ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಯಂ ಭಕ್ಷಕಗಳು

ಅಚ್ಚರಿ
Last Updated 20 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಹೊಟ್ಟೆ ಹಸಿವಿನಿಂದ ಚುರುಗುಡುತ್ತಿದ್ದೆ. ತಿನ್ನೋಕೆ ಏನೂ ಇಲ್ಲ. ಅಂಥ ಸಂದರ್ಭದಲ್ಲಿ ನಮ್ಮ ದೇಹದ ಭಾಗಗಳನ್ನೇ ಒಂದೊಂದಾಗಿ ತಿಂದರೆ?

ಊಹಿಸಿಕೊಳ್ಳುವುದೂ ಕಷ್ಟ ಅಲ್ಲವೆ. ಆದರೆ ವರ್ಷವರ್ಷಗಳಿಂದ ನಾವು ಮಾಡುತ್ತಿರುವುದು ಇದನ್ನೇ! ಹೇಗೆ ಅಂತೀರಾ, ನಮ್ಮ ದೇಹದಲ್ಲಿರುವ ಜೀವಕೋಶಗಳ ಮೂಲಕ.

ಜೀವಂತ ಕೋಶಗಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದರೆ ಅಂಥ ಸಂದರ್ಭದಲ್ಲಿ ದೇಹದಲ್ಲಿರುವ ಅನಗತ್ಯ ಹಾಗೂ ಕೆಲಸಕ್ಕೆ ಬಾರದ ಭಾಗಗಳನ್ನು  (ಕಾಂಪೊನೆಂಟ್ಸ್‌) ಕೋಶಗಳು ತಿನ್ನುತ್ತವೆ. ಇದರಿಂದ ಎಮಿನೊ ಆಮ್ಲ ಹಾಗೂ ಅಗತ್ಯ ಪೌಷ್ಟಿಕಾಂಶ ಉತ್ಪತ್ತಿಯಾಗಿ ಕೋಶಗಳಿಗೆ ಶಕ್ತಿ ದೊರೆತು, ಅವು ಸಹಜ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಸಾಧ್ಯವಾಗುತ್ತದೆ. ಈ ಕ್ರಿಯೆಗೆ ಸ್ವಯಂ ಭಕ್ಷಣೆ (autophagy) ಎನ್ನಲಾಗುತ್ತದೆ.

ಸ್ವಯಂ ಭಕ್ಷಣೆಯಿಂದಾಗಿ ಕೋಶಗಳು ಹಸಿವಿನಿಂದ ರಕ್ಷಣೆ ಪಡೆಯುವುದಷ್ಟೇ ಅಲ್ಲ, ಸಮತೋಲನವನ್ನೂ ಕಾಪಾಡಿಕೊಳ್ಳುತ್ತವೆ. ಈ ಕ್ರಿಯೆಯೇ ಕೋಶಗಳ ದೀರ್ಘಾಯುಷ್ಯದ ಗುಟ್ಟು. 

ಸ್ವಯಂಭಕ್ಷಣೆಯಿಂದಾಗಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಒಂದು ವೇಳೆ ಈ ಪ್ರಕ್ರಿಯೆಯಲ್ಲಿ ಸಮಸ್ಯೆ ಇದ್ದಲ್ಲಿ ಪಾರ್ಕಿನ್‌ಸನ್‌ನಂಥ ನರಸಂಬಂಧಿ ಕಾಯಿಲೆ ಉಂಟಾಗುವ ಸಾಧ್ಯತೆಯೂ ಹೆಚ್ಚು. ಸ್ವಯಂಭಕ್ಷಕಗಳು, ಕೋಶಗಳು ಹಾಗೂ ಜೀವಕಣಗಳನ್ನು ಆರೋಗ್ಯವಾಗಿಡುತ್ತವೆ. ದೋಷಯುಕ್ತ ಕೋಶಗಳನ್ನು ಹಾಗೂ ದೋಷಯುಕ್ತ ಪ್ರೊಟೀನ್‌ ಅಂಶಗಳನ್ನು ತೆಗೆದುಹಾಕಿ ದೇಹವನ್ನು ಸೋಂಕು ಹಾಗೂ ಕ್ಯಾನ್ಸರ್‌ನಿಂದ ರಕ್ಷಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT