ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿಯಲ್ಲಿ ಮುಳುಗಿದ್ದ ಸಾವಿರ ದೋಣಿಗಳಲ್ಲಿನ ಸಂಪತ್ತು ಪತ್ತೆ: ಚೀನಾ ಪುರಾತತ್ವಶಾಸ್ತ್ರಜ್ಞರು

Last Updated 20 ಮಾರ್ಚ್ 2017, 12:41 IST
ಅಕ್ಷರ ಗಾತ್ರ

ಬೀಜಿಂಗ್‌: ನದಿಯಲ್ಲಿ 300 ವರ್ಷಗಳ ಹಿಂದೆ ಮುಳುಗಿದ್ದ ಹತ್ತು ಸಾವಿರಕ್ಕೂ ಹೆಚ್ಚು ಚಿನ್ನ ಮತ್ತು ಬೆಳ್ಳಿಯ ವಸ್ತುಗಳನ್ನು ಚೀನಾದ ಪುರಾತತ್ವಶಾಸ್ತ್ರಜ್ಞರು ಪತ್ತೆ ಮಾಡಿದ್ದಾರೆ.

ಚಿನ್ನ, ಬೆಳ್ಳಿ ಮತ್ತು ಕಂಚಿನ ನಾಣ್ಯಗಳು, ಆಭರಣ ಹಾಗೂ ಕಡ್ಗ, ಭರ್ಜಿ, ಚಾಕು ಸೇರಿದಂತೆ ಕಬ್ಬಿಣದ ಆಯುಧಗಳು ದೊರೆತಿವೆ.

ಬೆಳ್ಳಿ, ಚಿನ್ನದ ಪಾತ್ರೆ ಹಾಗೂ ಆಭರಣಗಳಲ್ಲಿನ ಕುಸುರಿ ಕೆತ್ತನೆ ಇಂದಿಗೂ ಸ್ಪಷ್ಟವಾಗಿದೆ ಎಂದು ಸಿಚುವಾನ್‌ ಪ್ರಾಂತ್ಯದ ಪುರಾತತ್ವ ಸಂಶೋಧನಾ ಸಂಸ್ಥೆಯ ನಿರ್ದೇಶಕ ಗಾವೋ ಡಾಲನ್‌ ತಿಳಿಸಿದರು.

ಸಿಚುವಾನ್‌ ಪ್ರಾಂತ್ಯದ  ಮಿಂಜಿಯಾಂಗ್‌ ನದಿ ಹಾಗೂ ಜಿಂನ್‌ಜಿಯಾಂಗ್‌ ನದಿಯಲ್ಲಿ ಅಪಾರ ಸಂಪತ್ತು ದೊರೆತಿದೆ.

ಉತ್ಖನನ ಏಪ್ರಿಲ್‌ ವರೆಗೂ ಮುಂದುವರಿಯುವುದಾಗಿ ತಜ್ಞರು ತಿಳಿಸಿದರು.

1,000 ದೋಣಿಗಳಲ್ಲಿ...
1646ರಲ್ಲಿ ನಾಯಕ ಝಾಂಗ್‌ ಕ್ಸಿಯಾನ್‌ಝಾಂಗ್‌ 1,000 ದೋಣಿಗಳ ಮೂಲಕ ದಕ್ಷಿಣದ ಕಡೆಗೆ ಸಂಪತ್ತು ಸಾಗಿಸುವಾಗ ಮಿಂಗ್‌ ಸಾಮ್ರಾಜ್ಯದ ಯೋಧರಿಂದ ಸೋಲು ಅನುಭವಿಸುತ್ತಾನೆ. ಈ ಹೋರಾಟದಲ್ಲಿ ಹಣ ಹಾಗೂ ಬೆಲೆ ಬಾಳುವ ವಸ್ತುಗಳನ್ನು ಹೊಂದಿದ್ದ ದೋಣಿಗಳು ನದಿಯಲ್ಲಿ ಮುಳುಗಡೆಯಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT