ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ತ ಮಗನ ಹಲ್ಲು ಶುಚಿಗೊಳಿಸಿದ ತಾಯಿ ಚಿಂಪಾಂಜಿ

ಅಂತ್ಯ ಸಂಸ್ಕಾರದ ಹಿನ್ನೆಲೆ?
Last Updated 20 ಮಾರ್ಚ್ 2017, 11:49 IST
ಅಕ್ಷರ ಗಾತ್ರ
ADVERTISEMENT

ಲಂಡನ್‌: ಹುಲ್ಲುಕಡ್ಡಿ ಹಿಡಿದು ಸತ್ತ ಮಗನ ಹಲ್ಲಿನ ಸಂದಿಯಲ್ಲಿನ ಕೊಳೆಯನ್ನು ತೆಗೆಯುತ್ತಿರುವ ತಾಯಿ ಚಿಂಪಾಂಜಿ.

ದೇಹವನ್ನು ಸ್ವಚ್ಛಗೊಳಿಸಲು ಚಿಂಪಾಂಜಿ ಹುಲ್ಲುಕಡ್ಡಿಯಂತಹ ಸಾಧನ ಬಳಸಿರುವುದನ್ನು ಇದೇ ಮೊದಲ ಬಾರಿಗೆ ವಿಜ್ಞಾನಿಗಳು ಗಮನಿಸಿದ್ದಾರೆ.

ಮೃತಪಟ್ಟ ಚಿಂಪಾಂಜಿಯೊಂದರ ದೇಹ. ಸುತ್ತಲೂ ನಿಂತಿರುವ ಇತರೆ ಚಿಂಪಾಜಿಗಳು ಅದನ್ನು ಎಚ್ಚರಿಸುವ ಪ್ರಯತ್ನ, ಮತ್ತೊಂದು ಆ ದೇಹವನ್ನು ಸ್ವಚ್ಛಗೊಳಿಸುವುದರಲ್ಲಿ ಮಗ್ನ.

ಹೆಣ್ಣು ಚಿಂಪಾಜಿಯು ಮೃತ  ಪಟ್ಟಿದ್ದ ಮರಿ ಚಿಂಪಾಂಜಿಯ ಸಮೀಪ ಕುಳಿತು ದೇಹದ ಮೇಲಿನ ದೂಳನ್ನು ತೆಗೆದು, ಹಲ್ಲಿನ ಕೊಳೆಯನ್ನು ತೆಗೆಯಲು ಹುಲ್ಲುಕಡ್ಡಿ ಬಳಸಿರುವುದನ್ನು ಇಂಗ್ಲೆಂಡ್‌ನ ಸೇಂಟ್‌ ಆಂಡ್ರ್ಯೂಸ್‌ ವಿವಿಯ ವಿಜ್ಞಾನಿಗಳು ಗಮನಿಸಿದ್ದಾರೆ.

ಬಾಂಧವ್ಯ ಹೊಂದಿರುವ ಚಿಂಪಾಂಜಿಗಳು ಬದುಕಿದ್ದಾಗ ಒಂದರ ಹಲ್ಲನ್ನು ಮತ್ತೊಂದು ಶುಚಿಗೊಳಿಸುತ್ತವೆ. ಆದರೆ, ಸಾವಿನ ನಂತರದ ಈ ಪ್ರಕ್ರಿಯೆಯು ಮಾನವರು ನಡೆಸುವ ಅಂತ್ಯ ಸಂಸ್ಕಾರದ ರೂಢಿಗೆ ಹಿನ್ನೆಲೆ ಒದಗಿಸುವಂತಿದೆ ಎನ್ನಲಾಗಿದೆ.

ಜಾಂಬಿಯಾದ ‘ಚಿಂಫುನ್ಷಿ ಆರ್ಫನೇಜ್‌ ಟ್ರಸ್ಟ್‌’ನಲ್ಲಿ ಶ್ವಾಸಕೋಶದ ಸೋಂಕಿನಿಂದ ಚಿಂಪಾಂಜಿ ಮೃತಪಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT