿ ಅಭಿನಯಿಸಿದ್ದಾರೆ. ಆ ಲಿಫ್ಟ್‌ನಲ್ಲಿ ಬರುವ ಅನೇಕರ ಜೀವನವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಲಿಫ್ಟ್ ಮ್ಯಾನ್ ತನ್ನ ಬದುಕಿನ ಏರಿಳಿತಗಳನ್ನು ಗಮನಿಸದೇ ಹೋಗುವುದು ಸಿನಿಮಾದ ಕಥೆ.

‘ಲಿಫ್ಟ್‌ನಲ್ಲಿ ಚಿತ್ರೀಕರಿಸುವುದು ಮತ್ತು ಒಬ್ಬ ಲಿಫ್ಟ್ ಆಪರೇಟರ್‌ನ 30 ವರ್ಷಗಳ ಬದುಕನ್ನು ಕಟ್ಟಿಕೊಡುವುದು ನನಗೆ ಸವಾಲಿನ ಕೆಲಸವಾಗಿತ್ತು’ ಎಂದರು  ನಿರ್ದೇಶಕ ಕಾರಂಜಿ ಶ್ರೀಧರ್. ವಿಧಾನ ಸೌಧ ಎಂದು ಸ್ಪಷ್ಟವಾಗಿ ಚಿತ್ರದಲ್ಲಿ ಹೇಳದಿದ್ದರೂ ಮೂರು ಮಹಡಿಯ ಸರ್ಕಾರಿ ಕಚೇರಿ ಎಂದು ಸೂಚ್ಯವಾಗಿ ಹೇಳುವ ಸಂಯಮವನ್ನು ಅವರು ತೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT