ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಬಾಟಲ್‌ ಹೌಸ್

Last Updated 20 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಬಳಸಿ ಬಿಸಾಡಿದ ವಸ್ತುಗಳನ್ನು ಪುನರ್ಬಳಕೆ ಮಾಡುವುದು, ಅವುಗಳಿಂದ ಚಿಕ್ಕಪುಟ್ಟ ಗೃಹೋಪಯೋಗಿ ವಸ್ತುಗಳನ್ನು ತಯಾರಿಸುವುದು ರೂಢಿಯಲ್ಲಿದೆ.

ಆದರೆ, ಇಂತಹ ಪುನರ್ಬಳಕೆ ಮಾಡಬಹುದಾದ ವಸ್ತುಗಳಿಂದಲೇ ಅರ್ಜೆಂಟೀನಾದ ಟಿಯೊಟೊ ಇಂಜಿನೇರಿ ಎಂಬುವವರು ವಾಸಯೋಗ್ಯ ಮನೆಯೊಂದನ್ನು ನಿರ್ಮಿಸಿದ್ದಾರೆ.

ಇಷ್ಟಕ್ಕೂ ಅವರು ಬಳಸಿರುವುದು ಪ್ಲಾಸ್ಟಿಕ್‌ ಅಥವಾ ಕಬ್ಬಿಣದ ವಸ್ತುಗಳನ್ನಲ್ಲ. ಬಳಸಿ ಬಿಸಾಕಿದ ಗಾಜಿನ ಬಾಟಲಿಗಳನ್ನು!

ಎಲ್ಲರಂತೆ ಇಂಜಿನೇರಿ ಅವರಿಗೂ ಸ್ವಂತ ಮನೆ ಕಟ್ಟಿಕೊಳ್ಳುವ ಆಸೆ ಇತ್ತಂತೆ. ಆದರೆ ಕೈಯಲ್ಲಿ ಸಾಕಷ್ಟು ಹಣ ಇರಲಿಲ್ಲ. ಆಗ ಅವರಿಗೆ ಹೊಳೆದದ್ದೇ ಈ ಬಾಟಲಿ ಮನೆ. ಈ ವಿನೂತನ ಕಲ್ಪನೆಯನ್ನು ಜನರ ಜತೆ ಹಂಚಿಕೊಂಡರು. ಆಗ ಜನ ತಮ್ಮಲ್ಲಿರುವ ಖಾಲಿ ಬಾಟಲಿಗಳನ್ನು ಉದಾರವಾಗಿ ನೀಡಿದರು. ಅವರೀಗ ಬಾಟಲಿ ಮನೆಯ ಒಡೆಯ.

‘ಪರಿಸರ ಸ್ನೇಹಿಯಾಗಿ ಮತ್ತು ವಿನೂತನವಾಗಿ ಬಾಟಲಿ ಮನೆ ನಿರ್ಮಿಸಿಕೊಳ್ಳಬೇಕೆಂಬ ಆಸೆ ಇರುವವರು ನನ್ನನ್ನು ಸಂಪರ್ಕಿಸಿದರೆ ತರಬೇತಿ ನೀಡುತ್ತೇನೆ‘ ಎನ್ನುತ್ತಾರೆ ಅವರು.

‘ಈ ಮನೆ ನನ್ನದು ಎಂದು ನಾನು ಹೇಳಿಕೊಳ್ಳುವುದಿಲ್ಲ. ಕ್ವಿಲಿಮ್ಸ್ ಪಟ್ಟಣದ ಜನ ನನ್ನ ಮನೆ ನಿರ್ಮಾಣಕ್ಕೆ ಬಾಟಲಿಗಳನ್ನು ನೀಡಿದ್ದಾರೆ’ ಎಂದು ಇಂಜಿನೇರಿ ಕೃತಜ್ಞತೆಯಿಂದ ಹೇಳುತ್ತಾರೆ.

**

19  ವರ್ಷ: ಮನೆ ನಿರ್ಮಾಣಕ್ಕೆ ತೆಗೆದುಕೊಂಡ ಅವಧಿ

**

60 ಲಕ್ಷ ಬಾಟಲಿಗಳಿಂದ ಮನೆ ನಿರ್ಮಾಣ

**

ಎಲ್ಲಿದೆ?: 
ಈ ಬಾಟಲ್ ಹೌಸ್‌ ಇರುವುದು ಅರ್ಜೆಂಟೀನಾದ ಕ್ವಿಲಿಮ್ಸ್‌ ಪಟ್ಟಣದಲ್ಲಿ

*  ಇದರ ನಿರ್ಮಾಣಕ್ಕೆ ಗಾಜಿನ ಬೀರ್ ಬಾಟಲಿಗಳನ್ನು ಮಾತ್ರ ಬಳಸಲಾಗಿದೆ

*  ಗೋಡೆಗಳಲ್ಲಿ ಇಟ್ಟಿಗೆಗಳ ಬದಲು ಗಾಜಿನ ಬಾಟಲಿಗಳಿವೆ

*  ಕಿಟಕಿಗಳ ಜಾಗದಲ್ಲಿ ಕಾರಿನ ಗಾಲಿಗಳ ರಿಮ್‌ಗಳನ್ನು ಕೂರಿಸಲಾಗಿದೆ

*  ಗುಜರಿ ವ್ಯಾನ್‌, ಸೈಕಲ್‌ಗಳನ್ನೂ ಮನೆಗೆ ಆಧಾರವಾಗಿ ಬಳಸಿಕೊಳ್ಳಲಾಗಿದೆ

*  ಚಂಡಮಾರುತ, ಬಿರುಗಾಳಿ ಬರುವ ಮುನ್ಸೂಚನೆಯನ್ನೂ ಈ ಮನೆ ನೀಡುತ್ತದೆ. ಬಿರುಗಾಳಿ ಬೀಸಿದರೆ  ಬಾಟಲಿಗಳಲ್ಲಿ ಗಾಳಿ ತುಂಬಿಕೊಂಡು ಶಬ್ದ ಬರುತ್ತದೆ. ಗಾಳಿ ಹೆಚ್ಚಾದಷ್ಟೂ ಶಬ್ದ ಹೆಚ್ಚಾಗುತ್ತದೆ.

*  ಮನೆಯಷ್ಟೇ ಅಲ್ಲದೆ ಕಾಂಪೌಂಡ್‌, ಬಾವಿ ಕಟ್ಟೆ ಎಲ್ಲವಕ್ಕೂ ಗಾಜಿನ ಬಾಟಲಿಗಳೇ ಬಳಕೆಯಾಗಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT