ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಟ್‌ನಲ್ಲಿ ಈರುಳ್ಳಿ ಬೆಳೆಯಿರಿ...

ಎಣಿಕೆ ಗಳಿಕೆ
Last Updated 20 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ADVERTISEMENT

ಒಂದು ಗ್ಲಾಸ್‌ ತೆಗೆದುಕೊಳ್ಳಿ. ಆ ಗ್ಲಾಸ್‌ನಲ್ಲಿ ಶೇ80ರಷ್ಟು ನೀರು ಭರ್ತಿ ಮಾಡಿಕೊಳ್ಳಿ.

**

ಒಂದು ಈರುಳ್ಳಿ ತೆಗೆದುಕೊಳ್ಳಿ. ಈ ಈರುಳ್ಳಿಯ ತುದಿಯನ್ನು ಕತ್ತರಿಸಬಾರದು. ಅದಕ್ಕೆ ಬೇರು ಹಾಗೂ ಚಿಕ್ಕ ಜುಟ್ಟು ಇರಬೇಕು.

**

ಒಂದು ಟೂತ್‌ಪಿಕ್‌ನಿಂದ ನಾಲ್ಕೂ ಬದಿಯಲ್ಲಿ ಚಿಕ್ಕ ರಂಧ್ರ ಮಾಡಬೇಕು. ಒಂದು ವೇಳೆ ಟೂತ್‌ಪಿಕ್‌ ಇಲ್ಲದೇ ಹೋದರೆ ಬಾಟಲಿಯ ಮೇಲೆ ಒಂದು ತಂತಿಯನ್ನು ಚಿತ್ರದಲ್ಲಿ ತೋರಿಸಿರುವಂತೆ ಇಡಿ. ರಂಧ್ರ ಮಾಡುವ ಅಥವಾ ತಂತಿ ಇಡುವ ಕಾರಣವೆಂದರೆ ಈರುಳ್ಳಿಯ ಬೇರು ಮಾತ್ರ ನೀರಿನಲ್ಲಿ ನೆನೆಯಬೇಕು ಎನ್ನುವುದು. ಬೇರು ಬಿಟ್ಟು ಉಳಿದ ಭಾಗ ನೆನೆಯಬಾರದು.

**

ಎರಡು ದಿನ ಹಾಗೆಯೇ ಬಿಡಿ. ಎರಡು ದಿನಗಳ ನಂತರ ಅದನ್ನು ಗ್ಲಾಸ್‌ನಿಂದ ತೆಗೆಯಿರಿ. ನಂತರ ಅದನ್ನು ಮಣ್ಣು ಇರುವ ಕುಂಡದಲ್ಲಿ ನೆಡಬೇಕು. ಬೇರು ಮಾತ್ರ ಮಣ್ಣಿನ ಒಳಗೆ ಇದ್ದು ಉಳಿದ ಭಾಗ ಮೇಲೆ ಇರಬೇಕು. ಅದಕ್ಕೆ ನೀರು ಹಾಕುತ್ತಲೇ ಇರಬೇಕು.

**

ಕೆಲವು ದಿನಗಳ ನಂತರ ಮೇಲೆ ಎಲೆಗಳು ಬರಲು ಆರಂಭಿಸುತ್ತವೆ. ಕೆಳಗಡೆ ಬೇರು ಆಳವಾಗಿ ಮಣ್ಣಿನ ಒಳಗೆ ಹೋಗುತ್ತದೆ .

**

ಅದನ್ನು ಬೇರು ಸಹಿತ ನಿಧಾನವಾಗಿ ಕೀಳಬೇಕು. ಕಿತ್ತ ನಂತರ ಚಿಕ್ಕ ಕುಂಡದಲ್ಲಿ ನೆಡಬೇಕು. ನೆಡುವ ಮೊದಲು ಆ  ಕುಂಡದಲ್ಲಿ ಸ್ವಲ್ಪ ಕೋಕೊಪಿಟ್‌, ಮರಳು ತುಂಬಿಸಬೇಕು.  ಅದರಲ್ಲಿ ಈರುಳ್ಳಿ ನೆಟ್ಟು ಮೇಲಿನಿಂದ ಪುನಃ ಮಣ್ಣು ಹಾಕಬೇಕು

**

ದಿನವೂ ನೀರು ಹಾಕುತ್ತಾ ಬನ್ನಿ. ಆದರೆ ತುಂಬಾ ನೀರು ಹಾಕಬಾರದು. ಇದನ್ನು ಅಡುಗೆ ಮನೆ ಸಮೀಪ ಇಟ್ಟುಕೊಳ್ಳಬಹುದು.

**

ವಿಡಿಯೊ ಕೊಂಡಿ: goo.gl/VIVem5

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT