ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಸಚಿವ ಸಂಪುಟದಿಂದ ಪ್ರಚಾರ ಹಾಸ್ಯಾಸ್ಪದ: ಟೀಕೆ

Last Updated 20 ಮಾರ್ಚ್ 2017, 9:11 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಜಿಲ್ಲೆಯಲ್ಲಿ ಭೀಕರ ಬರವಿದ್ದರೂ, ಈ ಕಡೆ ಬಾರದ ಸಚಿವರು ಈ ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಡಿ ಸಂಪುಟವನ್ನೇ  ಪ್ರಚಾರಕ್ಕೋಸ್ಕರ ಕರೆತರುತ್ತಿರುವುದು ಹಾಸ್ಯಸ್ಪದ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ  ಅರವಿಂದ ಲಿಂಬಾವಳಿ ಟೀಕಿಸಿದರು.

ಪಟ್ಟಣದಲ್ಲಿ ಬಿಜೆಪಿ ನೂತನ  ಕಚೇರಿಯನ್ನು  ಉದ್ಘಾಟಿಸಿದ ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಈ ರೀತಿ ಮಂತ್ರಿ ಮಂಡಲವನ್ನು ದುರುಪಯೋಗ ಮಾಡಿಕೊಂಡು ಮತ ದಾರರನ್ನು ಸೆಳೆಯಲು ಸಾಧ್ಯವಾಗುವು ದಿಲ್ಲ. ಕೇಂದ್ರ ಸರ್ಕಾರದ ಯೋಜನೆಗಳನ್ನು ರಾಜ್ಯದ ಸಾಧನೆ ಎಂದು ಬಿಂಬಿ ಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುದಾನವನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದು ದೂರಿದರು.

ಎಚ್.ಎಸ್.ಮಹದೇವಪ್ರಸಾದ್ ಅವಧಿಯಲ್ಲಿ ತಾಲ್ಲೂಕನ್ನು ಮಾದರಿ ಕ್ಷೇತ್ರವನ್ನಾಗಿಸಲು ಸಾಧ್ಯವಿದ್ದರೂ ಅಭಿವೃದ್ಧಿ ಕಾರ್ಯಗಳು ಸಮರ್ಪಕ ವಾಗಿಲ್ಲ. ಯುವಕರಿಗೆ ಉದ್ಯೋಗಾವ ಕಾಶ ದೊರಕಿಲ್ಲ.

ನಂಜುಂಡಪ್ಪ ವರದಿಯಂತೆ ತಾಲ್ಲೂಕಿಗೆ ಹಣದ ಹೊಳೆಯೇ ಹರಿದು ಬರುತ್ತಿದ್ದರೂ ಕ್ಷೇತ್ರ ನಿರೀಕ್ಷಿತ ಪ್ರಗತಿ ಕಂಡಿಲ್ಲ. ಆದ್ದರಿಂದ ಕುಟುಂಬ ರಾಜಕಾರಣ ಬಿಟ್ಟು ಮುಂಬರುವ ವಿಧಾನಸಭೆಯಲ್ಲಿ ಬಿಎಸ್‌ವೈ ಅವರನ್ನು ಮುಖ್ಯಮಂತ್ರಿಯ ನ್ನಾಗಿಸಲು ಉಪಚುನಾವಣೆಯಲ್ಲಿ ಗೆಲ್ಲಿಸಬೇಕಾಗಿದೆ ಎಂದರು.

ಮುಸ್ಲಿಂ ಜನಾಂಗದವರೂ ಗಣನೀಯ ಪ್ರಮಾಣದಲ್ಲಿ ಮೋದಿ ಯವರ ಕಾರ್ಯವೈಖರಿಯನ್ನು ಬೆಂಬಲಿ ಸಿದ್ದಾರೆ. ಬಿಜೆಪಿ ಅವರಿಗೆ ದಲಿತರ ಬೆಂಬಲವಿದೆ ಎಂಬುದನ್ನು ವಿ.ಶ್ರೀನಿವಾಸ ಪ್ರಸಾದ್ ಅವರು ನಡೆಸಿದ್ದ ಸಭೆಗಳೇ ಸಾಕ್ಷಿ. ಜಾತಿ ಧರ್ಮವನ್ನು ಮೀರಿ ಜನತೆ ಮತ ನೀಡಿದ ಪರಿಣಾಮವಾಗಿ ಉತ್ತರಭಾರತದ ರಾಜ್ಯಗಳಲ್ಲಿ ಬಿಜೆಪಿ ಕಲ್ಪನೆಗೂ ಮೀರಿದ ಯಶಸ್ಸುಗಳಿಸಲು ಸಾಧ್ಯವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT