ಟಾಲಿವುಡ್

‘ಬಾಹುಬಲಿ’ ನಟನೆಯಿಂದ ಸುಸ್ತಾಗಿದ್ದಾರೆ ಪ್ರಭಾಸ್!

ಸತತ ಚಿತ್ರೀಕರಣದಿಂದಾಗಿ ನಾನೂ ಸೇರಿದಂತೆ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದ ಹಲವು ಮಂದಿ ದಣಿದಿದ್ದರು. ಅಂತೂ ಚಿತ್ರ ಮುಗಿದಿದೆ ಇನ್ನು ಮುಂದೆ ಬೇರೆ ಪಾತ್ರಗಳಲ್ಲಿ ನಟಿಸುವತ್ತ ಗಮನಹರಿಸಬಹುದು

‘ಬಾಹುಬಲಿ’ ನಟನೆಯಿಂದ ಸುಸ್ತಾಗಿದ್ದಾರೆ ಪ್ರಭಾಸ್!

ನಾಲ್ಕು ವರ್ಷಗಳಿಂದ ‘ಬಾಹುಬಲಿ’ಯಲ್ಲಿ ತೊಡಗಿಸಿಕೊಂಡಿದ್ದ ಪ್ರಭಾಸ್‌ಗೆ ಒಂದೇ ಪಾತ್ರದಲ್ಲಿ ನಟಿಸಿ ನಟಿಸಿ ಸುಸ್ತಾಗಿದೆಯಂತೆ.

ಸತತ ನಾಲ್ಕು ವರ್ಷ ನಡೆದ ‘ಬಾಹುಬಲಿ’ ಮೊದಲ ಮತ್ತು ಎರಡನೇ ಚಿತ್ರದ ಚಿತ್ರೀಕರಣದಲ್ಲಿ ಪಾತ್ರವೇ ತಾನಾಗಿ ಹೋಗಿದ್ದ ಪ್ರಭಾಸ್‌ ಈ ಸಮಯದಲ್ಲಿ ಬೇರೆ ಯಾವ ಪಾತ್ರವನ್ನೂ ಒಪ್ಪಿಕೊಂಡಿರಲಿಲ್ಲ.

‘ಒಂದೇ ಪಾತ್ರವನ್ನು ನಾಲ್ಕು ವರ್ಷ ಮಾಡಿರುವುದು ಇದೇ ಮೊದಲು ಬಹುಶಃ ಇದೇ ಕೊನೆ’ ಎಂದಿರುವ ಪ್ರಭಾಸ್, ಬಾಹುಬಲಿ ಪಾತ್ರ ದೈಹಿಕ ಹಾಗೂ ಮಾನಸಿಕವಾಗಿ ಭಾರಿ  ಶ್ರಮ ಬೇಡಿದ ಪಾತ್ರ ಎಂದು ಹೇಳಿಕೊಂಡಿದ್ದಾರೆ.

‘ಸತತ ಚಿತ್ರೀಕರಣದಿಂದಾಗಿ ನಾನೂ ಸೇರಿದಂತೆ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದ ಹಲವು ಮಂದಿ ದಣಿದಿದ್ದರು. ಅಂತೂ ಚಿತ್ರ ಮುಗಿದಿದೆ ಇನ್ನು ಮುಂದೆ ಬೇರೆ ಪಾತ್ರಗಳಲ್ಲಿ ನಟಿಸುವತ್ತ ಗಮನಹರಿಸಬಹುದು’ ಎಂದು ಪ್ರಭಾಸ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಈಗಾಗಲೇ ತಮ್ಮದೇ ಹೋಮ್ ಪ್ರೊಡಕ್ಷನ್‌ನಿಂದ ತಯಾರಾಗುತ್ತಿರುವ ‘ಪ್ರಭಾಸ್19’ ಚಿತ್ರದ ಮುಹೂರ್ತ ನೆರವೇರಿಸಿರುವ ಅವರು ಸದ್ಯ ಆ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

ಭಾಸ್ ಜತೆಗೆ ಚಿತ್ರದ ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ಸೇರಿದಂತೆ ಹಲವು ಪಾತ್ರಧಾರಿಗಳು, ತಂತ್ರಜ್ಞರು ಮತ್ತು ವಿಶೇಷವಾಗಿ ನಿರ್ದೇಶಕ ರಾಜಮೌಳಿ ಸತತವಾಗಿ ನಾಲ್ಕು ವರ್ಷ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದರು.


ಇತ್ತೀಚೆಗೆ ಬಿಡುಗಡೆಯಾದ ‘ಬಾಹುಬಲಿ; ದಿ ಕನ್‌ಕ್ಲೂಶನ್’ ಚಿತ್ರದ ಟ್ರೇಲರ್ ಭಾರಿ ಸದ್ದು ಮಾಡಿದೆ. ಏಪ್ರಿಲ್ 28ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಬದುಕೆಂಬ ನಿಶ್ಶಬ್ದ ನರ್ತನ...

ಶಿಸ್ತಿನ ಪ್ರಯೋಜನ
ಬದುಕೆಂಬ ನಿಶ್ಶಬ್ದ ನರ್ತನ...

11 Apr, 2018
‘ತಬಲಾ ರಾಜಕುಮಾರಿ’ ರಿಂಪಾ ಬರ್ತಾರೆ

ನಾದಲೋಕ
‘ತಬಲಾ ರಾಜಕುಮಾರಿ’ ರಿಂಪಾ ಬರ್ತಾರೆ

7 Apr, 2018
ಮನೆಯಲ್ಲೇ ನೀರು ಉಳಿಸಿ

ವಿಶ್ವ ಜಲ ದಿನ
ಮನೆಯಲ್ಲೇ ನೀರು ಉಳಿಸಿ

22 Mar, 2018
ಕ್ಷಮಿಸಲು ಕಾರಣ ಹಲವು...

ಮಾನಸಿಕ ನೆಮ್ಮದಿ
ಕ್ಷಮಿಸಲು ಕಾರಣ ಹಲವು...

21 Mar, 2018
ಪ್ರಶ್ನೋತ್ತರ

ಪುರವಣಿ
ಪ್ರಶ್ನೋತ್ತರ

17 Jan, 2018