ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸೋದ್ಯಮ ಅಭಿವೃದ್ಧಿಗೆ ‘ಗೊ ಹೆರಿಟೇಜ್‌ ರನ್‌’

Last Updated 20 ಮಾರ್ಚ್ 2017, 9:26 IST
ಅಕ್ಷರ ಗಾತ್ರ

ಹಳೇಬೀಡು: ಪರಂಪರೆ ತಾಣಗಳ ಬಗ್ಗೆ ಪರಿಚಯಿಸುವ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಗೊ ಹೆರಿಟೇಜ್‌ ರನ್‌ (ಪರಂಪರೆ ಓಟ) ಕಾರ್ಯಕ್ರಮ ಆರಂಭಿಸಲಾಗಿದೆ ಎಂದು ಆ್ಯಕ್ಟಿವ್‌ ಹೆರಿಟೇಜ್‌ ಪ್ರಮೋಷನ್‌ ಮುಖ್ಯಸ್ಥ ಅಜಯ್‌ರೆಡ್ಡಿ ತಿಳಿಸಿದರು.

ಬೆಂಗಳೂರಿನ ಆ್ಯಕ್ಟಿವ್‌ ಹೆರಿಟೇಜ್‌ ಪ್ರಮೋಷನ್‌ ಸಂಸ್ಥೆ ಹಾಗೂ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಆಶ್ರಯದಲ್ಲಿ ಹಳೇಬೀಡಿನಲ್ಲಿ ಭಾನುವಾರ ನಡೆದ ಗೊ ಹೆರಿಟೇಜ್‌ ರನ್‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವರಿಗೆ ಪರಂಪರೆ ತಾಣಗಳ ಬಗ್ಗೆ ಸಂಕ್ಷಿಪ್ತ ಪರಿಚಯ ಮಾಡಲಾಗುತ್ತದೆ ಕಾರ್ಯಕ್ರಮದಲ್ಲಿ ಭಾಗವಹಿಸು ವವರು ಮುಂಚಿತವಾಗೇ ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ತಾಣಗಳ ಸಂಕ್ಷಿಪ್ತ ಪರಿಚಯದ ಜತೆಗೆ  ಸ್ಥಳಿಯ ಕಲೆಗೆ ಆದ್ಯತೆ ನೀಡುವ ಕುರಿತು ಪ್ರವಾಸೊದ್ಯಮ ಇಲಾಖೆ ಹಾಗೂ ಆಸಕ್ತರೊಂದಿಗೆ ಮಾತುಕತೆ ನಡೆಸುತ್ತೇವೆ. ಹಳೇಬೀಡಿನಲ್ಲಿ ಪ್ರತಿವರ್ಷ ಗೊ ಹೆರಿಟೇಜ್‌ ರನ್‌ ಕಾರ್ಯಕ್ರಮ ನಡೆ ಸುವ ಗುರಿ ಹೊಂದಲಾಗಿದೆ ಎಂದರು.

ಕರ್ನಾಟಕ ಮಾತ್ರವಲ್ಲದೆ ಹೈದಾರಬಾದ್‌, ಚನ್ನೈ, ಮುಂಬೈನಿಂದ ಆಸಕ್ತರು ಭಾಗವಹಿಸಿದ್ದಾರೆ. ವಿವಿಧ ವಯೋಮಾನದ 50 ಮಂದಿ ಓಟದಲ್ಲಿ ಪಾಲ್ಗೊಂಡಿದ್ದಾರೆ. ಎರಡು ವರ್ಷದಿಂದ ಈ ಕಾರ್ಯಕ್ರಮ ಆಯೋಜಿಸ ಲಾಗುತ್ತಿದ್ದು, ಪ್ರಸಕ್ತ ವರ್ಷ ಪ್ರವಾಸೋಧ್ಯಮ ಇಲಾಖೆ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿ ಕೈಜೋಡಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಪ್ರವಾಸೋದ್ಯಮ ಉಪ ನಿರ್ದೇಶಕ ಯು.ಜಿತೇಂದ್ರನಾಥ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಹೆರಿಟೇಜ್‌ ರನ್‌ನಲ್ಲಿ ಭಾಗವಹಿಸಿದವರು ಪ್ರವಾಸಿ ತಾಣದ ಜ್ಞಾನ ಸಂಪಾದನೆ ಮಾಡುತ್ತಾರೆ.

ಇದರಿಂದ ಮತ್ತೊಬ್ಬರನ್ನು ಪ್ರವಾಸಿ ತಾಣಕ್ಕೆ ಕರೆತರುವ ಸಾಮರ್ಥ್ಯ ಪಡೆದು ಪ್ರವಾಸೋದ್ಯಮದ ರಾಯಬಾರಿಯಾಗುತ್ತಾರೆ ಎಂದರು. ಪ್ರವಾಸಿ ಅಧಿಕಾರಿ ತಮ್ಮಣ್ಣಗೌಡ, ಹೋಟೆಲ್‌ ಮಯೂರ ಶಾಂತಲಾ ವ್ಯವ ಸ್ಥಾಪಕ ರಾಜಣ್ಣ, ಪ್ರವಾಸಿ ಮಾರ್ಗದರ್ಶಿ ಅಸ್ಲಾಮ್‌ ಷರೀಫ್‌ ಇದ್ದರು.

*
ಪರಂಪರೆ ಓಟದಲ್ಲಿ ಸ್ಥಳೀಯ ಆಸಕ್ತರನ್ನು ಬಳಸಿಕೊಂಡರೆ ದೂರದಿಂದ ಬಂದವರಿಗೆ ಹೆಚ್ಚಿನ ಮಾಹಿತಿ ಲಭ್ಯವಾಗುತ್ತದೆ.
-ಎಚ್‌.ಟಿ.ಯೋಗೀಶ್‌,
ಛಾಯಾಗ್ರಾಹಕ, ಹಳೇಬೀಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT